ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಲಾದಿಮಿರ್ ಪುಟಿನ್ ಮತ್ತು ಸಾವಿರ ರಷ್ಯನ್ನರಿಗೆ ಕೆನಡಾ ನಿಷೇಧ

|
Google Oneindia Kannada News

ಟೊರಂಟೋ, ಮೇ 18: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಸುಮಾರು ಒಂದು ಸಾವಿರ ಮಂದಿ ರಷ್ಯನ್ ನಾಗರಿಕರ ಪ್ರವೇಶವನ್ನು ಕೆನಡಾ ಸರಕಾರ ನಿರ್ಬಂಧಿಸಿದೆ. ಉಕ್ರೇನ್ ಮೇಲೆ ರಷ್ಯಾ ಎಡಬಿಡದೆ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆನಡಾ ಈ ಕ್ರಮ ಕೈಗೊಂಡಿದೆ ಎಂದು ಕೆನಡಾದ ಸಾರ್ವಜನಿಕ ಸುರಕ್ಷತೆ ಸಚಿವ ಮಾರ್ಕೊ ಮೆಂಡಿಸಿನೋ ಮಂಗಳವಾರ ತಿಳಿಸಿದರು.

"ಪುಟಿನ್ ಸರಕಾರದ ಭೀಕರ ದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್ ಜೊತೆ ಕೆನಡಾ ನಿಲ್ಲುತ್ತದೆ. ತನ್ನ ಕುಕೃತ್ಯಗಳಿಗೆ ರಷ್ಯಾವನ್ನು ಹೊಣೆ ಮಾಡುತ್ತೇವೆ. ಪುಟಿನ್ ಹಾಗು ಆತನ ಆಪ್ತರು ಸೇರಿದಂತೆ ಸುಮಾರು ಒಂದು ಸಾವಿರ ರಷ್ಯನ್ನರು ಕೆನಡಾಗೆ ಬರದಂತೆ ನಿಷೇಧಿಸುತ್ತಿರುವುದಾಗಿ ಘೋಷಿಸಿದ್ದೇವೆ" ಎಂದು ಕೆನಡಾ ಮಂತ್ರಿಗಳು ಹೇಳಿದರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನ್ಯಾಟೋ ಸೇರ್ಪಡೆಗೆ ಫಿನ್ಲೆಂಡ್ ಮತ್ತು ಸ್ವೀಡನ್‌ ಕೋರಿಕೆ, ಟರ್ಕಿ ಪ್ರತಿಕ್ರಿಯೆನ್ಯಾಟೋ ಸೇರ್ಪಡೆಗೆ ಫಿನ್ಲೆಂಡ್ ಮತ್ತು ಸ್ವೀಡನ್‌ ಕೋರಿಕೆ, ಟರ್ಕಿ ಪ್ರತಿಕ್ರಿಯೆ

ಇನ್ನು, ಉಕ್ರೇನ್ ದೇಶದ ಖ್ಯಾತ ಬಾಕ್ಸಿಂಗ್ ಪಟು ವ್ಲಾದಿಮಿರ್ ಕ್ಲಿಶ್ಕೋ ರಷ್ಯಾದ ಅಥ್ಲೀಟ್‌ಗಳನ್ನು ನಿಷೇಧಿಸುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಒತ್ತಾಯಿಸಿದ್ದಾರೆ.

Canada Bans Entry of Vladimir Putin And 1000 Russian Nationals

ಇದೇ ವೇಳೆ, ಉಕ್ರೇನ್‌ನ ಮರಿಯೂಪೋಲ್ ನಗರ ರಷ್ಯಾ ವಶವಾಗುತ್ತಿದೆ. ಹಲವು ದಿನಗಳ ಕಾಲ ರಷ್ಯನ್ ಪಡೆಗಳನ್ನು ಎದುರಿಸುತ್ತಿದ್ದ 250ಕ್ಕೂ ಹೆಚ್ಚು ಉಕ್ರೇನೀ ಸೈನಿಕರು ನಿನ್ನೆ ಮಂಗಳವಾರ ಸರೆಂಡರ್ ಆಗಿದ್ದಾರೆ. ಅಜೋವಸ್ತಲ್ ಉಕ್ಕು ಕಾರ್ಖಾನೆಯಲ್ಲಿ ಅಡಗಿದ್ದ ಇವರು ಹೊರಬಂದು ಶರಣಾಗಿದ್ದಾರೆ. ಇದರೊಂದಿಗೆ ಮರಿಯೂಪೋಲ್ ನಗರ ರಷ್ಯಾದ ಸಂಪೂರ್ಣ ವಶವಾಗಲಿದೆ. ಇನ್ನು, ಉತ್ತರ ಉಕ್ರೇನ್ ಭಾಗದ ಗ್ರಾಮವೊಂದರ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದ ಪರಿಣಾಮ 12 ಮಂದಿ ಗಾಯಗೊಂಡಿರುವುದು ವರದಿಯಾಗಿದೆ.

'ವ್ಲಾದಿಮಿರ್ ಪುಟಿನ್‌ಗೆ ಬ್ಲಡ್ ಕ್ಯಾನ್ಸರ್' : ರಷ್ಯನ್ ಉದ್ಯಮಿ'ವ್ಲಾದಿಮಿರ್ ಪುಟಿನ್‌ಗೆ ಬ್ಲಡ್ ಕ್ಯಾನ್ಸರ್' : ರಷ್ಯನ್ ಉದ್ಯಮಿ

ಐಸಿಸಿ ತನಿಖೆ:
ಇದೇ ವೇಳೆ, ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ 42 ತನಿಖಾಧಿಕಾರಿಗಳು, ವಿಧಿವಿಜ್ಞಾನ ತಜ್ಞರು ಹಾಗೂ ಇತರರನ್ನೊಳಗೊಂಡ ತಂಡವನ್ನು ಉಕ್ರೇನ್ ದೇಶಕ್ಕೆ ತನಿಖೆಗೆ ಕಳುಹಿಸಲಾಗಿದೆ. ರಷ್ಯಾದ ಯುದ್ಧ ಅಪರಾಧಗಳ ಎಲ್ಲಾ ವಿವರವನ್ನು ಈ ತಂಡ ಕಲೆಹಾಕಲಿದೆ.

Canada Bans Entry of Vladimir Putin And 1000 Russian Nationals

ಕೇನ್ ಚಿತ್ರೋತ್ಸವದಲ್ಲಿ ಝೆಲೆನ್ಸ್ಕಿ ಸಂದೇಶ:
ಮಂಗಳವಾರ ಆರಂಭಗೊಂಡ 75ನೇ ಕೇನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದರು. ರಷ್ಯಾದ ದುಸ್ಸಾಹಸದ ಹಿನ್ನೆಲೆಯಲ್ಲಿ ಸಿನಿಮಾ ರಂಗದವರು ಉಕ್ರೇನ್ ಪರವಾಗಿ ನಿಲ್ಲಬೇಕೆಂದು ಕರೆ ನೀಡಿದ ಅವರು, "ಇವತ್ತು ಸಿನಿಮಾ ಮೌನವಾಗಿಲ್ಲ ಎಂದು ಸಾಬೀತು ಮಾಡಲು ಹೊಸ ಚಾಪ್ಲಿನ್‌ನ ಅಗತ್ಯ ಇದೆ" ಎಂದು ಹೇಳಿದರು.

1939ರಲ್ಲಿ ಎರಡನೇ ಮಹಾಯುದ್ಧದಲ್ಲಿ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ರನ್ನು ಚಾರ್ಲಿ ಚಾಪ್ಲಿನ್ ಅಣಕು ಮಾಡಿ ನಿರ್ಮಿಸಿದ ಸಿನಿಮಾವನ್ನು ಉಲ್ಲೇಖಿಸಿದ ಉಕ್ರೇನ್ ಅಧ್ಯಕ್ಷರು, "ಸರ್ವಾಧಿಕಾರಿಗಳು ಸಾಯುತ್ತಾರೆ" ಎಂದು ಮಾರ್ಮಿಕವಾಗಿ ಹೇಳಿದರು.

(ಒನ್ಇಂಡಿಯಾ ಸುದ್ದಿ)

Recommended Video

Umran Malik ಟೀಮ್ ಇಂಡಿಯಾ ಸೇರಲಿ ಎಂದ ಅಭಿಮಾನಿಗಳು | Oneindia Kannada

English summary
Canada has announced a ban on entry of over one thousand Russians including its president Vladimir Putin. This measure is taken on account of Russian war crimes in Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X