ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಯಿಸಿದ ಮೊಟ್ಟೆ ಮತ್ತೆ ಮೊದಲಿನಂತೇ ತಾಜಾ ಆಯ್ತು!

By Kiran B Hegde
|
Google Oneindia Kannada News

ಕ್ಯಾಲಿಫೋರ್ನಿಯಾ, ಜ. 28: ಮೊಟ್ಟೆ ಬೇಯಿಸುವುದು ಎಲ್ಲರಿಗೂ ಗೊತ್ತು. ಆದರೆ, ಬೇಯಿಸಿದ ಮೊಟ್ಟೆಯನ್ನು ವಾಪಸ್ ಹಸಿಯಾಗಿಸಲು ಸಾಧ್ಯವೇ? ಇದನ್ನೂ ಸಾಧಿಸಿದ್ದೇವೆ. ಇದರಿಂದ ಔಷಧ ಅಭಿವೃದ್ಧಿ ಸರಳೀಕರಣಗೊಂಡಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ!

ಹೌದು, ಮೊಟ್ಟೆಯೊಳಗಿನ ಪ್ರೊಟೀನ್ ಭರಿತ ಬಿಳಿ ಭಾಗವನ್ನು ಪುನಃ ಮೂಲರೂಪಕ್ಕೆ ಪರಿವರ್ತಿಸಿರುವುದಾಗಿ ಅಮೆರಿಕದ ಕ್ಯಾಲಿಫೋರ್ನಿಯಾ ವಿಜ್ಞಾನಿಗಳು ಇರ್ವಿನ್‌ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಗ್ರೆಗರಿ ವೇಯ್ಸ್ ಈ ವಿಷಯ ದೃಢಪಡಿಸಿದ್ದಾರೆ.

egg

ಪ್ರಕ್ರಿಯೆ ಹೇಗೆ? : ಮೊಟ್ಟೆಯನ್ನು 90 ಡಿಗ್ರಿ ಸೆಲ್ಸಿಯಸ್ ಉಷ್ಣಾಂಷದಲ್ಲಿ 20 ನಿಮಿಷಗಳ ಕಾಲ ಕಾಯಿಸಲಾಯಿತು. ನಂತರ ರಾಸಾಯನಿಕ ಭರಿತ ಯೂರಿಯಾವನ್ನು ಗಟ್ಟಿಯಾದ ಮೊಟ್ಟೆಯ ಬಿಳಿ ಭಾಗಕ್ಕೆ ಸೇರಿಸಲಾಯಿತು. ಈ ಮೂಲಕ ಗಟ್ಟಿಯಾದ ಭಾಗವನ್ನು ಮತ್ತೆ ತಿಳಿಗೊಳಿಸಲಾಯಿತು. ನಂತರ ಯಂತ್ರದಲ್ಲಿ ಹಾಕಿ ಜೋರಾಗಿ ತಿರುಗಿಸಲಾಗಿಯಿತು. ಆಗ ಪ್ರೊಟೀನ್ ಭರಿತ ಬಿಳಿ ಭಾಗ ಮೊದಲಿನಂತಾಯಿತು.

ಏನು ಉಪಯೋಗ? : ಈ ಸಂಶೋಧನೆಯಿಂದ ಮೊಟ್ಟೆಯನ್ನು ಉಪಯೋಗಿಸುವ ಚೀಸ್, ಇತರ ಆಹಾರಗಳ ತಯಾರಿಕೆ ಹಾಗೂ ಕ್ಯಾನ್ಸರ್ ಚಿಕಿತ್ಸೆಯ ಅಭಿವೃದ್ಧಿಗೆ ಉಪಯೋಗಿಸಬಹುದು ಎಂದು ಡಾ. ಗ್ರೆಗರಿ ವೇಯ್ಸ್ ತಿಳಿಸಿದ್ದಾರೆ.

English summary
Scientists say they have found a way to reverse the effects that boiling has on the proteins found in egg whites. It could help streamline the drug development and food production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X