ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಅಂಟಿಸಿಕೊಂಡಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್ ಚೇತರಿಕೆ

|
Google Oneindia Kannada News

ಲಂಡನ್, ಏಪ್ರಿಲ್ 6: ಬ್ರಿಟನ್ ಪ್ರಧಾನಿ (ಯುಕೆ) ಬೋರಿಸ್ ಜಾನ್ಸ್‌ನ್‌ಗೆ ಇತ್ತೀಚೆಗೆ ಕೊರೊನಾ ವೈರಸ್ ಸೋಂಕು (ಕೊವಿಡ್ 19) ತಗುಲಿರುವುದು ದೃಢಪಟ್ಟಿತ್ತು.

ಅವರು ಕೆಲ ದಿನ ಹೋಮ್ ಕ್ವಾರಂಟೈನ್‌ ಇದ್ದು, ಅಲ್ಲಿಂದಲೇ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಬೋರಿಸ್ ಜಾನ್ಸನ್ ಅವರು ಕೊರೊನಾದಿಂದ ಮುಕ್ತಿ ಪಡೆದಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಬ್ರಿಟನ್ ಗೃಹ ಸಚಿವ ರಾಬರ್ಟ್ ಜೆನರಿಕ್ ತಿಳಿಸಿದ್ದಾರೆ.

ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!

ಆದರೆ, ಬೋರಿಸ್ ಜಾನ್ಸನ್ ಅವರು ಇನ್ನು ಕೆಲ ದಿನ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

Britain PM Boris Johnson Recovering From Coronavirus

ಕಳೆದ ಶುಕ್ರವಾರ ವಿಡಿಯೋ ಒಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು, ''ನನಗೆ ನೊವೆಲ್ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವೈದ್ಯರು ತಪಾಸಣೆ ನಡೆಸಿದ್ದರು. ಈಗ ಸೋಂಕು ಇರುವುದು ದೃಢಪಟ್ಟಿದೆ. ನಾನು ಸೆಲ್ಪ್ ಐಸೋಲೇಷನ್‌ ಮಾಡಿಕೊಳ್ಳಲಿದ್ದು, ಕೋವಿಡ್ 19 ನಿಯಂತ್ರಣಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸರ್ಕಾರವನ್ನು ನಿಭಾಯಿಸಲಿದ್ದೇನೆ'' ಎಂದು ಹೇಳಿದ್ದರು.

ಸೋಂಕು ತಗುಲಿದ್ದರೂ ಬ್ರಿಟನ್ ಪ್ರಧಾನಿ ಸೋಂಕು ಹರಡುವುದನ್ನು ತಡೆಯುವಲ್ಲಿ ನಾನೇ ಮುಂದೆ ನಿಂತು ಸರ್ಕಾರವನ್ನು ನಿಬಾಯಿಸಲಿದ್ದೇನೆ ಎಂದು ಹೇಳಿರುವುದು ಅಚ್ಚರಿ ಹುಟ್ಟಿಸಿತ್ತು. ಇದೀಗ ಕೊರೊನಾದಿಂದ ಚೇತರಿಸಿಕೊಂಡಿರುವ ಅವರು, ಕೊರೊನಾ ವಿರುದ್ಧದ ಹೋರಾಟವನ್ನು ಹೆಚ್ಚು ಮಾಡಲಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

English summary
Britain PM Boris Johnson Recovering From Coronavirus. Britain Home Minister Confirms it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X