ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ ನೋಡಿ: ಹಬ್ಬಿದ ಕಾಡ್ಗಿಚ್ಚು ಕ್ಯಾಲಿಫೋರ್ನಿಯಾದಲ್ಲಿ ಆತಂಕ

By Manjunatha
|
Google Oneindia Kannada News

ಕ್ಯಾಲಿಫೋರ್ನಿಯಾ, ಆಗಸ್ಟ್ 06: ಕ್ಯಾಲಿಫೋರ್ನಿಯಾದ ಗಡಿ ಭಾಗದ ಕಾಡಿನಲ್ಲಿ ಉಂಟಾಗಿರುವ ಕಾಡ್ಗಿಚ್ಚು ದಿನೇ ದಿನೇ ಹೆಚ್ಚಾಗುತಿದ್ದು, ಬೆಂಕಿಯನ್ನು ತಹಬದಿಗೆ ತರಲು ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಕಳೆದೆರಡು ದಿನಗಳಲ್ಲಿ ಮೆಂಡೊನಿಸೊ ಕಾಂಪ್ಲೆಕ್ಸ್‌ ಕಾಡ್ಗಿಚ್ಚು ವೇಗವಾಗಿ ಹಬ್ಬುತ್ತಿದ್ದು, ಹೆಲಿಕಾಪ್ಟರ್‌ಗಳನ್ನು ಬಳಸಿ ಬೆಂಕಿ ಆರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಕ್ಯಾಲಿಫೋರ್ನಿಯಾ ಗಡಿಯಲ್ಲಿ ಭಾರೀ ಕಾಳ್ಗಿಚ್ಚು, ಮಾರ್ಗಗಳು ಬಂದ್ ಕ್ಯಾಲಿಫೋರ್ನಿಯಾ ಗಡಿಯಲ್ಲಿ ಭಾರೀ ಕಾಳ್ಗಿಚ್ಚು, ಮಾರ್ಗಗಳು ಬಂದ್

ಒಣ ಹವೆ ಇರುವ ಕಾರಣ ಬೆಂಕಿ ವೇಗವಾಗಿ ಹಬ್ಬುತ್ತಿದ್ದು, ಈ ಕಾಡ್ಗಿಚ್ಚು ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ನಾಲ್ಕನೇ ಅತಿದೊಡ್ಡ ಪ್ರಮಾಣದ ಕಾಡ್ಗಿಚ್ಚು ಎನ್ನಲಾಗಿದೆ. ಈ ಕಾಡ್ಗಿಚ್ಚು ಈ ವರೆಗೆ 2.66 ಲಕ್ಷ ಎಕರೆ ಕಾಡನ್ನು ನಾಶ ಮಾಡಿದೆ.

ವೇಗವಾಗಿ ಹರಡುತ್ತಿದೆ ಕಾಡ್ಗಿಚ್ಚು

ವೇಗವಾಗಿ ಹರಡುತ್ತಿದೆ ಕಾಡ್ಗಿಚ್ಚು

ವೇಗವಾಗಿ ಹರಡುತ್ತಿರುವ ಕಾಡ್ಗಿಚ್ಚು ಈ ವರೆಗೆ 7 ಜನರನ್ನು ಬಲಿ ತೆಗೆದುಕೊಂಡಿದ್ದು, 20 ಮಂದಿ ನಾಪತ್ತೆಯಾಗಿದ್ದಾರೆ. ಗಾಳಿಯು ಸಹ ಕಾಡ್ಗಿಚ್ಚು ವೇಗವಾಗಿ ಹರಡಲು ಸಹಾಯ ಮಾಡುತ್ತಿದ್ದು ಕಾಡ್ಗಿಚ್ಚು ಇನ್ನಷ್ಟು ಹಾನಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಮಾನಗಳು, ಹೆಲಿಕಾಪ್ಟರ್‌ಗಳ ಬಳಕೆ

ವಿಮಾನಗಳು, ಹೆಲಿಕಾಪ್ಟರ್‌ಗಳ ಬಳಕೆ

ಹೆಲಿಕಾಪ್ಟರ್‌ಗಳು, ವಿಮಾನಗಳ ಮೂಲಕ ನೀರು ಚೆಲ್ಲಿ ಕಾಡ್ಗಿಚ್ಚು ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಹಲವು ಹೆಲಿಕಾಪ್ಟರ್‌ಗಳು, ಸೇನಾ ವಿಮಾನಗಳನ್ನು ಬಳಸಲಾಗುತ್ತಿದೆ. ಜೊತೆಗೆ ಸಾವಿರಾರು ಅಗ್ನಿಶಾಮಕ ದಳದ ಸಿಬ್ಬಂದಿ, ಹಲವು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿವೆ.

ವೈರಲ್ ವಿಡಿಯೋ: ಕ್ಯಾಲಿಫೋರ್ನಿಯಾವನ್ನು ನರಕವಾಗಿಸಿದ ಭೂಕುಸಿತ!ವೈರಲ್ ವಿಡಿಯೋ: ಕ್ಯಾಲಿಫೋರ್ನಿಯಾವನ್ನು ನರಕವಾಗಿಸಿದ ಭೂಕುಸಿತ!

ವಾಹನಗಳೆಲ್ಲಾ ಸುಟ್ಟು ಕರಕಲು

ವಾಹನಗಳೆಲ್ಲಾ ಸುಟ್ಟು ಕರಕಲು

ಕಾಡ್ಗಿಚ್ಚು ಹಬ್ಬುತ್ತಿದ್ದಂತೆ ಸುತ್ತಮುತ್ತಲಿನ ವಾಸ ಪ್ರದೇಶದಿಂದ ಜನರನ್ನು ಖಾಲಿ ಮಾಡಿಸಲಾಗಿದ್ದು, ಬೆಂಕಿಗೆ ಅಡ್ಡ ಸಿಕ್ಕ ವಾಹನಗಳೆಲ್ಲಾ ಸುಟ್ಟು ಕರಕಲಾಗಿವೆ. ಈವರೆಗೆ ಕಾಡ್ಗಿಚ್ಚಿನಿಂದ ಅಂದಾಜು 1000 ಕೋಟಿಗೂ ಅಧಿಕ ನಷ್ಟವಾಗಿದೆ ಎನ್ನಲಾಗಿದೆ.

ವಿಮಾನದಿಂದ ಹೀಗೆ ಕಾಣುತ್ತದೆ

ವಿಮಾನದಿಂದ ಹೀಗೆ ಕಾಣುತ್ತದೆ

ಕಾಡ್ಗಿಚ್ಚು ಹಬ್ಬಿರುವ ಕ್ಯಾಲಿಫೋರ್ನಿಯಾದ ಕಾಡಿನಿಂದ 30000 ಅಡಿಗಳು ಮೇಲೆ ವಿಮಾನದಲ್ಲಿ ಹಾರಾಟ ಮಾಡಿದಾಗ ಕಾಡ್ಗಿಚ್ಚು ಹೀಗೆ ಕಾಣುತ್ತದೆ.

English summary
California forest fire expanding day by day. till now it burnt 2.66 lakh acres forest. and took 7 life. This is the fourth largest forest fire in the California history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X