ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಸ್ ವಿವಾದ : ಗೃಹ ಸಮಿತಿಯ ಮುಖ್ಯಸ್ಥ ಸ್ಥಾನದಿಂದ ವಾಜ್ ಔಟ್!

By Mahesh
|
Google Oneindia Kannada News

ಲಂಡನ್, ಸೆ. 06: ಭಾರತೀಯ ಮೂಲದ ಬ್ರಿಟನ್‌ನ ಪ್ರಭಾವಿ ಸಂಸದ ಕೀತ್‌ ವಾಜ್‌ ಅವರು ಬ್ರಿಟನ್‌ ಲೋಕಸಭೆ ಹೌಸ್‌ ಆಫ್ ಕಾಮನ್ಸ್‌ನ ಗೃಹ ಸಮಿತಿಯ ಮುಖ್ಯಸ್ಥ ಹುದ್ದೆಯಿಂದ ಮಂಗಳವಾರ ಕೆಳಗಿಳಿದ್ದಾರೆ.ಗೋವಾ ಮೂಲದ ಹಿರಿಯ ಸಂಸದ ಕೀತ್ ಅವರು ಇಬ್ಬರು ಗಂಡು ವೇಶ್ಯೆಯರ ಜತೆ ಸೆಕ್ಸ್ ನಡೆಸಿದ್ದಾರೆ ಎಂದು ಸುದ್ದಿ ಪ್ರಕಟವಾದ ಹಿನ್ನಲೆಯಲ್ಲಿ ಕೀತ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಕಳೆದ 10 ವರ್ಷಗಳಿಂದ ಬ್ರಿಟನ್‌ ಲೋಕಸಭೆಯ ಹೌಸ್‌ ಆಫ್ ಕಾಮನ್ಸ್‌ ನ ಗೃಹ ಸಮಿತಿಯ ಮುಖ್ಯಸ್ಥ ಹುದ್ದೆಯನ್ನು ನಿರ್ವಹಿಸುತ್ತಿದ್ದರು. 1987ರಿಂದ ಬ್ರಿಟನ್‌ನ ಲೀಸ್ಟರ್‌ ಕ್ಷೇತ್ರದ ಸಂಸದರಾಗಿದ್ದಾರೆ. 59 ವರ್ಷದ ಕೀತ್‌ ವಾಜ್‌ ಅವರು ಕಳೆದ ತಿಂಗಳು ಇಬ್ಬರು ಪುರುಷ ವೇಶ್ಯೆಯರ ಜತೆ ಲಂಡನ್‌ ನಲ್ಲಿರುವ ಫ್ಲ್ಯಾಟ್‌ನಲ್ಲಿ ಸೆಕ್ಸ್ ನಡೆಸಿದ್ದಾರೆ. ಇದಕ್ಕಾಗಿ ಅವರಿಗೆ ಹಣ ಪಾವತಿಸಿದ್ದಾರೆ ಎಂದು ಸಂಡೇ ಮಿರರ್ ವರದಿ ಮಾಡಿತ್ತು. [ಕೊಹಿನೂರು ವಜ್ರ ಮೋದಿ ಕೈಗೆ ಕೊಟ್ಟು ಬಿಡಿ: ಯುಕೆ ಸಂಸದ]

Indian-origin MP Keith Vaz quits as Home Affairs Committee chairman

ಜತೆಗೆ ವಯಸ್ಸಿನ ಕಾರಣ ಲೈಂಗಿಕ ಶಕ್ತಿ ವೃದ್ಧಿಗೆ ನಿಷೇಧಿತ ಔಷಧವನ್ನು ವಾಜ್ ಸೇವಿಸಿದ್ದಾರೆ. ಸುರಕ್ಷಿತವಲ್ಲದ ರೀತಿ ಸೆಕ್ಸ್‌ ನಡೆಸಿದ್ದಾರೆ. ಈ ಬಗ್ಗೆ ವಿಡಿಯೋ ಸಾಕ್ಷಿ ಇದೆ ಎಂದು ಸಂಡೇ ಮಿರರ್ ತನ್ನ ವರದಿಯಲ್ಲಿ ಹೇಳಿತ್ತು.

ಗಂಡು ವೇಶ್ಯೆಯರ ಜತೆ ವಾಜ್ ಇರುವ ಅಶ್ಲೀಲ ಎಸ್‌ಎಂಎಸ್‌ ತುಣುಕುಗಳು ಲಂಡನ್ನಿನಲ್ಲಿ ಸದ್ಯಕ್ಕೆ ಹೆಚ್ಚು ಹರಿದಾಡುವ ವಿಡಿಯೋ ಆಗಿದೆ. ಈ ಸುದ್ದಿ ಹೊರ ಬರುತ್ತಿದ್ದಂತೆ, ಪ್ರತಿಕ್ರಿಯೆ ನೀಡಿದ ವಾಜ್, ನಾನೇನು ತಪ್ಪು ಮಾಡಿಲ್ಲ, 'ನನ್ನ ಪತ್ನಿ ಹಾಗೂ ಮಕ್ಕಳ ಕ್ಷಮೆ ಯಾಚಿಸುತ್ತೇನೆ' ಎಂದಿದ್ದರು.

ಐತಿಹಾಸಿಕ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸುವಂತೆ ಭಾರತೀಯ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಆಗ್ರಹಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಅವರ ಕೈಗೆ ವಜ್ರವನ್ನು ಒಪ್ಪಿಸಿಬಿಡಿ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Indian-origin MP Keith Vaz quits as Home Affairs Committee chairman Keith Vaz, Britain's longest serving Indian-origin MP, was on Sunday embroiled in a sex scandal after a newspaper claimed he had paid for male prostitutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X