ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಖರೀದಿಸಿದ ಕೊರೊನಾ ಟೆಸ್ಟಿಂಗ್ ಕಿಟ್ ಕಳಪೆ: ಬ್ರಿಟನ್ ಸರ್ಕಾರ

|
Google Oneindia Kannada News

ಲಂಡನ್, ಏಪ್ರಿಲ್ 7: ಜಗತ್ತಿನಾದ್ಯಂತ ರುದ್ರತಾಂಡವ ಮಾಡುತ್ತಿರುವ ಕೊರೊನಾ ವೈರಸ್‌ ಬ್ರಿಟನ್ ದೇಶದಲ್ಲೂ ರಣಕೇಕೆ ಹಾಕಿದೆ. 51 ಸಾವಿರಕ್ಕು ಹೆಚ್ಚು ಕೊವಿಡ್ ಪ್ರಕರಣಗಳು ಯುಕೆನಲ್ಲಿ ದಾಖಲಾಗಿದ್ದು, 5.3 ಸಾವಿರ ಜನರು ಪ್ರಾಣಬಿಟ್ಟಿದ್ದಾರೆ.

Recommended Video

ಚೀನಾದಲ್ಲಿರುವ ಭಾರತೀಯ ಮುಸ್ಲಿಂ ಯುವಕನ ಮಾತಿಗೆ ಶಹಭಾಸ್ ಎನ್ನಲೇಬೇಕು | Oneindia Kannada

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್‌ಗೂ ಕೊರೊನಾ ಸೋಂಕು ತಗುಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗ, ಚೀನಾದಿಂದ ಖರೀದಿಸಿರುವ 3.5 ಮಿಲಿಯನ್ ಕೊರೊನಾ ಪರೀಕ್ಷಿಸುವ ಕಿಟ್‌ಗಳು ವಿಶ್ವಾಸಾರ್ಹವಾಗಿಲ್ಲ ಮತ್ತು ಕಳಪೆ ಗುಣಮಟ್ಟದ್ದು ಎಂದು ಬ್ರಿಟನ್ ಸರ್ಕಾರ ಆರೋಪಿಸಿದೆ.

ಕೊರೊನಾ ಸಂಕಷ್ಟದಲ್ಲಿರುವಾಗ ರಾಜ್ಯದಲ್ಲಿ ಇದೇನಿದು ರಾಜಕೀಯ!ಕೊರೊನಾ ಸಂಕಷ್ಟದಲ್ಲಿರುವಾಗ ರಾಜ್ಯದಲ್ಲಿ ಇದೇನಿದು ರಾಜಕೀಯ!

ಕೊರೊನಾವೈರಸ್‌ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಗುರುತಿಸಲು ಮಾತ್ರ ಈ ಟೆಸ್ಟಿಂಗ್ ಕಿಟ್ ಉಪಯುಕ್ತವಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಪ್ರೊಫೆಸರ್ ಜಾನ್ ನ್ಯೂಟನ್ ತಿಳಿಸಿದ್ದಾರೆ.

Britain Purchased Millions Of Unreliable COVID 19 Testing Kits From China

'ಈ ಟೆಸ್ಟಿಂಗ್‌ ಕಿಟ್‌ಗಳಿಂದ ಕೇವಲ ಆರಂಭಿಕ ಹಂತದ ಮೌಲ್ಯಮಾಪನ ಮಾಡಲು ಮಾತ್ರ ಸಾಧ್ಯ. ದೊಡ್ಡ ಪ್ರಮಾಣದಲ್ಲಿ ಇದು ಕಾರ್ಯನಿರ್ವಹಿಸುವುದಿಲ್ಲ. ಇದರಲ್ಲಿ ಅನೇಕ ತಪ್ಪು ನೆಗಿಟಿವ್ ಫಲಿತಾಂಶ ಬಂದಿದೆ. ತಪ್ಪು ಪಾಸಿಟಿವ್ ಫಲಿತಾಂಶಗಳು ಬಂದಿದೆ' ಎಂದು ಆರೋಪಿಸಿದ್ದಾರೆ.

'ಪರೀಕ್ಷೆ ಕಿಟ್‌ಗಳು ಸಮರ್ಪಕವಾಗಿಲ್ಲ. ಹಾಗಾಗಿ, ಈ ಕಿಟ್‌ಗಳಿಗೆ ನಾವು ನೀಡಿದ ಹಣವನ್ನು ಮರು ಪಾವತಿಸುವಂತೆ ಕೇಳಲಿದ್ದೇವೆ' ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'

ಅಂದ್ಹಾಗೆ, ಚೀನಾದಿಂದ ಪಡೆದಿರುವ ಉಪಕರಣಗಳು ಉತ್ತಮವಾಗಿಲ್ಲ ಎಂದು ಬ್ರಿಟನ್‌ ದೇಶಕ್ಕೂ ಮೊದಲೇ ರಿಪಬ್ಲಿಕ್ ಜೆಕ್ ರಾಷ್ಟ್ರವೂ ಹೇಳಿತ್ತು. 1,50,000 ಕಿಟ್‌ ಖರೀದಿಸಿದ್ದ ರಿಪಬ್ಲಿಕ್ ಜೆಕ್, ಅದರಲ್ಲಿ ಶೇಕಡಾ 80 ರಷ್ಟು ದೋಷಪೂರಿತವಾಗಿತ್ತು ಎಂದು ಹೇಳಿತ್ತು.

English summary
U.K Government purchased 3.5 millions of unreliable Coronavirus testing kits from china.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X