ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾದಲ್ಲಿ ಮಾರಕ ಉಷ್ಣ ಗಾಳಿಗೆ 134 ಮಂದಿ ಬಲಿ

|
Google Oneindia Kannada News

ಕೆನಡಾದಲ್ಲಿ ಉಷ್ಣ ಗಾಳಿ ಬೀಸುತ್ತಿದ್ದು, ಕಳೆದ ಶುಕ್ರವಾರದವರೆಗೆ ಕನಿಷ್ಠ 134 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದೇ ಮೊದಲ ಬಾರಿಗೆ ಕೆನಡಾದಲ್ಲಿ 49.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಈ ಕುರಿತು ಸಿಟಿ ಪೊಲೀಸ್ ಹಾಗೂ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ, ಕಳೆದ ಶುಕ್ರವಾರ ಒಂದೇ ದಿನದಲ್ಲಿ ಉಷ್ಣ ಗಾಳಿಯಿಂದಾಗಿ 658 ಮಂದಿ ಏಕಾಏಕಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕೆನಡಾವು ಸತತ ಮೂರನೇ ದಿನ ಹೊಸ ಸಾರ್ವಕಾಲಿಕ ಅಧಿಕ ತಾಪಮಾನವನ್ನು ಸ್ಥಾಪಿಸಿದೆ.ಲಿಟ್ಟನ್‌ನಲ್ಲಿ 49.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದೆ. ವ್ಯಾಂಕೋವರ್‌ ಈ ರೀತಿಯ ಉಷ್ಣ ಗಾಳಿಯನ್ನು ಎಂದಿಗೂ ಅನುಭವಿಸಿರಲಿಲ್ಲ. ದಿನದಲ್ಲಿ ಡಜನ್‌ಗಟ್ಟಲೆ ಮಂದಿ ಸಾವನ್ನಪ್ಪುತ್ತಿರುವುದು ಆತಂಕ ಮೂಡಿಸಿದೆ.

Canada Sees Record 49.5 Degrees, Scores Dead In Gruelling Heat Wave

ವರ್ಷದಿಂದ ವರ್ಷಕ್ಕೆ ಹವಮಾನ ಬದಲಾವಣೆಯಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಕಂಡುಬರುತ್ತಿದೆ. 2019ರಲ್ಲಿ ಕೂಡ ಹೆಚ್ಚು ತಾಪಮಾನ ದಾಖಲಾಗಿತ್ತು, ಆದರೆ ಈ ಬಾರಿ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.

ವ್ಯಾಂಕೋವರ್‌ನಲ್ಲಿ ಸಾಮಾನ್ಯವಾಗಿ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತಿತ್ತು ಆದರೆ ಇದೇ ಮೊದಲ ಬಾರಿ 49 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ದೇಶದ ಇತಿಹಾಸದ ಗರಿಷ್ಠ ಉಷ್ಣಾಂಶವನ್ನು ಕೆನಡಾ ದಾಖಲಿಸಿದೆ. ಬ್ರಿಟಿಷ್ ಕೊಲಂಬಿಯಾದ ಲಿಟ್ಟನ್ ನಗರದಲ್ಲಿ ಸತತ ಮೂರನೇ ದಿನ ಗರಿಷ್ಠ ತಾಪಮಾನ ದಾಖಲಾಗಿದ್ದು,ಪಾದರಸ ಮಟ್ಟ 49.5 ಡಿಗ್ರಿ ಸೆಲ್ಸಿಯಸ್ ತಲುಪಿದೆ. ದೇಶದ ಪಶ್ಚಿಮದಲ್ಲಿ ಮತ್ತು ಯುಎಸ್ ಫೆಸಿಫಿಕ್ ವಾಯುವ್ಯದಲ್ಲಿ ಮಾರಕ ಉಷ್ಣಗಾಳಿ ಬೀಸುತ್ತಿದೆ.

ಸಂಜೆ 4.20ಕ್ಕೆ ಲಿಟ್ಟನ್ ಹವಾಮಾನ ಕೇಂದ್ರ 49.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ವರದಿ ಮಾಡಿದೆ. ಮತ್ತೊಮ್ಮೆ ದೈನಿಕ ಸಾರ್ವಕಾಲಿಕ ಗರಿಷ್ಠ ಉಷ್ಣಾಂಶದ ದಾಖಲೆ ಸತತ ಮೂರನೇ ಬಾರಿಗೆ ಸೃಷ್ಟಿಯಾಗಿದೆ ಎಂದು ಕೆನಡಾದ ಪರಿಸರ ಮತ್ತು ಹವಾಮಾನ ಬದಲಾವಣೆ ವಿಭಾಗ ಟ್ವೀಟ್ ಮಾಡಿದೆ. ಲಿಟ್ಟನ್‌ನಲ್ಲಿ ಮಂಗಳವಾರ ದಾಖಲಾದ ಉಷ್ಣಾಂಶ 121 ಡಿಗ್ರಿ ಫ್ಯಾರನ್‌ಹೀಟ್ ಎಂದು ಪ್ರಕಟಿಸಿದೆ.

English summary
Scores of deaths in Canada's Vancouver area are likely linked to a grueling heat wave, authorities said Tuesday, as the country recorded its highest ever temperature amid scorching conditions that extended to the US Pacific Northwest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X