ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾ: ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಕೆ

|
Google Oneindia Kannada News

ಕೆನಡಾದಲ್ಲಿ ಮಾರ್ಚ್‌ ತಿಂಗಳಿಂದೀಚೆಗೆ ಮೊದಲ ಬಾರಿಗೆ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ ಯಾರೂ ಕೂಡ ಮೃತಪಟ್ಟಿಲ್ಲ ಎಂಬುದು ವರದಿಯಾಗಿದೆ.ಸೆಪ್ಟೆಂಬರ್ 11ರವರೆಗೆ ಕೆನಡಾದಲ್ಲಿ 9163 ಮಂದಿ ಸಾವನ್ನಪ್ಪಿದ್ದಾರೆ.

ಸೆಪ್ಟೆಂಬರ್ 11 ರಂದು 702 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಒಟ್ಟು 135,626 ಪ್ರಕರಣಗಳಿವೆ.ಸಾಕಷ್ಟು ಕಡೆ ಕೊರೊನಾ ಲಾಕ್‌ಡೌನ್ ಸಡಿಲಗೊಳಿಸಲಾಗಿದ್ದು, ಶಾಲೆಗಳು ಆರಂಭವಾಗಿವೆ. ಹೊಸ ಕೊರೊನಾ ಪ್ರಕರಣಗಳ ಕುರಿತು ಹೈಅಲರ್ಟ್‌ನಲ್ಲಿರುವಂತೆ ಸೂಚಿಸಲಾಗಿದೆ. ಅಕ್ಕಪಕ್ಕದ ದೇಶಗಳಿಗೆ ಹೋಲಿಸಿದರೆ ಕೆನಡಾದಲ್ಲಿ ಪರಿಸ್ಥಿತಿ ಅಷ್ಟು ಹದಗೆಟ್ಟಿಲ್ಲ. ಅಮೆರಿಕದಲ್ಲಿ 190,000 ಮಂದಿ ಸಾವನ್ನಪ್ಪಿದ್ದಾರೆ. 6.38 ಮಿಲಿಯನ್ ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ಭಾರತದಲ್ಲಿ 45 ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ ಭಾರತದಲ್ಲಿ 45 ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ಸಾರ್ಸ್ ರೋಗ ಬಂದಾಗ ಕೆನಡಾದಲ್ಲಿ 44 ಮಂದಿ ಮೃತಪಟ್ಟಿದ್ದರು. ಮೊದಲ ಬಾರಿಗೆ ಟೊರೊಂಟೋದಲ್ಲಿ ಜನವರಿ ತಿಂಗಳಿನಲ್ಲಿ ಮೊದಲ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿತ್ತು.

Canada Reports Zero COVID-19 Deaths For First Time

ಮಾರ್ಚ್ ಮಧ್ಯಂತರದಲ್ಲಿ ಸೋಂಕು ವಿಪರೀತವಾಗಿತ್ತು ಹೀಗಾಗಿ ಗಡಿಯನ್ನು ಬಂದ್ ಮಾಡಲಾಗಿತ್ತು.ಸ್ಪುಟ್ನಿಕ್ 5 ಲಸಿಕೆಯ ಮೂರನೇ ಹಂತದ ಪ್ರಯೋಗ ಮತ್ತು ಲಸಿಕೆ ತಯಾರಿಕೆ ಕುರಿತು ರಷ್ಯಾದ ಮನವಿಯನ್ನು ಭಾರತ ಸ್ವೀಕರಿಸಿದೆ ಎಂದು ಸರ್ಕಾರ ತಿಳಿಸಿದೆ. ರಷ್ಯಾದ ಮನವಿಗೆ ಅನುಕೂಲವಾಗುವಂತೆ ಭಾರತ ಕಾರ್ಯ ನಿರ್ವಹಿಸಲಿದೆ.

ರಷ್ಯಾವು ಸೂಕ್ತ ಕಾರಣಗಳ ಮೂಲಕ ಭಾರತವನ್ನು ತಲುಪಿದೆ. ಹಾಗೂ ಎರಡು ಕಡೆಗಳಲ್ಲಿ ಭಾರತದ ಸಹಾಯವನ್ನು ಕೋರಿದೆ. ಲಸಿಕೆ ತಯಾರಿಕಾ ಕಂಪನಿ ಕೂಡ ಉತ್ತಮವಾಗಿದೆ. ಭಾರತದ ಕಂಪನಿ ಜೊತೆ ಸೇರಿ ದೊಡ್ಡ ಮಟ್ಟದಲ್ಲಿ ಲಸಿಕೆ ತಯಾರಿಕೆಯ ಗುರಿ ಹೊಂದಿದೆ ಎಂದು ಹೇಳಿದೆ.

Recommended Video

Indo China Clash : ಇದು ಅಪ್ಪಟ ಸುಳ್ಳು, ಇಲ್ಲಿದೆ ಸತ್ಯವಾದ ಕಥೆ | Oneindia Kannada

ಸಮಗ್ರ ದತ್ತಾಂಶವನ್ನು ನೀಡಲಾಗಿದ್ದು, ಭಾರತದಲ್ಲಿ ಮೂರನೇ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿದ್ದಾರೆ. ಭಾರತದಿಂದ ಅನುಮೋದನೆ ಸಿಕ್ಕಿದ ನಂತರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ಆರಂಭವಾಗುತ್ತದೆ.ಬೇರೆ ದೇಶಗಳಲ್ಲೂ ಲಸಿಕೆ ಪ್ರಯೋಗ ನಡೆಸುವ ಸಾಧ್ಯತೆ ಇದೆ.

English summary
Canada reported zero COVID-19 deaths in the past 24 hours for the first time since March 15, according to public health agency data released late on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X