ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಾಹ್ಯಾಕಾಶದಲ್ಲಿ ತೇಲಾಡುತ್ತಲೇ ಭೂಮಿ ನೋಡುವ ಆಸೆಯೇ?"

|
Google Oneindia Kannada News

ನ್ಯೂಯಾರ್ಕ್, ಜುಲೈ 12: "ಈ ಮಧುರ ಕ್ಷಣವನ್ನು ಸವಿಯುವುದಕ್ಕಾಗಿ ಬಾಲ್ಯದಿಂದಲೂ ನಾನು ಕನಸು ಕಟ್ಟಿಕೊಂಡಿದ್ದೆನು. ಆದರೆ ಬಾಹ್ಯಾಕಾಶದಲ್ಲಿ ನಿಂತು ಭೂಮಿ ಅಂದವನ್ನು ಸವಿಯುವುದಕ್ಕೆ ಯಾವುದೇ ರೀತಿ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ, ಇದೊಂದು ಮಾಂತ್ರಿಕ ಅನುಭವವನ್ನು ನೀಡಿದೆ," ಎಂದು ಉದ್ಯಮಿ ರಿಚರ್ಡ್ ಬ್ರಾನ್ಸನ್ ತಿಳಿಸಿದ್ದಾರೆ.

ವರ್ಜಿನ್ ಗ್ಯಾಲಕ್ಟಿಕ್ ಸ್ಪೇಸ್​ಫ್ಲೈಟ್​ ಕಂಪನಿ ಸಿದ್ಧಪಡಿಸಿದ ವಿಎಸ್​ಎಸ್​ ಯುನಿಟಿ (VSS Unity) ಗಗನ ನೌಕೆಯಲ್ಲಿ ಆರು ಮಂದಿಯೊಂದಿಗೆ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶಕ್ಕೆ ಹಾರಿದರು. ಭಾನುವಾರ ನ್ಯೂ ಮೆಕ್ಸಿಕೋ ಮರುಭೂಮಿಯಿಂದ 89 ಕಿಲೋ ಮೀಟರ್ (53 ಮೈಲಿ) ಎತ್ತರಕ್ಕೆ ಹಾರಿದ್ದಾರೆ.

ಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ಬರೆದ ರಿಚರ್ಡ್ ಬ್ರ್ಯಾನ್ಸನ್ಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ಬರೆದ ರಿಚರ್ಡ್ ಬ್ರ್ಯಾನ್ಸನ್

ಯಾವುದೇ ಅಡ್ಡಿ ಆತಂಕವಿಲ್ಲದೇ ಪ್ರವಾಸ ಆರಂಭವಾದ ಒಂದು ಗಂಟೆಯ ನಂತರ ಅಂದರೆ ಮೌಂಟೇನ್ ಟೈಮ್ (1540 GMT) ಬೆಳಿಗ್ಗೆ 9:40ಕ್ಕೆ ನಿಗದಿತ ಗುರಿಯನ್ನು ತಲುಪಿತ್ತು. ನ್ಯೂ ಮೆಕ್ಸಿಕೋ ಮರುಭೂಮಿಗಿಂತ 89 ಕಿಮೀ ಎತ್ತರದಲ್ಲಿ ಸುಮಾರು 90 ನಿಮಿಷಗಳ ಕಾಲ ರಾಕೆಟ್​​ ಹಾರಾಟ ನಡೆಸಿತು. ಈ ಕುರಿತು ಬಾಹ್ಯಾಕಾಶ ಪ್ರವಾಸಕ್ಕೆ ಸಂಬಂಧಿಸಿದಂತೆ ರಿಚರ್ಡ್ ಬ್ರಾನ್ಸನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

 British Businessman Richard Branson Reaction After Successful Space Travel Complete

ಮುಂದಿನ ಪೀಳಿಗೆಗೆ ರಿಚರ್ಡ್ ಬ್ರಾನ್ಸನ್ ಸಂದೇಶ:

"ಈ ಮೊದಲು ನಾನು ಮಗುವಾಗಿದ್ದ ಸಂದರ್ಭದಲ್ಲಿ ಭೂಮಿ ಮೇಲೆ ನಿಂತು ಆಕಾಶದ ನಕ್ಷತ್ರಗಳನ್ನು ನೋಡುತ್ತಿದ್ದೆನು. ಇಂದು ಆಕಾಶನೌಕೆಯಲ್ಲಿ ನಿಂತು ನಮ್ಮ ಸುಂದರವಾದ ಭೂಮಿಯ ಸೌಂದರ್ಯವನ್ನು ಸವಿಯುತ್ತಿದ್ದೇನೆ. ಮುಂದಿನ ಪೀಳಿಗೆಯು ಕೂಡ ನಿಮ್ಮ ಈ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು," ಎಂದು ರಿಚರ್ಡ್ ಬ್ರಾನ್ಸನ್ ಹೇಳಿದ್ದಾರೆ.

ನೀವೂ ಬಾಹ್ಯಾಕಾಶಕ್ಕೆ ಹಾರಲು ಸಿದ್ಧರಾಗಿರಿ:

"ಬಾಹ್ಯಾಕಾಶದಲ್ಲಿ ನಿಂತು ಭೂಮಿಯನ್ನು ನೋಡುವ ಸಂದರ್ಭದಲ್ಲಿ ಉಂಟಾಗುವ ರೋಮಾಂಚಕತೆಯನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲ. ಅದು ವಿವರಿಸಲು ಅಸಾಧ್ಯವಾದ ಭವ್ಯ ಅನುಭವ ಆಗಿದೆ. ನೀವೂ ಕೂಡ ಇಂಥ ಮಧುರ ಅನುಭವನ್ನು ಪಡೆದುಕೊಳ್ಳುವ ದಿನಗಳು ಇನ್ನು ದೂರ ಉಳಿದಿಲ್ಲ," ಎಂದು ತಿಳಿಸಿದ್ದಾರೆ.

Recommended Video

ಹುಟ್ಟೋ ಮಕ್ಕಳ ಅದ್ಭುತ ಭವಿಷ್ಯಕ್ಕಾಗಿ ಗರ್ಭ ಸಂಸ್ಕಾರ | Benefits of Garbha Sanskar | Oneindia Kannada

"ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಈ ಯೋಜನೆಗಾಗಿ ತಮ್ಮನ್ನು ಅರ್ಪಿಸಿಕೊಂಡ ಸಿಬ್ಬಂದಿ ಹಾಗೂ ನನ್ನ ಕನಸನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿದ ತಮ್ಮ ತಂಡಕ್ಕೆ ಅನಂತ ಅನಂತ ಧನ್ಯವಾದಗಳನ್ನು ತಿಳಿಸುತ್ತೇವೆ. ನನ್ನ ಸಹಚರರಾದ ತಜ್ಞರಾದ ಬೆತ್, ಕಾಲಿನ್ ಮತ್ತು ಸಿರಿಶಾ; ಸ್ಪೇಸ್‌ಪೋರ್ಟ್ ಅಮೇರಿಕಾದಲ್ಲಿ ನಮ್ಮೊಂದಿಗೆ ಸೇರಿದ ಪ್ರತಿಯೊಬ್ಬರಿಗೂ ಮತ್ತು ಲೈವ್‌ಸ್ಟ್ರೀಮ್‌ನಲ್ಲಿ ವೀಕ್ಷಿಸಿದ ಎಲ್ಲರಿಗೂ ಹಾಗೂ ನನ್ನ ಪತ್ನಿ ಜೋನ್, ಮೊಮ್ಮಕ್ಕಳಾದ ಹಾಲಿ ಮತ್ತು ಸ್ಯಾಮ್ ಮತ್ತು ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದ," ಎಂದು ರಿಚರ್ಡ್ ಬ್ರಾನ್ಸನ್ ಹೇಳಿದ್ದಾರೆ.

English summary
British Businessman Richard Branson Reaction After Successful Space Travel Complete.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X