ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ತಿಂಗಳ ಬಳಿಕ ಕೆನಡಾದಿಂದ ಭಾರತಕ್ಕೆ ನೇರ ವಿಮಾನ ಹಾರಾಟ

|
Google Oneindia Kannada News

ಕೆನಡಾದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಏರ್ ಕೆನಡಾ, ಸುಮಾರು 5 ತಿಂಗಳ ಬಳಿಕ ಇದೀಗ ಭಾರತ ಹಾಗೂ ಕೆನಡಾ ನಡುವೆ ವಿಮಾನಯಾನವನ್ನು ಪುನರಾರಂಭಿಸಿದೆ.

ವಿಮಾನವು ದೆಹಲಿ ಹಾಗೂ ಟಿರೊಂಟೊ ನಡುವೆ ಹೊಸ ಮಾರ್ಗಸೂಚಿಗಳೊಂದಿಗೆ ಹಾರಾಟ ನಡೆಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿತ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗಷ್ಟೇ ಅನುಮತಿ ನೀಡಲಾಗುತ್ತದೆ. ಜತೆಗೆ 18 ಗಂಟೆಗಳೊಳಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿರಬೇಕು.

ಆ. 21ರವರೆಗೆ ಭಾರತದ ವಿಮಾನಗಳಿಗೆ ನಿಷೇಧ ಹೇರಿದ ಕೆನಡಾಆ. 21ರವರೆಗೆ ಭಾರತದ ವಿಮಾನಗಳಿಗೆ ನಿಷೇಧ ಹೇರಿದ ಕೆನಡಾ

ಏರ್‌ ಕೆನಡಾ ವಿಮಾನದಲ್ಲಿ ಸಂಚರಿಸಲು ಆರ್‌ಟಿಪಿಸಿಆರ್ ಅಥವಾ ರಾಪಿಡ್ ಪರೀಕ್ಷೆ ಮಾಡಿರುವ ನೆಗೆಟಿವ್ ವರದಿ ಇರಬೇಕು. ಇಂದಿರಾಗಾಂಧಿ ಏರ್‌ಪೋರ್ಟ್‌ನ ಟರ್ಮಿನಲ್ 3ರಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವಿದೆ.

Canada Resumes Direct Flights To India After 5 Months

ಯಾವ್ಯಾವ ಲಸಿಕೆ ಪಡೆದವರು ಕೆನಡಾಗೆ ತೆರಳಲು ಅರ್ಹರು.
-ಫಜರ್-ಬಯೋ ಎನ್‌ಟೆಕ್
-ಮಾಡೆರ್ನಾ
-ಆಸ್ಟ್ರಾಜೆನೆಕಾ
-ಜಾನ್ಸನ್ & ಜಾನ್ಸನ್
ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ಪ್ರಯಣಿಕರ ಮಾಹಿತಿ ಹಾಗೂ ಅಪ್‌ಡೇಟ್‌ಗಳನ್ನು ಪರೀಕ್ಷಿಸಲು ದಯವಿಟ್ಟು ಕೆನಡಾ ಸರ್ಕಾರದ ವೆಬ್‌ಸೈಟ್ www.canada.caಗೆ ಭೇಟಿ ನೀಡಿ.

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಭಾರತದಿಂದ ಬರುವ ಎಲ್ಲಾ ವಾಣಿಜ್ಯ ವಿಮಾನಗಳ ಸಂಚಾರವನ್ನು ಏಪ್ರಿಲ್ 23ರಿಂದ ಕೆನಡಾ ಸ್ಥಗಿತಗೊಳಿಸಿತ್ತು. ಸೆಪ್ಟೆಂಬರ್ 21ರವರೆಗೆ ನಿರ್ಬಂಧಗಳು ಮುಂದುವರೆದಿತ್ತು.

ಕೋವಿಡ್ 19 ಮೂರನೇ ಭೀತಿ ಹಿನ್ನೆಲೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳನ್ನು ಸೆ.30ವರೆಗೆ ರದ್ದುಗೊಳಿಸಲಾಗಿದೆ.

ಕೋವಿಡ್ 19, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ 23 ರಿಂದ ಭಾರತದಿಂದ ಹೊರಡುವ ಮತ್ತು ಆಗಮಿಸುವಂತ ಎಲ್ಲಾ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದೆ.

ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳು ಆಗಸ್ಟ್ 31 ಕೊನೆಗೊಳ್ಳಬೇಕಿತ್ತು. ಆದಗ್ಯೂ, ಮೂರನೇ ಅಲೆಯ ಕಳವಳಗಳ ನಡುವೆ ಅಮಾನತು ಮತ್ತಷ್ಟು ವಿಸ್ತರಿಸಲಾಗಿದೆ.

ಇತ್ತೀಚಿನ ಸುತ್ತೋಲೆಯ ಪ್ರಕಾರ ಸೆಪ್ಟೆಂಬರ್ 30 2021 ಭಾರತೀಯ ಪ್ರಯಾಣಿತ ಸಮಯ 23.59 ಗಂಟೆಯವರೆಗೆ ನಿಷೇಧ ಜಾರಿಯಲ್ಲಿರಲಿದೆ.

English summary
Air Canada, which is the largest airline in Canada has resumed its direct flight between India and Canada after a gap of almost 5 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X