ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷೇಧಿತ ರಷ್ಯನ್ನರ ಅಸ್ತಿ ಮಾರಲು ಕೆನಡಾದಿಂದ ಹೊಸ ಕಾನೂನು

|
Google Oneindia Kannada News

ಟೊರಾಂಟೊ, ಏ. 27: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ದೇಶದ ಮೇಲೆ ಹಲವು ಪಾಶ್ಚಿಮಾತ್ಯ ದೇಶಗಳು ಶಿಸ್ತಿನ ಕ್ರಮವನ್ನ ತೀವ್ರಗೊಳಿಸುತ್ತಿವೆ. ರಷ್ಯಾ ಮೇಲಿನ ನಿರ್ಬಂಧಗಳು ಇನ್ನಷ್ಟು ಬಿಗಿಗೊಂಡಿವೆ. ವಿವಿಧ ದೇಶಗಳಲ್ಲಿ ರಷ್ಯನ್ ಪ್ರಜೆಗಳು ಹೊಂದಿರುವ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯ ಅಲ್ಲಲ್ಲಿ ನಡೆಯುತ್ತಿದೆ. ರಷ್ಯನ್ನರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪ್ರಮುಖ ದೇಶಗಳಲ್ಲಿ ಕೆನಡವೂ ಒಂದು. ನಿಷೇಧಿತ ರಷ್ಯನ್ನರ ಆಸ್ತಿಯನ್ಪ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಮಾರಾಟ ಮಾಡಲೂ ಅನುವು ಮಾಡಿಕೊಡುವ ಹೊಸ ಕಾನೂನನ್ನು ಕೆನಡಾ ಸರಕಾರ ಚಾಲನೆಗೆ ತಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಮೊದಲು ನಿಷೇಧಿತ ರಷ್ಯನ್ನರ ಆಸ್ತಿಯನ್ನ ಫ್ರೀಜ್ ಮಾಡಲು ಮತ್ತು ಅವರ ಹಣಕಾಸು ವಹಿವಾಟು ನಿಷೇಧಿಸುವುದಕ್ಕೆ ಮಾತ್ರ ಕೆನಡಾ ಕಾನೂನಿನಲ್ಲಿ ಅವಕಾಶ ಇತ್ತು. ಈಗ ಹೊಸ ಕಾನೂನು ನಿಷೇಧಿತ ರಷ್ಯನ್ನರ ಆಸ್ತಿಗಳನ್ನ ಮಾರಾಟ ಮಾಡಲು ಅವಕಾಶ ಒದಗಿಸುತ್ತದೆ. ವಿಶೇಷ ಆರ್ಥಿಕ ಕ್ರಮಗಳ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಕೆನಡಾ ಸಂಸತ್ತು ಸಮ್ಮತಿ ನೀಡಿದೆ ಎಂದು ನ್ಯಾಷನಲ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಉಕ್ರೇನ್: ಸೈನಿಕನ ಪ್ರಾಣ ಉಳಿಸಿದ ಫೋನ್, ವಿಡಿಯೋ ವೈರಲ್ ಉಕ್ರೇನ್: ಸೈನಿಕನ ಪ್ರಾಣ ಉಳಿಸಿದ ಫೋನ್, ವಿಡಿಯೋ ವೈರಲ್

ರಷ್ಯಾದ ಹಲವು ಸಿರಿವಂತರು ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾ ಮೊದಲಾದ ದೇಶಗಳಲ್ಲಿ ಸಾಕಷ್ಟು ಆಸ್ತಿಪಾಸ್ತಿ ಖರೀದಿಸಿ ಐಷಾರಾಮಿ ಜೀವನ ನಡೆಸಿದ್ದಾರೆ. ಇಂಥ ಅನೇಕ ರಷ್ಯನ್ನರ ವ್ಯವಹಾರಗಳನ್ನ ವಿವಿಧ ದೇಶಗಳು ನಿಷೇಧಿಸಿವೆ. ಈ ದೇಶಗಳಲ್ಲಿ ನಿಷೇಧಿತ ರಷ್ಯನ್ನರ ಪಟ್ಟಿ ಬೆಳೆಯುತ್ತಲೇ ಇದೆ.

Canada Introduces Amendment Bill to Sell off Assets of Sanctioned Russians

ಇನ್ನು, ರಷ್ಯಾ ದೇಶ ವಿಶ್ವದ ವಿವಿಧ ದೇಶಗಳಲ್ಲಿ ಸುಮಾರು 600 ಬಿಲಿಯನ್ ಡಾಲರ್ (ಸುಮಾರು 46 ಲಕ್ಷಕೋಟಿ ರೂಪಾಯಿ) ಹಣ ಮೌಲ್ಯದ ಆಸ್ತಿಗಳನ್ನ ಇರಿಸಿದೆ. ಚೀನಾ, ಜಪಾನ್, ಫ್ರಾನ್ಸ್, ಜರ್ಮನಿ, ಅಮೆರಿಕ, ಬ್ರಿಟನ್, ಆಸ್ಟ್ರಿಯಾ ಮತ್ತು ಕೆನಡಾ ದೇಶಗಳಲ್ಲಿ ರಷ್ಯಾ ಸರಕಾರಕ್ಕೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿಗಳಿವೆ. ಹಾಗೆಯೇ, ವಿದೇಶೀ ವಿನಿಮಯ ರಿಸರ್ವ್ ಆಗಿ ಬಹಳಷ್ಟು ಮೊತ್ತವನ್ನೂ ಇರಿಸಿಕೊಂಡಿದೆ. ತನ್ನ ಕರೆನ್ಸಿ ಮೌಲ್ಯ ಕುಸಿದು ಹಣದುಬ್ಬರ ಸ್ಥಿತಿ ನಿರ್ಮಾಣವಾಗದೇ ಇರಲು ರಷ್ಯಾಗೆ ಈ ರಿಸರ್ವ್ ಮೊತ್ತ ಬಹಳ ಮುಖ್ಯವಾಗಿತ್ತು.

ಆದರೆ, ರಷ್ಯಾದ ಈ ಮೀಸಲು ನಿಧಿಗೆ ಸಂಚಕಾರ ಬರುವ ರೀತಿಯಲ್ಲಿ ಅಮೆರಿಕ ಮತ್ತದರ ಮಿತ್ರ ದೇಶಗಳು ಆರ್ಥಿಕ ದಿಗ್ಬಂಧನ ಹಾಕಿವೆ. ಈಗ ವಿದೇಶಗಳಲ್ಲಿರುವ ರಷ್ಯಾ ಸರಕಾರದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಚೀನಾದಂಥ ಕೆಲ ದೇಶಗಳು ಬಿಟ್ಟರೆ ಉಳಿದ ದೇಶಗಳು ತಮ್ಮಲ್ಲಿರುವ ರಷ್ಯನ್ ಆಸ್ತಿಯನ್ನ ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿವೆ. ಈಗ ರಷ್ಯಾಗೆ ನಿಜವಾದ ಬಿಸಿ ತಾಕಲು ಶುರುವಾಗಿದೆ ಎಂದು ತಜ್ಞರು ಹೇಳುತ್ತಾರೆ.

(ಒನ್ಇಂಡಿಯಾ ಸುದ್ದಿ)

English summary
Canada introduces legislation to sell off assets of sanctioned Russians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X