ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಜಯಿಸಿ ಬಂದ ಪ್ರಧಾನಿಗೆ ಪ್ರೇಯಸಿ ಕೊಟ್ಟ ಅದ್ಭುತ ಉಡುಗೊರೆ

|
Google Oneindia Kannada News

ಲಂಡನ್, ಏಪ್ರಿಲ್ 29: ಕೊರೊನಾ ಮಹಾಮಾರಿ ಜಗತ್ತಿನಲ್ಲಿ ಆರ್ಭಟ ಮುಂದುವರಿಸಿ, ಬಡವ ಶ್ರೀಮಂತ, ಸಾಮಾನ್ಯ, ಅಸಾಮಾನ್ಯ ಎನ್ನದೇ ತನ್ನ ವ್ಯಾಪ್ತಿಗೆ ಬಂದವರಿಗೆ ಬಿಸಿ ಮುಟ್ಟಿಸದೇ ಹೋಗಿಲ್ಲ.

Recommended Video

British doctor beats coronavirus with paracetamol,chicken soup,lemonade | Chicken soup | Corona

ಜಗತ್ತಿನ ಅತಿ ಗಣ್ಯ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ತಗುಲಿಸಿಕೊಂಡು ಹೆಚ್ಚು ಸುದ್ದಿಯಾಗಿ ಗಮನ ಸೆಳೆದವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್. ಬೋರಿಸ್ ಜಾನ್ಸನ್‌ ಅವರಿಗೆ ಕೊರೊನಾ ಸೋಂಕು ತಗುಲಿ, ಸಾವು ಬದುಕಿನ ಮಧ್ಯ ಹೋರಾಡಿ, ಕೊರೊನಾ ಜಯಿಸಿ ಬಂದಿದ್ದಾರೆ.

ಕೊರೊನಾಕ್ಕೆ ಕಿಕ್ ಮಾಡಿ ಮತ್ತೆ ಜನಸೇವೆಗೆ ಸಿದ್ದವಾದ ಯುಕೆ ಪ್ರಧಾನಿಕೊರೊನಾಕ್ಕೆ ಕಿಕ್ ಮಾಡಿ ಮತ್ತೆ ಜನಸೇವೆಗೆ ಸಿದ್ದವಾದ ಯುಕೆ ಪ್ರಧಾನಿ

ಕೊರೊನಾದಿಂದ ಗುಣಮುಖರಾದ ಬಂದೊಡನೆಯೇ ಬೊರಿಸ್ ಜಾನ್ಸನ್‌ ಸಂಭ್ರಮದಲ್ಲಿ ತೇಲಿದ್ದಾರೆ. ಅವರ ಪ್ರೇಯಸಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಕೊರೊನಾದಿಂದ ಗುಣಮುಖರಾಗಿ ಬಂದ ಜಾನ್ಸನ್‌ಗೆ ನಿಜಕ್ಕೂ ವಿಶೇಷ ಕೊಡುಗೆಯನ್ನೇ ನೀಡಿದ್ದಾರೆ.

2018 ರಿಂದ ಪ್ರೀತಿಸುತ್ತಿದ್ದಾರೆ

2018 ರಿಂದ ಪ್ರೀತಿಸುತ್ತಿದ್ದಾರೆ

55 ವರ್ಷದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ 40 ವರ್ಷದ ರಾಜಕಾರಣಿ ಕೇರಿ ಸೈಮಂಡ್ಸ್ ಅವರನ್ನು 2018 ರಿಂದ ಪ್ರೀತಿಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಕೇರಿ ಸೈಮಂಡ್ಸ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಸಾವು ಬದುಕಿನ ನಡುವೆ ಹೋರಾಟ

ಸಾವು ಬದುಕಿನ ನಡುವೆ ಹೋರಾಟ

ಜಾನ್ಸನ್ ವಿಶ್ವದ ಅತ್ಯಂತ ಪ್ರಸಿದ್ಧ ಕರೋನವೈರಸ್ ರೋಗಿಯಾಗಿದ್ದರು. ಮಾರ್ಚ್ ಅಂತ್ಯದಲ್ಲಿ ಅವರು ಕೊರೊನಾ ವೈರಸ್‌ನಿಂದ ಬಳಲುತ್ತಿದ್ದರು; ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಅಧಿಕೃತ ನಿವಾಸದಲ್ಲಿ 10 ದಿನಗಳ ಕಾಲ ಸೆಲ್ಪ್ ಐಸೋಲೇಷನ್‌ನಲ್ಲಿದ್ದರು. ನಿರಂತರ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳಿಂದ ಅವರನ್ನು ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಕಡೆಗೂ ಅವರು ಕೊರೊನಾ ವೈರಸ್ ಜಯಿಸಿ ಬಂದರು.

ಇದೊಂದು ಅದ್ಭುತ ಘಳಿಗೆ

ಇದೊಂದು ಅದ್ಭುತ ಘಳಿಗೆ

ತಂದೆಯಾದ ಸುದ್ದಿ ತಿಳಿದು ತೀವ್ರ ಸಂತಸ ವ್ಯಕ್ತಪಡಿಸಿರುವ ಬೊರಿಸ್ ಜಾನ್ಸನ್ ಅವರು, ಇದೊಂದು ಅದ್ಭುತ ಘಳಿಗೆ. ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ನನಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ನಾನು ಕೇರಿ ಸೈಮಂಡ್ಸ್ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಹೋರಾಟದಲ್ಲಿ ಹಿಂದೆ ಹೆಜ್ಜೆ ಇಡುವುದಿಲ್ಲ

ಹೋರಾಟದಲ್ಲಿ ಹಿಂದೆ ಹೆಜ್ಜೆ ಇಡುವುದಿಲ್ಲ

ಕೆಲಸಕ್ಕೆ ಹಾಜರಾಗಿರುವ ಬೊರಿಸ್ ಜಾನ್ಸನ್ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಿಂದೆ ಹೆಜ್ಜೆ ಇಡುವುದಿಲ್ಲ ಎಂದು ಗುಡುಗಿದ್ದಾರೆ. ನಮ್ಮ ಜನರು ತಾಳ್ಮೆ ವಹಿಸಲೇಬೇಕು. ಲಾಕ್‌ಡೌನ್‌ನಿಂದ ಕಷ್ಟಗಳನ್ನು ಎದುರಿಸಿರಬಹುದು. ಆದರೆ, ನಾವೀಗ ಈ ಬಿಕ್ಕಟ್ಟಿನ ಮೊದಲ ಹಂತದ ಅಂತ್ಯದಲ್ಲಿದ್ದೇವೆ. ಹೀಗಾಗಿ ಜನರ ಸಹಕಾರ ಅಗತ್ಯ ಎಂದು ಹೇಳಿದ್ದಾರೆ. ಬ್ರಿಟನ್‌ನಲ್ಲಿ ಇದುವರೆಗೆ 1.57 ಲಕ್ಷ ಜನರಿಗೆ ಕೊರಾನಾ ಸೋಂಕು ತಗುಲಿದ್ದು, 21,092 ಮಂದಿ ಮಾರಕ ವೈರಸ್‌ನಿಂದ ಸತ್ತಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

English summary
Britain PM Boris Johnson And Carrie Symonds Announce Birth Of Baby Boy. day after Johnson Recovered From Deadly Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X