• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಚ್ಚಿಬಿತ್ತು ಯುರೋಪ್: ಪತ್ರಕರ್ತೆಯ ಅತ್ಯಾಚಾರ-ಕೊಲೆ, ಕಾರಣ ನಿಗೂಢ!

|

ಪ್ಯಾರಿಸ್, ಅಕ್ಟೋಬರ್ 09: ಬಲ್ಗೇರಿಯಾದ 30 ವರ್ಷ ವಯಸ್ಸಿನ ಪತ್ರಕರ್ತೆ ವಿಕ್ಟೋರಿಯಾ ಮಾರಿನೋವಾ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ಯುರೋಪನ್ನು ಬೆಚ್ಚಿಬೀಳಿಸಿದೆ.

ಅ.06 ರಂದು ಯುರೋಪಿಯನ್ ದೇಶವಾದ ಬಲ್ಗೇರಿಯಾದ ರೂಸ್ ಎಂಬಲ್ಲಿ ಟಿವಿ ಪತ್ರಕರ್ತೆ, ನಿರೂಪಕಿ ವಿಕ್ಟೋರಿಯಾ ಮಾರಿನೋವಾ ಅವರ ಹತ್ಯೆಯಾಗಿದ್ದು, ಯುರೋಪಿನಲ್ಲಿ ಇದೇ ವರ್ಷದಲ್ಲಿ ನಡೆದ ಮೂರನೇ ಪತ್ರಕರ್ತರ ಕೊಲೆ ಇದಾಗಿದೆ!

ವಿಕ್ಟೋರಿಯಾ ತನಿಖಾ ಪತ್ರಕರ್ತೆಯಾಗಿದ್ದರು. ಅವರ ಪ್ರಾಣಕ್ಕೆ ಅದೇ ಕುತ್ತಾಗಿರಬಹುದು ಎಂದು ಅಂದಾಜಿಸಲಾಗಿದೆ. ಕೊಲೆಗೆ ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ, ಇತ್ತೀಚೆಗೆ ಕೆಲವು ತನಿಖಾ ವರದಿಗಳನ್ನು ಅವರು ಸಿದ್ಧಪಡಿಸಿದ್ದೇ ಕೆಲವರ ಕೆಂಗಣ್ಣಿಗೆ ಗುರಿಯಾಗಿರಬಹುದು ಎನ್ನಲಾಗಿದೆ.

ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ

ವಿಕ್ಟೋರಿಯಾ ಅವರ ಅತ್ಯಾಚಾರ ಮತ್ತು ಹತ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟಿಸಿದೆ.

ಭ್ರಷ್ಟಾಚಾರದ ಬಗಗೆ ವರದಿ ಮಾಡುತ್ತಿದ್ದ ವಿಕ್ಟೋರಿಯಾ

ಬಲ್ಗೇರಿಯಾದ ಪತ್ರಕರ್ತೆ ವಿಕ್ಟೋರಿಯಾ ಮಾರಿನೊವಾ ಅವರ ಅತ್ಯಾಚಾರ ಮತ್ತು ಹತ್ಯೆಯಾಗಿದೆ. ಅವರು ಯುರೋಪಿನಲ್ಲಿ ಸಾರ್ವಜನಿಕ ನಿಧಿ ದುರ್ಬಳಕೆಯಾಗುತ್ತಿರುವುದು ಮತ್ತು ಅದರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖಾ ವರದಿ ತಯಾರಿಸುತ್ತಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ರುಸ್ಲಾನ್ ಟ್ರಾಡ್

ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವರು

ಯುರೋಪ್ ನಲ್ಲಿ ಮಾಧ್ಯಮ ಸ್ವಾತಂತ್ರ್ಯವಿಲ್ಲ!

ಆಕೆಯ ಕೊನೆಯ ವರದಿ ಭ್ರಷ್ಟಾಚಾರದ ಕುರಿತಾಗಿತ್ತು. ನನ್ನ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯವಿಲ್ಲ ಎಂದು ವಿಶಃಆದ ವ್ಯಕ್ತಪಡಿಸಿದ್ದಾರೆ ಡೆನಿಸ್ಟಾ ಸೆಕೊವಾ.

ಕಂಗನಾಳ ಕೇಶ ವಿನ್ಯಾಸಕನ ಮೇಲೆ ಅತ್ಯಾಚಾರದ ಆರೋಪ

ಪತ್ರಕರ್ತರ ಮಾನವ ಹಕ್ಕು ಕಸಿಯುವ ಯತ್ನ

ವಿಕ್ಟೋರಿಯಾ ಅವರ ಹತ್ಯೆ ಕೇವಲ ಪತ್ರಿಕಾ ಸ್ವಾತಂತ್ರ್ಯದ ಹರಣವನ್ನಷ್ಟೇ ಸೂಚಿಸುತ್ತಿಲ್ಲ. ಆದರೆ ಭ್ರಷ್ಟಾಚಾರ, ಅನೈತಿಕತೆಯ ವಿರುದ್ಧ ಹೋರಾಡುವ ಪತ್ರಕರ್ತರನ್ನು ಹೀಗೆ ಮೌನವಾಗಿಸುವುದು ಪತ್ರಕರ್ತರ ಮಾನವ ಹಕ್ಕುಗಳನ್ನೂ ಕಸಿದಂತೆ ಎಂದಿದ್ದಾರೆ ಅನಾ ಜೆಲಿಯಾಕೊವಾ.

ಆಕೆಗೆ ಗೌರವ ನೀಡುವುದು ಹೇಗೆ?

ಬವಿಕ್ಟೋರಿಯಾ ಅವರಿಗೆ ಗೌರವ ನೀಡುವುದಕ್ಕಿರುವ ಅತ್ಯುತ್ತಮ ವಿಧಾನ ಎಂದರೆ, ಆಕೆ ಅರ್ಧಕ್ಕೇ ನಿಲ್ಲಿಸಿದ ತನಿಖೆಯನ್ನು ಎಲ್ಲಾ ಮಾಧ್ಯಮಗಳೂ ಪೂರ್ಣಗೊಳಿಸುವುದು. ಮತ್ತು ಅದನ್ನು ಬಯಲಿಗೆಳೆಯುವುದು ಎಂದು ಫ್ರಾಗ್ ಬೆಲ್ಟರ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bulgarian journalist Viktoria Marinova, who was an investigative reporter in a TV channesl raped and murdered on Oct 6th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more