• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

50 ದಿನ ಲಾಕ್‌ಡೌನ್, 30 ದಿನ ರಿಲ್ಯಾಕ್ಸ್: ಈ ಸೂತ್ರದಿಂದ ಕೊರೊನಾ ಓಡಿಸಬಹುದೆ?

|

ದೆಹಲಿ, ಮೇ 21: ಕೊರೊನಾ ವೈರಸ್‌ಗೆ ಸದ್ಯಕ್ಕೆ ಪರಿಹಾರ ಇಲ್ಲ. ಯಾವ ದೇಶಗಳು ಈವರೆಗೂ ಔಷಧಿ ಕಂಡು ಹಿಡಿದಿಲ್ಲ. ಅನೇಕ ಪ್ರಯೋಗಗಳು ನಡೆಯುತ್ತಿದ್ದರೂ ಅದು ಭರವಸೆ ಮೂಡಿಸುತ್ತಿದೆ ಹೊರತು, ಯಶಸ್ವಿಯಾಗುತ್ತಿಲ್ಲ. ವೈರಸ್‌ ಹುಟ್ಟಿಕೊಂಡು ಐದಾರು ತಿಂಗಳು ಕಳೆಯುತ್ತಿದೆ.

   ಸೀಲ್ ಡೌನ್ ಇದ್ದರು ಪಾದರಾಯನಪುರ ಜನ ಡೋಂಟ್ ಕೇರ್ | Seal Down | Padarayapura

   ವೈರಸ್‌ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರ ಒಂದೇ ಸದ್ಯಕ್ಕೆ ಪರಿಹಾರ ಎಂದು ಭಾವಿಸಿರುವ ದೇಶಗಳು, ಸುದೀರ್ಘವಾಗಿ ಲಾಕ್‌ಡೌನ್‌ ಮೊರೆ ಹೋಗಿದೆ. ಲಾಕ್‌ಡೌನ್‌ ಶಾಶ್ವತವಲ್ಲ ಎಂದು ತಿಳಿದು ಈಗ ನಿಧಾನವಾಗಿ ರಿಲ್ಯಾಕ್ಸ್ ಗೆ ಮರುಳುತ್ತಿವೆ..

   ಕೊರೊನಾ ವೈರಸ್ 50 ಲಕ್ಷದ ಗಡಿ ದಾಟಿದ ಮೇಲೆ WHO ಸಂದೇಶವೇನು?

   ಮನುಷ್ಯನ ಜೀವನದಲ್ಲಿ ಕೊರೊನಾ ವೈರಸ್‌ ಬಹಳ ದಿನ ಉಳಿಯಲಿದೆ ಎಂದು ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಡೆ ಲಾಕ್‌ಡೌನ್‌ ತೆರವು, ಮತ್ತೊಂದಡೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ. ಇದೆಲ್ಲವನ್ನು ಗಮನಿಸಿದ ಬ್ರಿಟಿಷ್ ವಿಜ್ಞಾನಿಗಳು '50 ದಿನ ಲಾಕ್‌ಡೌನ್, 30 ದಿನ ರಿಲ್ಯಾಕ್ಸ್' ಎಂದ ಸೂತ್ರವನ್ನು ಪರಿಹಾರ ಎನ್ನುತ್ತಿದ್ದಾರೆ. ಏನಿದು ಸೂತ್ರ?

   30 ದಿನ ಕೆಲಸ, 50 ದಿನ ಲಾಕ್‌ಡೌನ್

   30 ದಿನ ಕೆಲಸ, 50 ದಿನ ಲಾಕ್‌ಡೌನ್

   ಕೊರೊನಾ ವೈರಸ್‌ನಿಂದ ಹೊರಬರುವುದು ಹೇಗೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಡಾ ರಾಜೀವ್ ಚೌಧರಿ ನೇತೃತ್ವದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿದ್ದು, '30 ದಿನ ಕೆಲಸ, 50 ದಿನ ಲಾಕ್‌ಡೌನ್' ಸೂತ್ರದ ಮೊರೆ ಹೋಗುವುದು ಉತ್ತಮ ಎಂದಿದ್ದಾರೆ. ಅಂದ್ರೆ, ಮೂವತ್ತು ದಿನಗಳ ಕಾಲ ಕೆಲಸ ಮಾಡುವುದು, ನಂತರ ಐವತ್ತು ದಿನಗಳ ಕಾಲ ಲಾಕ್‌ಡೌನ್‌ ಮಾಡುವುದು. ಇದು ನಿರಂತರವಾಗಿ ನಡೆಯಬೇಕಿದೆ. ಇದರಿಂದ ವೈರಸ್‌ ಹರಡುವಿಕೆಯ ಸರಪಳಿಯನ್ನು ಕಡಿತ ಮಾಡಬಹುದು ಎಂದು ಹೇಳಿದ್ದಾರೆ.

   2022ರವರೆಗೂ ಈ ಸೂತ್ರ ಅನಿವಾರ್ಯ

   2022ರವರೆಗೂ ಈ ಸೂತ್ರ ಅನಿವಾರ್ಯ

   ಈ ರೀತಿ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಕೆ ಕಾಣಬಹುದು. ಸಾಮಾಜಿಕ ಅಂತರವೂ ಕಾಪಾಡಬಹುದು. ಹಾಗೂ ಉದ್ಯೋಗ ಕಡಿತದಿಂದಲೂ ತಪ್ಪಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜಗತ್ತಿನ 16 ರಾಷ್ಟ್ರಗಳ ಅಂಕಿ ಅಂಶಗಳ ಆಧರಿಸಿ ಈ ಸಂಶೋಧನ ಮಾಡಿದ್ದು, 2022ರ ವರೆಗೂ ಈ ಸೂತ್ರ ಬಳಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

   ವಿಶ್ವ ಆರೋಗ್ಯ ಸಂಸ್ಥೆ ಕುರಿತು ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ

   ಪರೀಕ್ಷೆ, ಕ್ವಾರಂಟೈನ್ ಮುಂದುವರಿಯಬೇಕು

   ಪರೀಕ್ಷೆ, ಕ್ವಾರಂಟೈನ್ ಮುಂದುವರಿಯಬೇಕು

   ಮೂವತ್ತು ಕೆಲಸ, ಐವತ್ತು ದಿನ ಲಾಕ್‌ಡೌನ್‌ ಅನುಕರಣೆ ಮಾಡಿದರೂ ಸಹ, ಈಗ ಮಾಡುತ್ತಿರುವಂತೆ ಕೊರೊನಾ ಪರೀಕ್ಷೆಗಳು ಮುಂದುವರಿಯಬೇಕು. ಕ್ವಾರಂಟೈನ್ ವ್ಯವಸ್ಥೆಯೂ ಅನುಸರಿಸಬೇಕು ಎಂದು ಹೇಳಿದ್ದಾರೆ. ಜಗತ್ತಿನ ಹಲವು ದೇಶಗಳಲ್ಲಿ 50ಕ್ಕಿಂತ ಹೆಚ್ಚು ದಿನ ಲಾಕ್‌ಡೌನ್ ಮಾಡಲಾಗಿತ್ತು. ಈಗ ನಿಧಾನವಾಗಿ ರಿಲ್ಯಾಕ್ಸ್ ಮಾಡುತ್ತಿದೆ. ಆದರೆ, ಬ್ರಿಟಿಷ್ ವಿಜ್ಞಾನಿಗಳು ಹೇಳುವಂತೆ ನಿರಂತರ ಎರಡು ವರ್ಷಗಳ ಕಾಲ ಈ ಸೂತ್ರ ಅನುಸರಿಸಲು ಸಾಧ್ಯನಾ?

   78 ಲಕ್ಷ ಜನರು ಸಾಯಬಹುದು

   78 ಲಕ್ಷ ಜನರು ಸಾಯಬಹುದು

   ಒಂದು ವೇಳೆ ಬ್ರಿಟಿಷ್ ವಿಜ್ಞಾನಿಗಳು ಹೇಳುತ್ತಿರುವಂತೆ ಲಾಕ್‌ಡೌನ್ ಮತ್ತು ರಿಲ್ಯಾಕ್ಸ್ ಸೂತ್ರ ಅನುಸರಿಸಿದೆ ಹೋದರೆ, ಸಾವಿನ ಸಂಖ್ಯೆಯಲ್ಲಿ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ. ಅಂದಾಜು 78 ಲಕ್ಷ ಜನರು ಮೃತಪಡುವ ಸಾಧ್ಯತೆ ಹಾಗು ಸುಮಾರು 200 ದಿನಗಳಿಗೆ ಹೆಚ್ಚು ಕಾಲ ವೈರಸ್‌ ಉಳಿಯಬಹುದು ಎಂದಿದ್ದಾರೆ.

   ಬ್ರೆಜಿಲ್, ಭಾರತ, ರಷ್ಯಾ ಕೊರೊನಾ ಹಾಟ್‌ಸ್ಪಾಟ್

   ಬ್ರೆಜಿಲ್, ಭಾರತ, ರಷ್ಯಾ ಕೊರೊನಾ ಹಾಟ್‌ಸ್ಪಾಟ್

   ಪ್ರಸ್ತುತ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 50 ಲಕ್ಷ ಗಡಿ ದಾಟಿದೆ. ಕೇವಲ 12 ದಿನದಲ್ಲಿ 10 ಲಕ್ಷ ಸೋಂಕು ವರದಿಯಾಗಿದೆ. 3,29,739ಕ್ಕೂ ಅಧಿಕ ಜನರು ಕೊರೊನಾಗೆ ಬಲಿಯಾಗಿದ್ದಾರೆ. ಯುಎಸ್‌ನಲ್ಲಿ ಹೊಸ ಕೇಸ್‌ಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಚೇತರಿಕೆ ಕಂಡಿಲ್ಲ. ಯುಎಸ್‌ ಬಿಟ್ಟರೆ ಬ್ರೆಜಿಲ್, ಭಾರತ, ರಷ್ಯಾ ಜಗತ್ತಿನ ಹೊಸ ಕೊರೊನಾ ಹಾಟ್‌ಸ್ಪಾಟ್‌ ದೇಶಗಳಾಗಿವೆ.

   English summary
   British scientists Dr Rajiv Chaudhary and team has suggest 50 day lockdown, relaxation for 30 days model to manage coronavirus outbreak. 'it will be break the chain of infection' he said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more