ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಗಡಿ ವಿವಾದದ ಕುರಿತು ಬ್ರಿಟನ್ ಪ್ರಧಾನಿ ಕಳವಳ

|
Google Oneindia Kannada News

ದೆಹಲಿ, ಜೂನ್ 25: ಚೀನಾ ಮತ್ತು ಭಾರತ ಗಡಿ ವಿವಾದದ ಕುರಿತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇದೇ ಮೊದಲ ಬಾರಿ ಅಧಿಕೃತವಾಗಿ ಹೇಳಿಕೆ ನೀಡಿದ್ದು 'ಕಳವಳ' ವ್ಯಕ್ತಪಡಿಸಿದ್ದಾರೆ.

Recommended Video

Covid update : almost 17000 cases in the last 24 hours in India | Oneindia Kannada

ಒಂದು ಕಡೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಕಾಮನ್ವೆಲ್ತ್ ಸದಸ್ಯ ರಾಷ್ಟ್ರ ಇನ್ನೊಂದೆಡೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ಪ್ರಶ್ನಿಸುವ ದೇಶ. ಈ ಎರಡೂ ದೇಶಗಳ ನಡುವಿನ ವಿವಾದದಿಂದ ಬ್ರಿಟಿಷ್ ಹಿತಾಸಕ್ತಿಗಳ ಮೇಲೆ ಆಗುವ ಪರಿಣಾಮಗಳೇನು ಎಂದು ಕನ್ಸರ್ವೇಟಿವ್ ಪಕ್ಷದ ಸಂಸದ ಫ್ಲಿಕ್ ಡ್ರಮ್ಮೊಂಡ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೋರಿಸ್ ಜಾನ್ಸನ್ 'ಪರಿಸ್ಥಿತಿ ಅಂತ್ಯಂತ ಗಂಭೀರ ಮತ್ತು ಚಿಂತಾಜನಕವಾಗಿದೆ' ಎಂದಿದ್ದಾರೆ.

ಗಾಲ್ವಾನ್ ಕಣಿವೆ ಗಡಿಯಿಂದ ಸೇನೆ ಹಿಂದಕ್ಕೆ ಪಡೆದ ಚೀನಾ?ಗಾಲ್ವಾನ್ ಕಣಿವೆ ಗಡಿಯಿಂದ ಸೇನೆ ಹಿಂದಕ್ಕೆ ಪಡೆದ ಚೀನಾ?

''ಪೂರ್ವ ಲಡಾಖ್‌ನ ಸದ್ಯದ ಪರಿಸ್ಥಿತಿ ಅಂತ್ಯಂತ ಗಂಭೀರ ಮತ್ತು ಚಿಂತಾಜನಕವಾಗಿದೆ. ಇದನ್ನು ಬ್ರಿಟನ್ ಸರ್ಕಾರ ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದೆ'' ಎಂದು ಬೋರಿಸ್ ಜಾನ್ಸನ್ ಗುರುವಾರ ಹೇಳಿದ್ದಾರೆ.

British PM Boris Johnson React About india And China Border Dispute

''ಪ್ರಸ್ತುತ ಸನ್ನಿವೇಶವನ್ನು ನೋಡಿದರೆ ಉಭಯ ರಾಷ್ಟ್ರಗಳು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರೋತ್ಸಾಹಿಸುವಂತಹ ಕೆಲಸ ಮಾಡುವುದು ಉತ್ತಮ ಕಾರ್ಯ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಚೀನಾ ಘರ್ಷಣೆಗೆ ಸಂಬಂಧಿಸಿದಂತೆ ಇಂದು ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಿಂದ ಕೆಲವು ವಾಹನಗಳು ಹಾಗೂ ಸೇನೆಯನ್ನು ಚೀನಾ ಹಿಂದಕ್ಕೆ ಕರೆಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜೂನ್ 22 ರಂದು ಭಾರತ ಮತ್ತು ಚೀನಾ ಕಮಾಂಡರ್‌ಗಳ ನಡುವೆ ನಡೆದ ಸುದೀರ್ಘ ಮಾತುಕತೆ ಬಳಿಕ ಚೀನಾ ಸರ್ಕಾರ, ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಭರವಸೆ ನೀಡಿತ್ತು.

English summary
British PM Boris Johnson on India-China tensions - worrying situation, negotiate a solution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X