ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ವಿಮಾನ ನಿಲ್ದಾಣಕ್ಕೆ ಉಗ್ರ ದಾಳಿಯ ಎಚ್ಚರಿಕೆ

|
Google Oneindia Kannada News

ಕಾಬೂಲ್, ಆಗಸ್ಟ್ 26: ಕಾಬೂಲ್ ವಿಮಾನ ನಿಲ್ದಾಣಕ್ಕೆ ಉಗ್ರ ದಾಳಿ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರೂ ಪ್ರಯಾಣಿಸಬಾರದು ಎಂದು ಬ್ರಿಟನ್ ತನ್ನ ನಾಗರಿಕರಿಗೆ ಹೇಳಿದೆ.

ಈ ಬೆಳವಣಿಗೆಯು ಇಸ್ಲಾಮಿಕ್ ಸ್ಟೇಟ್(ISIS) ಅಫ್ಘಾನಿಸ್ತಾನದ ಅಂಗಸಂಸ್ಥೆಯ ಬೆದರಿಕೆಗಳಿಗೆ ಸಂಬಂಧಿಸಿದೆ, ಇದನ್ನು ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಅಥವಾ ISIS-K ಎಂದು ಕರೆಯುತ್ತಾರೆ, ಇದು ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಕಾರ್ ಬಾಂಬ್‌ ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ತಿಳಿಸಿದೆ.

ಅಫ್ಘಾನ್ ಜನರಿಗೆ ಬೆಂಬಲ ನೀಡುವಂತೆ ಬ್ರಿಟನ್ ಪ್ರಧಾನಿ ಕರೆಅಫ್ಘಾನ್ ಜನರಿಗೆ ಬೆಂಬಲ ನೀಡುವಂತೆ ಬ್ರಿಟನ್ ಪ್ರಧಾನಿ ಕರೆ

ವಿಮಾನ ನಿಲ್ದಾಣ ಸೇರಿದಂತೆ ಕಾಬೂಲ್‌ನ ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಲೇ ಇದೆ. ನೀವು ಕಾಬೂಲ್ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಡಿ. ಒಂದು ವೇಳೆ ಈಗಾಗಲೇ ವಿಮಾನ ನಿಲ್ದಾಣದ ಪ್ರದೇಶದಲ್ಲಿದ್ದರೆ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ ಮತ್ತು ಹೆಚ್ಚಿನ ಸಲಹೆಗಾಗಿ ನಿರೀಕ್ಷಿಸಿ ಎಂದು ಎಫ್‌ಸಿಡಿಒ ಹೇಳಿದೆ.

Britain Warns Of Imminent Terrorist Attack At Kabul Airport

ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಕಾಬೂಲ್‌ ವಿಮಾನ ನಿಲ್ದಾಣದತ್ತ ಬರುತ್ತಿರುವವರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಲು ಯೋಜಿಸುತ್ತಿರುವುದಾಗಿ ಬ್ರಿಟನ್‌ ರಕ್ಷಣಾ ಸಚಿವ ಜೇಮ್ಸ್ ಹೆಪ್ಪಿ ಆತಂಕ ವ್ಯಕ್ತಪಡಿಸಿದ್ದಾರೆ.

ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಅತಂತ್ರವಾಗಿದೆ ಎಂದು ಹೇಳಿದ್ದು, ಬ್ರಿಟಿಷ್ ನಾಗರಿಕರು ಮತ್ತು ಇತರ ಸ್ಥಳಾಂತರಗೊಂಡವರು ಸುರಕ್ಷಿತ ಸ್ಥಳಗಳಿಗೆ ತೆರಳಿ, ಮುಂದಿನ ಸೂಚನೆ ಬರುವವರೆಗೆ ಅಲ್ಲಿಯೇ ಇರಿ ಎಂದು ಸೂಚನೆ ನೀಡಿದೆ.

ತಾಲಿಬಾನಿಗಳ ವಶದಲ್ಲಿರುವ ಅಫ್ಘಾನಿಸ್ತಾನದ ಜನರಿಗೆ ಬೆಂಬಲ ನೀಡಬೇಕೆಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇತ್ತೀಚೆಗಷ್ಟೇ ಕರೆ ನೀಡಿದ್ದರು.

ಅಫ್ಘಾನಿಸ್ತಾನದ ಜನರನ್ನು ಬೆಂಬಲಿಸುವಂತೆ ಬ್ರಿಟನ್ ಪ್ರಧಾನಿ ಕರೆ ನೀಡಿರುವುದಾಗಿ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಅಧೀಕೃತ ಪ್ರಕಟಣೆ ತಿಳಿಸಿದೆ.
ಬ್ರಿಟನ್ ಪ್ರಜೆಗಳು, ರಾಯಭಾರಿ ಸಿಬ್ಬಂದಿ ಸೇರಿ ಆರು ಸಾವಿರ ಮಂದಿಯನ್ನು ಕಾಬುಲ್‌ನಿಂದ ಸ್ಥಳಾಂತರಿಸಿರುವುದಾಗಿ ಬ್ರಿಟನ್ ಸರ್ಕಾರ ತಿಳಿಸಿದೆ.

'ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ನಡೆಸುತ್ತಿರುವ ಕಾರ್ಯಗಳನ್ನು ನೋಡಿ ನಿರ್ಣಯ ತೆಗೆದುಕೊಳ್ಳಬೇಕೇ ಹೊರತು ಅವರ ಮಾತುಗಳನ್ನು ಕೇಳಿ ಅಲ್ಲ' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಎರಡು ದಶಕಗಳ ಕಾಲ ಅಮೆರಿಕ ಸೇನೆ ಭದ್ರತೆಯಡಿ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ.

ಅಮೆರಿಕ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಎಚ್ಚೆತ್ತಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

ತಾಲಿಬಾನಿಗಳಿಂದ ಬಚಾವಾಗಿ ಜೀವ ಉಳಿಸಿಕೊಳ್ಳಲು ಅಫ್ಘಾನಿಗಳು ದೇಶವನ್ನು ತೊರೆಯುತ್ತಿದ್ದಾರೆ. ಆದರೆ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, 3 ಸಾವಿರ ರೂ ನೀಡಿ ಒಂದು ಬಾಟಲಿ ನೀರು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಪ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತಿದ್ದಂತೆ ದೇಶವನ್ನೇ ತೊರೆಯಲು ಜನ ಮುಂದಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ತಮ್ಮ ಸರಿದಿಗಾಗಿ ಕಾಯುತ್ತಿದ್ದಾರೆ. ಈ ನಡುವೆ ಕಾಬೂಲ್ ವಿಮಾನನಿಲ್ದಾಣ ತಲುಪಿರುವ ಜನರಿಗೆ ಮೂರು ಸಾವಿರ ರೂಪಾಯಿಗಳನ್ನು ನೀಡಿ ಒಂದು ಬಾಟಲ್ ನೀರು ಖರೀದಿಸುವ ಕಠಿಣ ಪರಿಸ್ಥಿತಿಯು ಎದುರಾಗಿದೆ. ಇತ್ತ ಒಂದು ಪ್ಲೇಟ್ ಊಟಕ್ಕೆ 7,500 ರೂ ಕೊಡಬೇಕು.

ಹೇಗಾದರೂ ಮಾಡಿ ಇಲ್ಲಿಂದ ಹೋದರೆ ಸಾಕು ಎನ್ನುತ್ತಿರುವ ಜನರು ಅನಿವಾರ್ಯವಾಗಿ ಇಷ್ಟು ಹಣವನ್ನು ನೀಡಿ ಊಟ ಖರೀದಿಸುತ್ತಿದ್ದಾರೆ. ಆದರೆ ಮಧ್ಯಮ ವರ್ಗದ ಜನರ ಸ್ಥಿತಿ ಆ ದೇವರಿಗೆ ಪ್ರೀತಿ ಎಂಬಂತಾಗಿದೆ.

ಮತ್ತೊಂದು ಕಡೆ ವಿಮಾನ ಏರುವ ತಮ್ಮ ಸರದಿಗಾಗಿ ಕಾಯುತ್ತಿರುವ ಜನರ ಸಹಾಯಕ್ಕೆ ಅಮೆರಿಕ ಸೈನಿಕರು ಮುಂದಾಗಿದ್ದು, ಆಹಾರದ ಪೊಟ್ಟಣಗಳನ್ನು ಇವರು ವಿತರಿಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ನೀರು ಮತ್ತು ಆಹಾರ ಮಾರಾಟ ಮಾಡಲಾಗುತ್ತಿದೆ.

English summary
Britain on Thursday warned that there was a “very credible” report of an imminent terrorist attack by the Islamic State militants targeting those gathering Kabul Airport in an attempt to flee war torn Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X