ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂಟ್ಯೂಬ್ ಕೇಂದ್ರ ಕಚೇರಿಯಲ್ಲಿ ಶೂಟೌಟ್: ಆರೋಪಿ ಮಹಿಳೆ ಸಾವು

|
Google Oneindia Kannada News

Recommended Video

ಕ್ಯಾಲಿಫೋರ್ನಿಯಾದ ಯುಟ್ಯೂಬ್ ಕೇಂದ್ರ ಕಛೇರಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ | Oneindia Kannada

ಕ್ಯಾಲಿಫೋರ್ನಿಯಾ, ಏಪ್ರಿಲ್ 04: ಮಹಿಳಾ ಗನ್ ಮ್ಯಾನ್ ವೊಬ್ಬರು ನಾಲ್ವರನ್ನು ಗಾಯಗೊಳಿಸಿ, ನಂತರ ತಾವೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬ್ರ್ಯುನೋದಲ್ಲಿರುವ ಯೂಟ್ಯೂಬ್ ಕೇಂದ್ರ ಕಚೇರಿಯಲ್ಲಿ ನಡೆದಿದೆ.

ಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳುಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳು

ಆರೋಪಿ ಮಹಿಳೆ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಾಲ್ಕು ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮೃತ ಶೂಟರ್ ಅನ್ನು ನಸಿಮ್ ನಜಾಫಿ ಅಘದಮ್ ಎಂದು ಶಂಕಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಘಟನೆಯಾದ ಕೆಲ ಹೊತ್ತಿನ ತನಕ ಯೂಟ್ಯೂಬ್ ಕಚೇರಿ ಬಳಿ ಓಡಾಡದಂತೆ ಜನರಿಗೆ ನಿರ್ಬಂಧ ಹೇರಲಾಗಿತ್ತು. ಶೂಟೌಟ್ ಗೆ ಕಾರಣ ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಅಮೆರಿಕದಲ್ಲಿ ಶೂಟೌಟ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ ಫೆಬ್ರವರಿ 15 ರಂದು ಇಲ್ಲಿನ ಫ್ಲೋರಿಡಾದ ಶಾಲೆಯೊಂದರಲ್ಲಿ ಅದೇ ಶಾಲೆಯ ಮಾಜಿ ವಿದ್ಯಾರ್ಥಿಯೋರ್ವ ನಡೆಸಿದ ಶೂಟೌಟ್ ನಲ್ಲಿ 17 ಜನ ಸಾವನ್ನಪ್ಪಿದ್ದರು. ಅಮೆರಿಕದ ಇತಿಹಾಸದ ಪುಟಗಳಲ್ಲಿ ಇದೊಂದು ಘೋರ ಅಧ್ಯಾಯವಾಗಿ ಅಚ್ಚೊತ್ತಿದೆ.

ಡಿ.7 ರಂದು ಇಲ್ಲಿನ ನ್ಯೂಮೆಕ್ಸಿಕೋದ ಅಜ್ಟೆಕ್ ಹೈಸ್ಕೂಲಿನಲ್ಲಿ ನಡೆದ ಶೂಟೌಟ್ ನಲ್ಲಿ ಶೂಟರ್ ಸೇರಿ ಮೂರು ಜನ ಮೃತರಾಗಿದ್ದರು.

English summary
A female gunman reportedly died of a self-inflicting gunshot in an incident of cross-firing at the headquarters of the YouTube on Tuesday at San Bruno in California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X