ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪೂರ್ಣ ಲಸಿಕೆ ಪಡೆದವರಿಗೆ ಕೆನಡಾಗೆ ತೆರಳಲು ಅವಕಾಶ

|
Google Oneindia Kannada News

ಸಂಪೂರ್ಣ ಕೊರೊನಾ ಲಸಿಕೆ ಪಡೆದವರಿಗೆ ಕೆನಡಾಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.

ಪ್ರವಾಸ ಸೇರಿದಂತೆ ಅನಿವಾರ್ಯವಲ್ಲದ ಉದ್ದೇಶಗಳಿಗಾಗಿ ಕೆನಡಾಗೆ ಬರುವ ವಿದೇಶಿ ಪ್ರಜೆಗಳಿಗೂ ಅವಕಾಶ ನೀಡಲಾಗಿದೆ. ಕೆನಡಾ ಸರ್ಕಾರದ ಪ್ರಕಾರ, ವಿದೇಶಗಳಿಂದ ಬರುವ ಪ್ರಯಾಣಿಕರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವ ಅಗತ್ಯವಿಲ್ಲ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ವೈರಾಣುಗಳ ಅನುಕ್ರಮಣಿಕೆ ವ್ಯತ್ಯಾಸಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ವೈರಾಣುಗಳ ಅನುಕ್ರಮಣಿಕೆ ವ್ಯತ್ಯಾಸ

ಕೆನಡಾದಲ್ಲಿ ವಾಸಿಸುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಆದರೆ ಕೊರೊನಾ ಕಾರಣಗಳಿಂದಾಗಿ ತಮ್ಮ ದೇಶಗಳಿಗೆ ಮರಳಿ ಹಿಂದಿರುಗಲು ಸಾಧ್ಯವಾಗದೆ ಅಲ್ಲೇ ಉಳಿದಿರುವ ಹಲವು ಮಂದಿಗೆ ಇದು ವರದಾನವಾಗಿದೆ.

Canada To Reopen For Fully Vaccinated Passengers From September 07

ಕೆನಡಾ ಸರ್ಕಾರದ ಮಾರ್ಗಸೂಚಿಗಳೇನು?
*ಸಂಪೂರ್ಣ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರು ಅನಿವಾರ್ಯವಲ್ಲದ ಕಾರಣಗಳಿಗಾಗಿ ಕೆನಡಾ ಪ್ರವೇಶಿಸಲು ಕೂಡ ಅರ್ಹರಾಗಿರುತ್ತಾರೆ.
*ಕೆನಡಾ ಪ್ರವೇಶಿಸುವ ಕನಿಷ್ಠ 15 ದಿನಗಳ ಮೊದಲು ಸರ್ಕಾರವು ಅನುಮೋದಿಸಿದ ಲಸಿಕೆಯ ಸಂಪೂರ್ಣ ದಾಖಲೆಯನ್ನು ತೋರಿಸಬೇಕು.
*ಫೈಜರ್, ಬಯೋಟೆಕ್, ಮಾಡೆರ್ನಾ, ಅಸ್ಟ್ರಾಜೆನೆಕಾ/ಕೋವಿಶೀಲ್ಡ್ ಹಾಗೂ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆ ಪಡೆದವರು ಅರ್ಹರಾಗಿರುತ್ತಾರೆ.
*72 ಗಂಟೆಗಳ ಒಳಗಾಗಿ ಮಾಡಿಸಿದ ಕೊರೊನಾ ನೆಗೆಟಿವ್ ವರದಿ ಇರಬೇಕು
*ಅಥವಾ ಆಗಮನಕ್ಕೆ 14 ಮತ್ತು 180 ದಿನಗಳ ಮೊದಲು ತೆಗೆದುಕೊಂಡ ವರದಿಯನ್ನೂ ತೋರಿಸಬಹುದು.
*ಆಂಟಿಜನ್ ಅಥವಾ ರಾಪಿಡ್ ಪರೀಕ್ಷಾ ವರದಿ ಸ್ವೀಕರಿಸುವುದಿಲ್ಲ
*ಪ್ರಯಾಣಿಕರಿಗೆ ಕೊರೊನಾದ ಯಾವುದೇ ಲಕ್ಷಣಗಳಿರಬಾರದು
*ಲಸಿಕೆ ಪಡೆಯದ ಮಕ್ಕಳು ಕೆನಡಾಗೆ ಬಂದ ಮೊದಲ ದಿನ ಹಾಗೂ ಎಂಟನೇ ದಿನ ಕೊರೊನಾ ಪರೀಕ್ಷೆ ಮಾಡಿಸಬೇಕು.

ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ಸೆಪ್ಟೆಂಬರ್​ 30ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ. ಅದರ ಅನ್ವಯ, ಸೆಪ್ಟೆಂಬರ್​ 30ರವರೆಗೆ ಭಾರತದಿಂದ ಯಾವುದೇ ವಿಮಾನಗಳೂ ಬೇರೆ ರಾಷ್ಟ್ರಗಳಿಗೆ ಹಾರಾಟ ಮಾಡುವುದಿಲ್ಲ.

ಹಾಗೇ, ಬೇರೆ ದೇಶಗಳ ವಿಮಾನಕ್ಕೂ ಭಾರತಕ್ಕೆ ಪ್ರವೇಶ ಇರುವುದಿಲ್ಲ. ಕೆಲವು ವಿಶೇಷ ವಿಮಾನಗಳನ್ನು ಹೊರತುಪಡಿಸಿದರೆ, ಉಳಿದಂತೆ ಕಳೆದ ವರ್ಷ ಮಾರ್ಚ್​ 23ರಿಂದಲೂ ಅಂತಾರಾಷ್ಟ್ರೀಯ, ಪ್ರಯಾಣಿಕರ ವಿಮಾನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ 2021ರ ಆಗಸ್ಟ್ 31ಕ್ಕೆ ಮುಗಿಯಬಹುದು ಎಂದು ಹೇಳಲಾಗಿತ್ತು. ಆದರೆ ಕೊವಿಡ್​ 19 (ಪರಿಸ್ಥಿತಿ ಇನ್ನೂ ಹಾಗೇ ಇರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್​ 30ರವರೆಗೆ ವಿಸ್ತರಿಸಲಾಗಿದೆ.

ಈ ಬಗ್ಗೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ. ಅಂತಾರಾಷ್ಟ್ರೀಯ ಸರಕು ವಿಮಾನಗಳು ಮತ್ತು ಡಿಜಿಸಿಎಯಿಂದ ಅನುಮೋದನೆ ಪಡೆದ ವಿಶೇಷ ವಿಮಾನಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳಿಗೂ ಸೆಪ್ಟೆಂಬರ್​ 30ರವರೆಗೆ ನಿರ್ಬಂಧ ಇರುತ್ತದೆ ಎಂದು ಹೇಳಲಾಗಿದೆ.

ಭಾರತವು ಯುಎಸ್​, ಯುಕೆ, ಯುಎಇ, ಮಾಲ್ಡೀವ್ಸ್​, ನೆದರ್​ಲ್ಯಾಂಡ್​, ಫ್ರಾನ್ಸ್​, ಜರ್ಮನಿ, ಕತಾರ್​​, ಭೂತಾನ್​ ಸೇರಿ 28 ದೇಶಗಳೊಂದಿಗೆ ಏರ್​ ಬಬಲ್​ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಕೊವಿಡ್​ 19 ಸಂದರ್ಭದಲ್ಲೂ ಈ ದೇಶಗಳ ಮಧ್ಯೆ ವಿಶೇಷ ವಿಮಾನ ಸಂಚಾರ ನಡೆಯಲಿದೆ. ಈ ವಿಶೇಷ ವಿಮಾನಗಳ ಮೂಲಕ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ.

English summary
The Canadian government is all set to ease international travel restrictions from today for fully vaccinated individuals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X