ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಲ್ಲಿ ಹೋದ ಚೀನಾದ ಮಾನ, ಮಾಸ್ಕ್ ನಲ್ಲಿ ಮೂರಾಬಟ್ಟೆ ಆಯಿತು!

|
Google Oneindia Kannada News

ವುಹಾನ್ ನಿಂದ ಆರಂಭವಾದ ಕೊರೊನಾ ಸೋಂಕು ಇಂದು ವಿಶ್ವಕ್ಕೆ ಮಾರಣಾಂತಿಕವಾಗಿ ಕಾಡುತ್ತಿದೆ. ಇದುವರೆಗೆ 2,90,453 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಈ ವೈರಾಣು ಹರಡಲು ಕಾರಣ ಚೀನಾ ಎನ್ನುವುದಕ್ಕಾಗಿ, ಜಗತ್ತಿನಲ್ಲಿ ಆ ದೇಶ ದಿನದಿಂದ ದಿನಕ್ಕೆ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಚೀನಾದ ಪರವಾಗಿದೆ ಎಂದು, ದೊಡ್ಡಣ್ಣ ಅಮೆರಿಕಾ, ಆ ಸಂಸ್ಥೆಗೆ ನೀಡುವ ಆರ್ಥಿಕ ಸವಲತ್ತನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಚೀನಾ ಏನೇ ಸ್ಪಷ್ಟನೆಯನ್ನು ನೀಡಿದರೂ, ಜಗತ್ತು ಅದನ್ನು ನಂಬುವ ಸ್ಥಿತಿಯಲ್ಲಿಲ್ಲ.

ಕಳೆದ 20 ವರ್ಷಗಳಿಂದ ಜಗತ್ತನ್ನು ಕಾಡಿದ ಚೀನಾದ 5 ವೈರಸ್‌ಗಳುಕಳೆದ 20 ವರ್ಷಗಳಿಂದ ಜಗತ್ತನ್ನು ಕಾಡಿದ ಚೀನಾದ 5 ವೈರಸ್‌ಗಳು

ಚೀನಾದಲ್ಲಿರುವ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಆ ದೇಶದಿಂದ ಗುಡ್ ಬೈ ಹೇಳಲು ನಿರ್ಧರಿಸಿವೆ ಎನ್ನುವ ಸುದ್ದಿಯಿದೆ. ಚೈನಾ ಸೆಟ್ ಅಂದರೆ ಅದು ಗುಣಮಟ್ಟದ ವಸ್ತುವಲ್ಲ, ನೋಡಲು ಮಾತ್ರ ಆಕರ್ಷಣೀಯ ಎನ್ನುವ ಮಾತಿದೆ.

ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!

ಅದರಂತೇ, ವಿಶ್ವ ಎದುರಿಸುತ್ತಿರುವ ಈ ನಿರ್ಣಾಯಕ ಆರೋಗ್ಯ ತುರ್ತು ಪರಿಸ್ಥಿತಿಯ ವೇಳೆಯೂ, ಚೀನಾ ತನ್ನ ಬುದ್ದಿಯನ್ನು ತೋರಿಸಿದೆ. ಅದಕ್ಕೆ ಕೆನಡಾ ದೇಶ, ಸೂಕ್ತ ತಿರುಗೇಟನ್ನು ನೀಡಿದೆ.

ಕೆಂಡಕಾರುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕೆಂಡಕಾರುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಚೀನಾದ ವಿರುದ್ದ ಕೆಂಡಕಾರುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, WHO ವಾರ್ಷಿಕ ಸಭೆಯಲ್ಲಿ ಅದರ ಮಾನ ತೆಗೆಯಲು ಮುಂದಾಗಿದ್ದಾರೆ. ವಿಶ್ವದ ಹೆಚ್ಚಿನ ದೇಶಗಳು ಚೀನಾದ ವಿರುದ್ದ ಗರಂ ಆಗಿರುವ ಈ ಸಮಯದಲ್ಲಿ ಆ ಸಭೆಯನ್ನು ಮುಂದೂಡಲು ಚೀನಾ ಪ್ರಯತ್ನಿಸುತ್ತಿದೆ.

ಒಂದು ಕೋಟಿ ಮಾಸ್ಕ್ ಕೆನಡಾಗೆ ಸಪ್ಲೈ ಮಾಡಿದ್ದ ಚೀನಾ

ಒಂದು ಕೋಟಿ ಮಾಸ್ಕ್ ಕೆನಡಾಗೆ ಸಪ್ಲೈ ಮಾಡಿದ್ದ ಚೀನಾ

ಕೆನಡಾ ದೇಶದ ಮನವಿಯ ಮೇರೆಗೆ ವೈದ್ಯಕೀಯ ದರ್ಜೆಯ ಮಾಸ್ಕ್ ಗಳನ್ನು ಚೀನಾ ಆ ದೇಶಕ್ಕೆ ಸಪ್ಲೈ ಮಾಡಿತ್ತು. 1.1 ಕೋಟಿ ಎನ್ 95 ಮಾಸ್ಕ್ ದರ್ಜೆಯ ಮಾಸ್ಕ್ ಅನ್ನು ಚೀನಾ ಕಳುಹಿಸಿಕೊಟ್ಟಿತ್ತು. ಆದರೆ, ಆ ಮಾಸ್ಕ್ ಗಳು ಗುಣಮಟ್ಟವನ್ನು ಹೊಂದಿಲ್ಲ ಎಂದು ಕೆನಡಾ ದೇಶದ ಅಧಿಕಾರಿಗಳು ಹೇಳಿಕೆಯನ್ನು ನೀಡಿದ್ದಾರೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ

ಗುಣಮಟ್ಟದ ಪರೀಕ್ಷೆಯಲ್ಲಿನ ಮಾನದಂಡವನ್ನು ಪೂರೈಸುವಲ್ಲಿ ಚೀನಾ ವಿಫಲವಾಗಿದೆ. 1.1 ಕೋಟಿ ಮಾಸ್ಕ್ ಗಳ ಪೈಕಿ, ಕೇವಲ ಹತ್ತು ಲಕ್ಷ ಮಾಸ್ಕ್ ಗಳು ಬಳಸಲು ಯೋಗ್ಯವಾಗಿವೆ. ಹೀಗಾಗಿ, ನಾವು ಚೀನಾ ಸರಕಾರಕ್ಕೆ ಹಣವನ್ನು ಪಾವತಿಸುವುದಿಲ್ಲ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ್ದಾರೆ.

ಕೊರೊನಾದಲ್ಲಿ ಹೋದ ಚೀನಾದ ಮಾನ, ಮಾಸ್ಕ್ ನಲ್ಲಿ ಮಾರಾಬಟ್ಟೆ ಆಯಿತು

ಕೊರೊನಾದಲ್ಲಿ ಹೋದ ಚೀನಾದ ಮಾನ, ಮಾಸ್ಕ್ ನಲ್ಲಿ ಮಾರಾಬಟ್ಟೆ ಆಯಿತು

ಕಳೆದ ಕೆಲವು ತಿಂಗಳಲ್ಲಿ ಚೀನಾ, ಸುಮಾರು ಮೂರು ಮಿಲಿಯನ್ ಮಾಸ್ಕ್, 16 ಸಾವಿರ ವೆಂಟಿಲೇಟರ್, ಎರಡು ಮಿಲಿಯನ್ ಟೆಸ್ಟಿಂಗ್ ಕಿಟ್ ಅನ್ನು ವಿವಿಧ ದೇಶಗಳಿಗೆ ರಫ್ತು ಮಾಡಿತ್ತು. ಆದರೆ, ಸ್ಪೇನ್, ಹಾಲೆಂಡ್, ಪಾಕಿಸ್ತಾನ ಮುಂತಾದ ದೇಶಗಳು ಇವುಗಳ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿತ್ತು. ಹಾಗಾಗಿ, ಹೆಚ್ಚಿನ ದೇಶಗಳು ಚೀನಾ ಕಳುಹಿಸಿದ ವಸ್ತುಗಳನ್ನು ಹಿಂದಕ್ಕೆ ಕಳುಹಿಸಿದ್ದವು. ಈಗ ಕೆನಡಾದ ಸರದಿ. ಹಾಗಾಗಿ, ಕೊರೊನಾದಲ್ಲಿ ಹೋದ ಚೀನಾದ ಮಾನ, ಮಾಸ್ಕ್ ನಲ್ಲಿ ಮಾರಾಬಟ್ಟೆ ಆಯಿತು.

English summary
Canada Rejects Mask Supplied By China, Not Going To Make The Payment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X