ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಏರಿಕೆ; ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲು ಬ್ರಿಟನ್ ನಿರ್ಧಾರ

|
Google Oneindia Kannada News

ಬ್ರಿಟನ್, ಏಪ್ರಿಲ್ 19: ಭಾರತದಲ್ಲಿ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರ ಸೋಂಕಿನ 103 ಪ್ರಕರಣಗಳು ಬ್ರಿಟನ್‌ನಲ್ಲಿ ಪತ್ತೆಯಾದ ಬೆನ್ನಲ್ಲೇ ಕೋವಿಡ್ 19 ಪ್ರಯಾಣ ಮಾರ್ಗಸೂಚಿಯನ್ವಯ ಪ್ರಯಾಣ ಕುರಿತ ಕೆಂಪು ಪಟ್ಟಿಗೆ ಬ್ರಿಟನ್ ಭಾರತವನ್ನು ಸೇರಿಸುವ ತೀರ್ಮಾನ ಕೈಗೊಂಡಿದೆ.

ಭಾರತದಿಂದ ಎಲ್ಲಾ ರೀತಿಯ ಸಂಚಾರವನ್ನು ರದ್ದುಪಡಿಸಿ, ಭಾರತದಿಂದ ಮರಳುವ ಬ್ರಿಟನ್ ಪ್ರಯಾಣಿಕರಿಗೆ ಹತ್ತು ದಿನದ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದುಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದು

ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕೋಕ್ ಅವರು ಈ ಮಾಹಿತಿ ನೀಡಿದ್ದು, ಭಾರತದಲ್ಲಿ ಮೊದಲು ಕಾಣಿಸಿಕೊಂಡ ರೂಪಾಂತರ ಸೋಂಕಿನ ಪ್ರಕರಣ ಬ್ರಿಟನ್‌ನಲ್ಲಿಯೂ ಪತ್ತೆಯಾಗಿತ್ತು. ಇದೀಗ 103 ಪ್ರಕರಣಗಳು ದಾಖಲಾಗಿವೆ. ಮುನ್ನೆಚ್ಚರಿಕೆಯ ಕ್ರಮವಾಗಿ ನಾವು ಈ ಕಠಿಣ ನಿರ್ಧಾರ ತೆಗೆದುಕೊಂಡು ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

Britain To Add India In Red List On Covid 19 Travel

ಇಲ್ಲಿಗೆ ಬರುವ ಹತ್ತು ದಿನಗಳ ಹಿಂದೆ ಭಾರತದಲ್ಲಿದ್ದರೆ ಅವರು ಇಲ್ಲಿನ ಹೋಟೆಲ್‌ನಲ್ಲಿ ಹತ್ತು ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯ ಎಂದು ತಿಳಿಸಿದೆ.

English summary
United kingdom is adding india to its travel red list on a precautionary basis after reporting 103 cases of coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X