ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಗುರಿಯಿಂದ ನೇಪಾಳಕ್ಕೆ ಬಸ್‌ ಸೇವೆ ಆರಂಭ

|
Google Oneindia Kannada News

ಸಿಲಿಗುರಿ, ಜು.7: ಎರಡು ವರ್ಷಗಳ ಸುದೀರ್ಘ ಅವಧಿಯ ನಂತರ ಖಾಸಗಿ ಬಸ್ ನಿರ್ವಾಹಕರು ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯ ಸಹಾಯದಿಂದ ಸಿಲಿಗುರಿ ಕಕ್ಕರ್ವಿಟ್ಟಾ ಕಠ್ಮಂಡು ಬಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ.

ಪಶ್ಚಿಮ ಬಂಗಾಳದ ರಾಜ್ಯ ಸಾರಿಗೆ ಸಚಿವ ಫಿರ್ಹಾದ್ ಹಕೀಂ ಅವರು ಬಸ್ ಸೇವೆ ಉದ್ಘಾಟಿಸಿದರು. ಬಸ್ 2 ಗಂಟೆಗೆ ತೇನ್ಸಿಂಗ್ ನಾರ್ಗೆ ಬಸ್ ಟರ್ಮಿನಲ್‌ನಿಂದ ಬಸ್‌ ಹೊರಟು 615 ಕಿ. ಮೀ. ಕ್ರಮಿಸುತ್ತದೆ. ಇದು ಮರುದಿನ ಬೆಳಿಗ್ಗೆ ಸುಮಾರು 7 ಗಂಟೆಗೆ ಕಠ್ಮಂಡು ತಲುಪುತ್ತದೆ. ಒಬ್ಬರಿಗೆ ಟಿಕೆಟ್ ದರ 1500 ರೂಪಾಯಿ ಆಗಿರಲಿದೆ.

ಭಾರತ ಟೂ ಬಾಂಗ್ಲಾದೇಶ ಬಸ್‌ ಸೇವೆ ಪುನಾರಂಭ ಭಾರತ ಟೂ ಬಾಂಗ್ಲಾದೇಶ ಬಸ್‌ ಸೇವೆ ಪುನಾರಂಭ

ಸುದ್ದಿಸಂಸ್ಥೆ ಎಎನ್‌ಐಯೊಂದಿಗೆ ಮಾತನಾಡಿದ ಸಚಿವ ಫಿರ್ಹಾದ್‌ ಹಕೀಂ, ಎರಡು ವರ್ಷಗಳ ದೀರ್ಘ ಅವಧಿಯ ನಂತರ ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯ ಸೇವೆಯನ್ನು ಪ್ರಾರಂಭಿಸುತ್ತಿರುವುದಕ್ಕೆ ನನಗೆ ಇಂದು ಸಂತೋಷವಾಗಿದೆ. ಇದರಿಂದ ಉತ್ತರ ಬಂಗಾಳ ಮತ್ತು ನೇಪಾಳದ ನಡುವಿನ ಪ್ರವಾಸೋದ್ಯಮವು ಉತ್ತೇಜನಗೊಳ್ಳುತ್ತದೆ. ಖಂಡಿತವಾಗಿಯೂ ಇದು ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ ಎಂದರು

Bus service started from Siliguri to Nepal

ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆ ಪ್ರಯಾಣಿಕರನ್ನು ಮನರಂಜಿಸಲು ಹೆಚ್ಚು ಹೆಚ್ಚು ಬಸ್‌ಗಳನ್ನು ಓಡಿಸಲಿದೆ. ಸಿಲಿಗುರಿಯಿಂದ ಬಾಂಗ್ಲಾದೇಶದ ಢಾಕಾಗೆ ಬಸ್ ಸೇವೆಯನ್ನು ನಡೆಸಲು ಬಾಂಗ್ಲಾದೇಶದ ಕಡೆಯಿಂದ ಎನ್‌ಒಸಿಗಾಗಿ ಕಾಯುತ್ತಿದ್ದಾರೆ. ಅವರು ಅನುಮತಿ ಪಡೆದ ತಕ್ಷಣ ಪ್ರಾರಂಭಿಸುತ್ತಾರೆ ಎಂದು ಸಚಿವ ಫಿರ್ಹಾದ್‌ ಹಕೀಂ ಹೇಳಿದರು.

ಜುಲೈ 12ರಿಂದ ಕರ್ನಾಟಕದಿಂದ ಕೇರಳಕ್ಕೆ ಸರ್ಕಾರಿ ಬಸ್‌ ಸೇವೆ ಆರಂಭಜುಲೈ 12ರಿಂದ ಕರ್ನಾಟಕದಿಂದ ಕೇರಳಕ್ಕೆ ಸರ್ಕಾರಿ ಬಸ್‌ ಸೇವೆ ಆರಂಭ

ಮೊದಲ ದಿನದ ಪ್ರಯಾಣಿಕರು ಮಾತನಾಡಿ, ನಮಗೆ ಬಸ್‌ ಸೇವೆಯಿಂದ ಸಮಯ ಕಡಿಮೆಯಾಗುತ್ತದೆ ಮತ್ತು ಪ್ರಯಾಣ ದರವು ಕೈಗೆಟುಕುವಂತಿದೆ ಎಂದು ಹೇಳಿದರು. ಭಾರತೀಯ ಬಸ್ ನಿರ್ವಾಹಕ ಅನುರಾಗ್ ಅಗರ್ವಾಲ್ ಮಾತನಾಡಿ, ಪ್ರವಾಸಿ, ವೈದ್ಯಕೀಯ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಜನರು ನೇಪಾಳಕ್ಕೆ ಪ್ರಯಾಣಿಸಲು ಈ ಬಸ್ ಸೇವೆ ಸಹಾಯ ಮಾಡುತ್ತದೆ ಎಂದರು.

Bus service started from Siliguri to Nepal

ನೇಪಾಳದ ಬಸ್ ನಿರ್ವಾಹಕರಾದ ಭರತ್ ತಿಮ್ಸಿಹ್ನಾ ಅವರು, ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಸರ್ಕಾರವು ಬಹುನಿರೀಕ್ಷಿತ ಬಸ್ ಸೇವೆಯನ್ನು ಪ್ರಾರಂಭಿಸಿರುವುದನ್ನು ನೋಡಲು ನಮಗೆ ಸಂತೋಷವಾಗಿದೆ. ಇದರಿಂದ ಉಭಯ ದೇಶಗಳ ಜನತೆಗೆ ಅನುಕೂಲವಾಗಲಿದೆ. ನಾವು ಭಾರತದೊಂದಿಗೆ ಉತ್ತಮ ಮತ್ತು ಆರೋಗ್ಯಕರ ಸಂಬಂಧವನ್ನು ಹೊಂದಿದ್ದೇವೆ, ಆದರೆ ಇದು ಮತ್ತೆ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.

Recommended Video

ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಮಾಡಿದ ಈ ತಪ್ಪಿನಿಂದ ಪಾಕಿಸ್ತಾನಕ್ಕೆ ಅದೃಷ್ಟ ಖುಲಾಯಿಸ್ತು | OneIndia Kannada

English summary
After a long period of two years, a private bus operator has started Siliguri Kakkarvita Kathmandu bus service with the help of North Bengal State Transport Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X