• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಹಾಗೂ ಪಾಕಿಸ್ತಾನದ ವಿಮಾನಗಳಿಗೆ ಕೆನಡಾ ನಿಷೇಧ

|
Google Oneindia Kannada News

ಕೆನಡಾ ಸರ್ಕಾರವು ಭಾರತ ಹಾಗೂ ಪಾಕಿಸ್ತಾನದ ವಿಮಾನಗಳ ಹಾರಾಟವನ್ನು 30 ದಿನಗಳ ಕಾಲ ನಿಷೇಧಿಸಿದೆ.

ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚಿನ ದೈನಂದಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲು ಹಲವು ರಾಷ್ಟ್ರಗಳು ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿವೆ. ಅದರ ಸಾಲಿಗೆ ಈಗ ಕೆನಡಾ ಕೂಡ ಸೇರಿಕೊಂಡಿದೆ.

10 ದಿನ ಭಾರತ- ದುಬೈ ವಿಮಾನ ರದ್ದುಗೊಳಿಸಿದ ಎಮಿರೇಟ್ಸ್‌10 ದಿನ ಭಾರತ- ದುಬೈ ವಿಮಾನ ರದ್ದುಗೊಳಿಸಿದ ಎಮಿರೇಟ್ಸ್‌

ಸಾರಿಗೆ ಸಚಿವ ಓಮರ್ ಈ ಕುರಿತು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಒಂದೇ ದಿನ 3,32,730 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 1,93,279 ಸೋಂಕಿತರು ಗುಣಮುಖರಾಗಿದ್ದರೆ, 2,263 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 1,62,63,695 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 1,36,48,159 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 1,86,920 ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 24,28,616 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಹೊಸ ದಾಖಲೆ: ಭಾರತದಲ್ಲಿ ಒಂದೇ ದಿನ 3,32,730 ಮಂದಿಗೆ ಕೊರೊನಾವೈರಸ್!ಹೊಸ ದಾಖಲೆ: ಭಾರತದಲ್ಲಿ ಒಂದೇ ದಿನ 3,32,730 ಮಂದಿಗೆ ಕೊರೊನಾವೈರಸ್!

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣದ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್, ಭಾರತದಿಂದ ಬರುವ ಮತ್ತು ಹಾಂಕಾಂಗ್ ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ನಿಷೇಧಿಸಿದೆ. ಮಂಗಳವಾರ (ಏಪ್ರಿಲ್ 20) ರಿಂದ ಮೇ 3 ರವರೆಗೆ ಭಾರತದಿಂದ ಮತ್ತು ಭಾರತ ಬರುವ ಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ವಿಸ್ಟಾರಾ ಏರ್‌ಲೈನ್ಸ್ ವಿಮಾನದಲ್ಲಿದ್ದ 50 ಪ್ರಯಾಣಿಕರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಪಾಕಿಸ್ತಾನ ಮತ್ತು ಫಿಲಿಪೈನ್ಸ್ ವಿಮಾನಗಳಿಗೂ ನಿಷೇಧ: ಭಾರತವನ್ನು ಹೊರತುಪಡಿಸಿ, ಹಾಂಗ್ ಕಾಂಗ್ ಸರ್ಕಾರವು ಪಾಕಿಸ್ತಾನ ಮತ್ತು ಫಿಲಿಪೈನ್ಸ್ ವಿಮಾನಗಳ ಮೇಲೆ ಕೂಡಾ ಏಪ್ರಿಲ್ 20 ರಿಂದ ಮೇ 3 ರವರೆಗೆ ನಿಷೇಧ ಹೇರಿದೆ. ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹಾಂಗ್ ಕಾಂಗ್ ಈ ಕ್ರಮ ಕೈಗೊಂಡಿದೆ.

English summary
Canada has said it would ban all flights from India and Pakistan for 30 days due to the growing wave of Covid-19 cases in that region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X