ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಕ್ಯಾಲಿಫೋರ್ನಿಯಾವನ್ನು ನರಕವಾಗಿಸಿದ ಭೂಕುಸಿತ!

|
Google Oneindia Kannada News

Recommended Video

ಕ್ಯಾಲಿಫೊರ್ನಿಯಾವನ್ನು ನರಕವಾಗಿಸಿದ ಭೂಕುಸಿತ | Oneindia Kannada

ಮೊಂಟೆಸಿಟೊ(ಕ್ಯಾಲಿಫೋರ್ನಿಯಾ), ಜನವರಿ 11: 'ಮೊದಲ ಮಹಾಯುದ್ಧದ ರಣರಂಗದಂತೆ ಕಾಣುತ್ತಿದೆ' ಎಂದು ಭೂಕುಸಿತಕ್ಕೊಳಗಾದ ಅಮೆರಿಕದ ಕ್ಯಾಲಿಫೋರ್ನಿಯಾದ ಮೊಟೆಸಿಟೊವನ್ನು ಸ್ಥಳೀಯರೊಬ್ಬರು ಚಿತ್ರಿಸಿದ್ದರಲ್ಲಿ ಉತ್ಪ್ರೇಕ್ಷೆಯಿಲ್ಲ. ಅಲ್ಲಿನ ಸ್ಥಿತಿ ಅಕ್ಷರಶಃ ರಣರಂಗವೇ ಆಗಿದೆ! ಆದರೆ ಇದು ಎರಡು ಸೇನೆಯ ನಡುವಿನ ಯುದ್ಧವಲ್ಲ, ಪ್ರಕೃತಿ-ಪುರಷನ ನಡುವಿನ ಯುದ್ಧವಷ್ಟೆ!

ಅತಿಯಾದ ಮಳೆಯಿಂದಾಗಿ ಮಣ್ಣು ಕುಸಿಯಲಾರಂಭಿಸಿದ್ದರಿಂದ, ನೀರಿನೊಂದಿಗೆ ಕಲೆಸಿಕೊಂಡ ಮಣ್ಣು ಪ್ರವಾಹದ ರೂಪದಲ್ಲಿ ಮುನ್ನುಗ್ಗುತ್ತಿರುವ ದೃಶ್ಯ ಅಲ್ಲಿ ಕಣ್ಣಿಗೆ ರಾಚುತ್ತದೆ.

ಸಂಕ್ರಾಂತಿ ವಿಶೇಷ ಪುಟ

ಇದುವರೆಗೂ 17 ಜನ ಅಸುನೀಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಇಲ್ಲಿನ ವಿಕೋಪ ನಿಯಂತ್ರಣ ಕೇಂದ್ರ ತಿಳಿಸಿದೆ. ನಿರಂತರವಾಗಿ ಹರಿಯುತ್ತಿರುವ ಕೆಸರು ಮಣ್ಣಿನ ಪ್ರವಾಹದಲ್ಲಿ ಹೂತುಹೋದವರೆಷ್ಟು ಜನರೋ! ರಕ್ಷಣಾ ಕಾರ್ಯವೇನೋ ನಿರಂತರವಾಗಿ ನಡೆಯುತ್ತಿದೆ. ಆದರೂ ಮಣ್ಣಿನಲ್ಲಿ ಮಣ್ಣಾಗುತ್ತಿರುವ ಮನೆಗಳು, ಹೂತುಹೋಗುತ್ತಿರುವ ವಾಹನಗಳು, ಬುಡಸಮೇತ ಬೀಳುತ್ತಿರುವ ಮರಗಳು ನಿಸರ್ಗದ ಅಪರಿಮಿತ ಶಕ್ತಿಯನ್ನು ಪ್ರದರ್ಶಿಸುತ್ತಿವೆ. ಆದರೆ ಹೂತುಹೋದ ಮಣ್ಣಿನಲ್ಲೂ ತಣ್ಣನೆ ಉಸಿರಾಡುತ್ತಿರುವ ಜೀವವನ್ನು ಪ್ರಾಣದ ಹಂಗು ತೊರೆದು ರಕ್ಷಿಸುತ್ತಿರುವ ರಕ್ಷಣಾ ಸಿಬ್ಬಂದಿಗಳು ಮಾನವೀಯತೆಯ ಇರುವನ್ನೂ ತೋರಿಸುತ್ತಿದ್ದಾರೆ

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಭೂಕುಸಿತ: 17 ಸಾವುಕ್ಯಾಲಿಫೋರ್ನಿಯಾದಲ್ಲಿ ಭೀಕರ ಭೂಕುಸಿತ: 17 ಸಾವು

ನಾನು ಸತ್ತೇ ಹೋದೆ ಎಂದುಕೊಂಡಿದ್ದೆ!

ಮಣ್ಣಿನ ಪ್ರವಾಹದಲ್ಲಿ ಸಿಲುಕಿ ತಾನಿನ್ನು ಬದುಕಲಾರೆ ಎಂದುಕೊಂಡಿದ್ದ ಮಹಿಳೆಯೊಬ್ಬರನ್ನು ರಕ್ಷಣಾ ಸಿಬ್ಬಂದಿಗಳು ಮೇಲಕ್ಕೆತ್ತಿ ಬದುಕಿಸಿದ್ದಾರೆ. ಕೆಸರು ಮಣ್ಣಿನಲ್ಲಿ ಕ್ಷೀಣವಾಗಿ ಉಸಿರಾಡುತ್ತಿದ್ದ ಮಹಿಳೆ ಮೇಲೇಳುತ್ತಿದ್ದಂತೆಯೇ,"I thought I was dead for a minute there"(ಒಂದುಕ್ಷಣ ನಾನಲ್ಲಿ ಸತ್ತೇ ಹೋದೆ ಎಂದುಕೊಂಡಿದ್ದೆ) ಎಂದು ಉದ್ಗರಿಸಿದರು.

Array

ಕೆಸರು-ಮಣ್ಣಿನ ಪ್ರವಾಹ ನೋಡಿ!

ಮಣ್ಣು, ಕೆಸರು, ಕಸಕಡ್ಡಿಗಳೊಂದಿಗೆ ಬೆರೆತ ಮಳೆ ನೀರು ಪ್ರವಾಹ ಸೃಷ್ಟಿಸಿ ಮುನ್ನುಗ್ಗುತ್ತಿರುವ ದೃಶ್ಯವನ್ನು ಮೈಜುವೆಲ್ ಮಾರ್ಕ್ವೆಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಎದೆನಡುಗಿಸುವ ವಿಡಿಯೋ, ಚಿತ್ರಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಎದೆನಡುಗಿಸುವ ವಿಡಿಯೋ, ಚಿತ್ರ

ಅವಶೇಷಗಳಾದ ದುಬಾರಿ ಕಾರುಗಳು

ಎಲ್ಲೆಲ್ಲೂ ಉದುರಿಬಿದ್ದ ಮರಗಳು, ಅವಶೇಷಗಳಂತಾದ ದುಬಾರಿ ಕಾರುಗಳನ್ನು ತಾವು ವಾಹನ ಚಲಾಯಿಸುತ್ತಿದ್ದ ದಾರಿಯಲ್ಲಿ ಕಂಡ ಅನೌಶಾಹ್ ರಾಸ್ತಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಭೂಕುಸಿತದ ನಂತರ ಕಂಡುಬಂದ ದೃಶ್ಯ ಇದು.

ಸ್ಮಶಾನ ಸದೃಶ ದೃಶ್ಯ

ಮನೆಯ ಮೇಲ್ಚಾವಣಿಗಳನ್ನು ಹಾರಿಸಿದ ಗಾಳಿ, ಚಲ್ಲಾಪಿಲ್ಲಿಯಾಗಿ ಬಿದ್ದ ವಾಹನಗಳು, ಜೀವ ಉಳಿಸಿಕೊಳ್ಳುವುದಕ್ಕಾಗಿ ಜನರೆಲ್ಲ ಸುರಕ್ಷಿತ ಸ್ಥಳಕ್ಕೆ ಧಾವಿಸಿರುವುದರಿಂದ ಯಾರೂ ಇಲ್ಲದ ಸ್ಮಶಾನ ಸದೃಶ್ಯ ದೃಶ್ಯ ಮೊಂಟೆಸಿಟೊವನ್ನು ಆವರಿಸಿದೆ.

ಜೀವದ ಹಂಗು ತೊರೆದು ರಕ್ಷಣೆ

ಭೂಕುಸಿತದಿಂದಾಗಿ ಕಾರಿನಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿದ ವಿಡಿಯೋ ಸಹ ವೈರಲ್ ಆಗಿದೆ. ತಮ್ಮ ಜೀವದ ಹಂಗು ತೊರೆದು ಮೊಂಟೆಸಿಟೊದಾದ್ಯಂತ ರಕ್ಷಣಾ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

ಭೀಕರ ದೃಶ್ಯದ ವೈಮಾನಿಕ ನೋಟ

ಮೊಂಟೆಸಿಟೊದ ಚಿತ್ರಣವನ್ನೇ ಬದಲಿಸಿದ ಭೂಕುಸಿತ ಮಾಡಿದ ಅವಾಂತರಗಳು ನೂರಾರು, 17 ಜನರ ಜೀವದೊಂದಿಗೆ ಸಾವಿರಾರು ಕೋಟಿ ರೂ ಮೌಲ್ಯದ ಆಸ್ತಿ, ಪಾಸ್ತಿ ಹಾನಿಯೂ ಸಂಭವಿಸಿದೆ. ಈ ಭೀಕರ ಮಣ್ಣಿನ ಕುಸಿತದ ವೈಮಾನಿಕ ದೃಶ್ಯವನ್ನು ನೋಡಿದರೆ ಮೊಂಟೆಸಿಟೊ ಜನರ ಆರ್ತನಾದ ಅರ್ಥವಾದೀತು.

English summary
California mudslide: the death toll in the brutal mudslides in southern California rose to 17 on Jan 9th and as many as 17 people were reported to be missing. Several homes and cars were swept away in the mudslides and flooding triggered by the torrential rainstorm. Here are couple of videos of brutal mudslide on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X