ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಎದೆನಡುಗಿಸುವ ವಿಡಿಯೋ, ಚಿತ್ರ

|
Google Oneindia Kannada News

ಕ್ಯಾಲಿಫೋರ್ನಿಯಾದಲ್ಲಿ ಇಬ್ಬರನ್ನು ಬಲಿತೆಗೆದುಕೊಂಡ ದೈತ್ಯ ಕಾಳ್ಗಿಚ್ಚಿನ ಭಯಾನಕ ಮತ್ತು ಕರುಣಾಜನಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲೂ ಅಚಾನಕ್ಕಾಗಿ ಬೆಂಕಿಗೆ ಬಿದ್ದ ಪುಟ್ಟ ಮೊಲವೊಂದನ್ನು ಯುವಕನೊಬ್ಬ ರಕ್ಷಿಸಿದ ವಿಡಿಯೋವಂತೂ ಮಾನವೀಯತೆಯ ಪ್ರತೀಕವೆಂಬಂತೆ ತೋರುತ್ತಿದೆ.

ಕ್ಯಾಲಿಫೋರ್ನಿಯಾದಲ್ಲಿ 10 ಜನರನ್ನು ಬಲಿತೆಗೆದುಕೊಂಡ ದೈತ್ಯ ಕಾಳ್ಗಿಚ್ಚು!ಕ್ಯಾಲಿಫೋರ್ನಿಯಾದಲ್ಲಿ 10 ಜನರನ್ನು ಬಲಿತೆಗೆದುಕೊಂಡ ದೈತ್ಯ ಕಾಳ್ಗಿಚ್ಚು!

ಕ್ಯಾಲಿಫೋರ್ನಿಯಾದಲ್ಲಿ ನಿನ್ನೆ(ಡಿ.7) ಸಂಭವಿಸಿದ ಭೀಕರ ಕಾಳ್ಗಿಚ್ಚಿನಲ್ಲಿ ಇಬ್ಬರು ಮೃತರಾಗಿದ್ದರು. 1,90,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದ ಕಾರಣ ಹೆಚ್ಚಿನ ಸಾವು-ನೋವು ಸಂಭವಿಸಿಲ್ಲ. ಆದರೆ 1,41,000 ಎಕರೆ ಯಷ್ಟು ಜಾಗ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ 5,700 ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕ್ಯಾಲಿಫೋರ್ನಿಯಾ: ಕಾಳ್ಗಿಚ್ಚಿಗೆ 2 ಬಲಿ, 1.4 ಲಕ್ಷ ಎಕರೆ ಜಾಗ ಬೆಂಕಿಗಾಹುತಿಕ್ಯಾಲಿಫೋರ್ನಿಯಾ: ಕಾಳ್ಗಿಚ್ಚಿಗೆ 2 ಬಲಿ, 1.4 ಲಕ್ಷ ಎಕರೆ ಜಾಗ ಬೆಂಕಿಗಾಹುತಿ

ಕ್ಯಾಲಿಫೋರ್ನಿಯ ಜನರ ನಿದ್ದೆ ಕೆಡಿಸಿದ ಈ ಭೀಕರ ಕಾಳ್ಗಿಚ್ಚಿನ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿವೆ.

ಬೆಂಕಿಗೆ ಬಿದ್ದ ಪುಟ್ಟ ಮೊಲ!

ಕ್ಯಾಲಿಫೋರ್ನಿಯದ ಕಾಳ್ಗಿಚ್ಚಿನಲ್ಲಿ ಅಚಾನಕ್ಕಾಗಿ ಮೊಲವೊಂದು ಬೆಂಕಿಗೆ ಬಿದ್ದುಬಿಟ್ಟಿತ್ತು. ಇದನ್ನು ನೋಡುತ್ತಿದ್ದ ಯುವಕನೊಬ್ಬ ಆ ಪುಟ್ಟ ಮೊಲವನ್ನು ರಕ್ಷಿಸಿದ ವಿಡಿಯೋ ಮಾನವೀಯತೆಯ ಪ್ರತೀಕ ಎಂಬಂತೆ ಗೋಚರಿಸಿತು. ಎಲ್ಲಿ ಬೆಂಕಿಯಿಂದ ತನಗೂ ತೊಂದರೆಯಾಗಬಹುದು ಎಂಬುದನ್ನು ಲೆಕ್ಕಿಸದೆ, ಅದನ್ನು ರಕ್ಷಿಸಿದ ಯುವಕ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ 'ಹೀರೋ' ಆಗಿದ್ದಾನೆ!

ಭಯಾನಕ ಕಾಳ್ಗಿಚ್ಚು!

ಸುತ್ತಲೂ ಕಾಳ್ಗಿಚ್ಚು ತುಂಬಿರುವ ದೃಶ್ಯವನ್ನು ಕಾರಿನಲ್ಲಿ ಚಲಿಸುತ್ತಿದ್ದವರೊಬ್ಬರು ವಿಡಯೋ ಮಾಡಿದ್ದಾರೆ. ಆಗಸದೆತ್ತರಕ್ಕೆ ಚಾಚಿರುವ ಅಗ್ನಿಯ ಕೆನ್ನಾಲಗೆಯನ್ನು ನೋಡಿದರೆ ಖಂಡಿತ ಭಯ ಹುಟ್ಟದೆ ಇರಲಾರದು!

ರಾಬರ್ಟ್ ಗೌತಿಯರ್

ರಸ್ತೆಯವರೆಗೂ ಹಬ್ಬಿರುವ ಜ್ವಾಲೆ, ಅದರಿಂದ ಸುಟ್ಟು ಕರಕಲಾದ ಕಾಡನ್ನು ರಾಬರ್ಟ್ ಗೌತಿಯರ್ ಎಂಬುವವರು ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

ಸಾರಾ ಸಂತಾಸ್

ಅಯ್ಯೋ ದೇವರೆ, ಕ್ಯಾಲೊಫೋರ್ನಿಯನ್ನರನ್ನು ಕಾಪಾಡು. ನಮ್ಮೆಲ್ಲರ ಪ್ರಾರ್ಥನೆ ಅವರೊಂದಿಗಿದೆ ಎಂದು ಸಾರಾ ಸಂತಾಸ್ ಎಂಬುವವರು ಭಯಾನಕ ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದಾರೆ.

ಬೆಂಕಿ ಅಂದ್ರೆ ತಮಾಷೆಯಲ್ಲ.

ಬೆಂಕಿ ಅಂದ್ರೆ ತಮಾಷೆಯಲ್ಲ. ದಯವಿಟ್ಟು ಹುಷಾರಾಗಿರಿ. ಸ್ಥಳಾಂತರಗೊಂಡಿರುವ ಎಲ್ಲರೂ ಸುರಕ್ಷಿತವಾಗಿರಲಿ, ಈಗಾಗಲೇ ಮನೆಯನ್ನು ಕಳೆದುಕೊಂಡವರಿಗಾಗಿ ನನ್ನ ಪ್ರಾರ್ಥನೆ ಎಂದು ರೆಬೆಕಾಹ್ ಕೆನ್ನಡಿ ಟ್ವೀಟ್ ಮಾಡಿದ್ದಾರೆ.

ಸುಟ್ಟು ಕರಕಲಾದ ಕಾರುಗಳು!

ಕ್ಯಾಲಿಫೋರ್ನಿಯಾದ ಬೆಂಕಿಯ ಪರಿಣಾಮ 2 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಈ ಕಾಳ್ಗಿಚ್ಚು ಮತ್ತೆ ಮುಂದುವರಿಯುವ ಸಾಧ್ಯತೆಯೂ ಇದೆ ಎಂದು, ಸುಟ್ಟು ಕರಕಲಾದ ಕಾರುಗಳ ಚಿತ್ರದೊಂದಿಗೆ ಸಿಜಿಟಿಎನ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

English summary
Atleast 2 people died for the huge wildfire which occurs in Carpinteria in California, America. So far 141000 acres have burned. Many videos related to this wildfire is becoming viral in social media now. Here are few of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X