ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12ನೇ ಬ್ರಿಕ್ಸ್ ಸಮ್ಮೇಳನದ ಒಂದೇ ವೇದಿಕೆಯಲ್ಲಿ ಮೋದಿ-ಜಿನ್ ಪಿಂಗ್

|
Google Oneindia Kannada News

ನವದೆಹಲಿ, ನವೆಂಬರ್.16: ಭಾರತ-ಚೀನಾ ನಡುವಿನ ಲಡಾಖ್ ಗಡಿ ಸಂಘರ್ಷದ ನಡುವೆ 12ನೇ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಮಂಗಳವಾರ ಸಂಜೆ 4.30 ಗಂಟೆಗೆ ಬ್ರಿಕ್ಸ್ ರಾಷ್ಟ್ರಗಳ 12ನೇ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದೆ. ಬಹುಪಕ್ಷೀಯ ವ್ಯವಸ್ಥೆ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು, ಭಯೋತ್ಪಾದನೆ ನಿಗ್ರಹ, ವ್ಯಾಪಾರ, ಆರೋಗ್ಯ ಮತ್ತು ಇಂಧನಕ್ಕೆ ಸೇರಿದಂತೆ ಇತ್ಯಾದಿ ವಿಷಯಗಳ ಬಗ್ಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಚರ್ಚಿಸಲಿವೆ.

ಪೂರ್ವ ಲಡಾಖ್ ಗಡಿಯಿಂದ ಚೀನಾ ಟ್ಯಾಂಕ್ ವಾಪಸ್!ಪೂರ್ವ ಲಡಾಖ್ ಗಡಿಯಿಂದ ಚೀನಾ ಟ್ಯಾಂಕ್ ವಾಪಸ್!

ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ ಶಾಂಘೈ ಸಹಕಾರಿ ಸಂಘಟನೆಯ ಸಭೆಯಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಒಂದೇ ವೇದಿಕೆ ಹಂಚಿಕೊಂಡಿದ್ದರು. ಅಂದಿನ ಶೃಂಗಸಭೆಯಲ್ಲಿ "ಪರಸ್ಪರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಪ್ರಮುಖ ತತ್ವಗಳನ್ನು ಮುಂದುವರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದರು.

BRICS Summit 2020: PM Modi And China President jinping Will Share Platform Again On Tuesday

ರಷ್ಯಾದಲ್ಲಿ ಬ್ರಿಕ್ಸ್ ಸಮ್ಮೇಳನ:

ರಷ್ಯಾ 2020ರ ಬ್ರಿಕ್ಸ್ ರಾಷ್ಟ್ರಗಳ 12ನೇ ಸಮ್ಮೇಳನದ ಅತಿಥೇಯವನ್ನು ವಹಿಸಿಕೊಂಡಿದೆ. ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಮಾತುಕತೆ ಬಗ್ಗೆ ಪ್ರಶ್ನಿಸಿದ್ದಕ್ಕೆ ರಷ್ಯಾ ವಿದೇಶಾಂಗ ಸಚಿವ ಸೆರ್ಗಿಯ್ ರಯಾಬ್ಕೊವ್ ಪ್ರತಿಕ್ರಿಯೆ ನೀಡಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನವು ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ನಡೆಸುವುದಲ್ಲ. ಏಕರೂಪದಲ್ಲಿ ಆಲೋಚಿಸುವ ರಾಷ್ಟ್ರಗಳ ಪಾಲಿಗೆ ಉತ್ಸಾಹವನ್ನು ಹುಟ್ಟು ಹಾಕುತ್ತದೆ. ಸಕಾರಾತ್ಮಕ ಅಂಶಗಳ ಕುರಿತು ಫಲಿತಾಂಶವನ್ನು ಕಂಡುಕೊಳ್ಳುವುದಕ್ಕೆ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನವು ಸಹಕಾರಿಯಾಗಲಿದ್ದು, ಭಾರತ ಮತ್ತು ಚೀನಾಗಳು ಕೂಡಾ ಈ ಸಮ್ಮೇಳನದ ಲಾಭ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಬ್ರಿಕ್ಸ್ ರಾಷ್ಟ್ರಗಳು ಯಾವುವು:

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಒಕ್ಕೂಟವನ್ನು ಬ್ರಿಕ್ಸ್ ಎಂದು ಹೆಸರಿಸಲಾಗಿದೆ.

English summary
BRICS Summit 2020: PM Modi And China President Xi Jinping Will Share Single Platform Again On Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X