ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವ್ಯಭಿಚಾರ, ಸಲಿಂಗಕಾಮಕ್ಕೆ ಬ್ರೂನೈನಲ್ಲಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ'

By ಅನಿಲ್ ಆಚಾರ್
|
Google Oneindia Kannada News

ಬ್ರೂನೈನಲ್ಲಿ ವ್ಯಭಿಚಾರ, ಸಲಿಂಗ ಕಾಮದ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನು ಮುಂದಿನ ವಾರದಿಂದ ಜಾರಿಗೆ ಬರಲಿದೆ. ಅದು ಕೂಡ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ವಿಧಿಸಲಾಗುತ್ತದೆ. ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ವಿಪರೀತ ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಷರಿಯಾ ಕಾನೂನಿನ ಅಡಿ ಈ ಶಿಕ್ಷೆ ವಿಧಿಸುವುದಕ್ಕೆ ತಡೆ ಹಾಕಲಾಗಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶ್ರೀಮಂತ ದೇಶದಲ್ಲಿನ ಈ ಕಾನೂನಿನ ಬಗ್ಗೆ ಆತಂಕ ವ್ಯಕ್ತವಾಗಿದೆ. ನೆರೆ ದೇಶಗಳಾದ ಮಲೇಷ್ಯಾ ಮತ್ತು ಇಂಡೋನೇಷ್ಯಾಕ್ಕಿಂತ ಇಸ್ಲಾಮ್ ಅನ್ನು ಬಹಳ ಕಠಿಣವಾಗಿ ಇಲ್ಲಿ ಪಾಲಿಸಲಾಗುತ್ತಿದೆ. ಇನ್ನು ಮುಂದಿನ ವಾರದಿಂದ ಮತ್ತೊಂದು ಕಾನೂನು ಜಾರಿಗೆ ಬರಲಿದೆಯಂತೆ: ಕಳವು ಮಾಡಿದರೆ ಕೈ-ಕಾಲು ಕತ್ತರಿಸುವ ಶಿಕ್ಷೆ ಜಾರಿಗೆ ಬರಲಿದೆ.

ಪುಟ್ಟ ದೇಶವಾದ ಬ್ರೂನೈನಲ್ಲಿ ಈಗ ಸುಲ್ತಾನರ ಅಡಳಿತವಿದೆ. ಸಲಿಂಗ ಕಾಮ ಈಗಾಗಲೇ ಈ ದೇಶದಲ್ಲಿ ಕಾನೂನುಬಾಹಿರ ಆಗಿದೆ. ಆದರೆ ಇನ್ನು ಮುಂದೆ ಮರಣ ದಂಡನೆ ವಿಧಿಸಲಾಗುತ್ತದೆ. ಈ ಕಾನೂನು ಮುಸ್ಲಿಮರಿಗೆ ಮಾತ್ರ ಅನ್ವಯಿಸುತ್ತದೆ. ಕಳವು ಮಾಡಿ ಮೊದಲ ಬಾರಿಗೆ ಸಿಕ್ಕಿಹಾಕಿಕೊಂಡರೆ ಬಲಗೈ ಕತ್ತರಿಸಲಾಗುತ್ತದೆ. ಎರಡನೇ ಬಾರಿಗೆ ತಪ್ಪು ಮಾಡಿದರೆ ಎಡಗಾಲು ಕತ್ತರಿಸಲಾಗುತ್ತದೆ.

ಅಮಾನವೀಯ ಶಿಕ್ಷೆಯನ್ನು ಜಾರಿಗೆ ತರಬಾರದು

ಅಮಾನವೀಯ ಶಿಕ್ಷೆಯನ್ನು ಜಾರಿಗೆ ತರಬಾರದು

ಈ ಹೊಸ ಶಿಕ್ಷೆಯನ್ನು ತಕ್ಷಣವೇ ನಿಲ್ಲಿಸುವಂತೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಆಗ್ರಹಿಸಿದೆ. ಈಗ ಶಿಕ್ಷೆ ವಿಧಿಸುತ್ತಿರುವ ಸಲಿಂಗ ಕಾಮದ ವಿಚಾರಕ್ಕೆ ಬಂದರೆ, ಇಬ್ಬರು ವಯಸ್ಕರರು ಪರಸ್ಪರ ಒಪ್ಪಿಗೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ತಪ್ಪೇನು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇಂಥ ಅಮಾನವೀಯ ಶಿಕ್ಷೆಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಲಾಗಿದೆ.

ಏಪ್ರಿಲ್ 3ನೇ ತಾರೀಕು ಸುಲ್ತಾನನಿಂದ ಷರಿಯಾ ಕಾನೂನು ಘೋಷಣೆ

ಏಪ್ರಿಲ್ 3ನೇ ತಾರೀಕು ಸುಲ್ತಾನನಿಂದ ಷರಿಯಾ ಕಾನೂನು ಘೋಷಣೆ

ಹೊಸ ಷರಿಯಾ ಕಾನೂನು ಜಾರಿ ಬಗ್ಗೆ ಸುಲ್ತಾನ್ ಹಸ್ಸನ್ನಲ್ ಬೊಲ್ಕಾಯ್ ಅವರು ಏಪ್ರಿಲ್ ಮೂರನೇ ತಾರೀಕು ಘೋಷಣೆ ಮಾಡಲಿದ್ದಾರೆ ಎಂದು ಬ್ರೂನೈ ಧಾರ್ಮಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಆ ನಂತರವಷ್ಟೇ ಕಾನೂನು ಜಾರಿಯ ದಿನಾಂಕ ಗೊತ್ತಾಗಲಿದೆ ಎಂದು ಕೂಡ ಅವರು ಹೇಳಿದ್ದಾರೆ.

ಕಳವು ಮಾಡಿದರೆ ಕೈ ಕತ್ತರಿಸುವ ಕಾನೂನು ಜಾರಿಗೆ ತಯಾರಿ

ಕಳವು ಮಾಡಿದರೆ ಕೈ ಕತ್ತರಿಸುವ ಕಾನೂನು ಜಾರಿಗೆ ತಯಾರಿ

ಸದ್ಯಕ್ಕೆ ಕಳ್ಳತನ ಮಾಡಿದವರಿಗೆ ಕೈ ಕತ್ತರಿಸುವ ಕಾನೂನು ಜಾರಿಗೆ ತರಲು ಸಿದ್ಧತೆ ನಡೆಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಅಂದಹಾಗೆ ಬ್ರೂನೈನಲ್ಲಿ ಇಸ್ಲಾಮ್ ಯಾವ ಪರಿ ಕಟ್ಟರ್ ಆಗಿ ಆಚರಿಸಲಾಗುತ್ತದೆ ಅಂದರೆ, ಬಹುಸಂಖ್ಯಾತ ಮುಸ್ಲಿಮರಿಗೆ ಹೆದರಿಗೆ ದೊಡ್ಡ ಮಟ್ಟದಲ್ಲಿ ಕ್ರಿಸ್ ಮಸ್ ಆಚರಿಸುವುದನ್ನೇ ಕೈ ಬಿಡಲಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಬರಬಹುದೆಂಬ ಎಚ್ಚರಿಕೆ

ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಬರಬಹುದೆಂಬ ಎಚ್ಚರಿಕೆ

ಮಾನವ ಹಕ್ಕುಗಳ ಹೋರಾಟಗಾರ ಫಿಲ್ ರಾಬರ್ಟ್ ಸನ್ ಎಂಬುವವರು ಮಾತನಾಡಿ, ಇಂಥ ಕಾನೂನುಗಳನ್ನು ಜಾರಿ ಮಾಡಿದರೆ ವಿದೇಶಿ ಪ್ರವಾಸಿಗರು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ದೃಷ್ಟಿಯಲ್ಲಿ ಬ್ರೂನೈ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಇದು ಇನ್ನಷ್ಟು ಮುಂದುವರಿದರೆ ಬ್ರೂನೈ ದೇಶವನ್ನು ನಿಷೇಧಿಸಿ ಎಂಬ ಹೋರಾಟ ಪ್ರಬಲ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

English summary
Adultery and gay sex in Brunei will be subject to death by stoning from next week (April 3rd), authorities said, under a strict Sharia law that has been on hold for four years amid heavy criticism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X