ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಇನ್ನುಮುಂದೆ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವಂತಿಲ್ಲ

|
Google Oneindia Kannada News

ಕೊಲಂಬೋ, ಮಾರ್ಚ್ 13: ಶ್ರೀಲಂಕಾದ ಮುಸ್ಲಿಂ ಮೂಲಭೂತವಾದಕ್ಕೆ ತೆರೆ ಎಳೆಯಲು ಸ್ಥಳೀಯ ಸರ್ಕಾರ ಮುಂದಾಗಿದೆ. ಇದರ ಪ್ರಾಥಮಿಕ ಹಂತದ ಕ್ರಮವಾಗಿ, ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಿಸಿ ಸಾವಿರಾರು ಇಸ್ಲಾಮಿಕ್ ಶಾಲೆಗಳನ್ನು ಮುಚ್ಚಲು ಶ್ರೀಲಂಕಾ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಶ್ರೀಲಂಕಾ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ, ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಇಡೀ ಮುಖವನ್ನು ಮುಚ್ಚುವಂತೆ ಬುರ್ಖಾ ಧರಿಸುವುದನ್ನು ನಿಷೇಧಿಸಲು ನಿರ್ಧರಿಸಲಾಗಿದೆ.

ಬುರ್ಖಾ ಬ್ಯಾನ್ ಆಗಲಿ, ಜೊತೆಗೆ ಗೂಂಗಟ್‌ ಕೂಡ: ಜಾವೆದ್ ಅಖ್ತರ್ಬುರ್ಖಾ ಬ್ಯಾನ್ ಆಗಲಿ, ಜೊತೆಗೆ ಗೂಂಗಟ್‌ ಕೂಡ: ಜಾವೆದ್ ಅಖ್ತರ್

ಈ ಹಿಂದೆ ಶ್ರೀಲಂಖಾದ ಮುಸ್ಲಿಂ ಮಹಿಳೆಯರು ಸಂಪೂರ್ಣ ಮುಖ ಮುಚ್ಚುವಂತೆ ಬುರ್ಖ ಧರಿಸಿರುವುದನ್ನು ನಾವು ನೋಡಿಲ್ಲ, ಆದರೆ ದೇಶದಲ್ಲಿ ಮೂಲಭೂತವಾದ ಹೆಚ್ಚುತ್ತಿರುವಂತೆ ಈ ಸಂಪೂರ್ಣ ಮುಖ ಮುಚ್ಚುವಂತೆ ಬುರ್ಖಾ ಧರಿಸಲಾಗುತ್ತಿದೆ. ಹೀಗಾಗಿ ಇದನ್ನು ನಿಷೇಧಿಸುವುದು ಅನಿವಾರ್ಯವಾಗಿದೆ.

Burqa Sign Of Extremism, We Will Definitely Ban It Sri Lanka Minister

2019ರಲ್ಲಿ ಚರ್ಚ್‌ ಮೇಲೆ ನಡೆದ ದಾಳಿಯಲ್ಲಿ 250 ಶ್ರೀಲಂಕಾ ಪ್ರಜೆಗಳು ಸಾವನ್ನಪ್ಪಿದ್ದರು, ಆಗಲೇ ಶ್ರೀಲಂಕಾದಲ್ಲಿ ತಾತ್ಕಾಲಿಕವಾಗಿ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿತ್ತು.

ಬುರ್ಖಾ ನಿಷೇಧದ ಜತೆಗೆ ಸರ್ಕಾರ ಮೂಲಭೂತವಾದವನ್ನು ಪಸರಿಸುತ್ತಿರುವ ಸಾವಿರಾರು ಇಸ್ಲಾಮಿಕ್ ಸಂಸ್ಥೆಗಳನ್ನು ಮುಚ್ಚಿ ಎಲ್ಲರೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.

ದೇಶದಲ್ಲಿ ತಮಗೆ ಬೇಕಾದ ಶಿಕ್ಷಣ ವ್ಯವಸ್ಥೆಯನ್ನು ಪಾಲಿಸಿಕೊಂಡು ಶಾಲೆಗಳನ್ನು ಆರಂಭಿಸಲು ಸಾಧ್ಯವಿಲ್ಲ.

English summary
Sri Lanka will ban the wearing of the burqa and shut more than a thousand Islamic schools, a government minister said on Saturday, the latest actions affecting the country's minority Muslim population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X