ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸಲ್ಮಾನ್ ರಶ್ದಿ ಮೇಲಿನ ದಾಳಿ ಆರೋಪ ತಳ್ಳಿ ಹಾಕಿದ ಇರಾನ್

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 15: ನ್ಯೂಯಾರ್ಕ್‌ನಲ್ಲಿ ಲೇಖಕ ಸಲ್ಮಾನ್ ರಶ್ದಿ ಮೇಲಿನ ದಾಳಿಯಲ್ಲಿ ಟೆಹ್ರಾನ್ ಭಾಗಿಯಾಗಿದೆ ಎಂಬ ಆರೋಪವನ್ನು ಇರಾನ್ ಸರ್ಕಾರ ನಿರಾಕರಿಸಿದೆ. ಈ ದಾಳಿಯ ಬಗ್ಗೆ ಮೊದಲ ಬಾರಿಗೆ ಇರಾನ್ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಪತ್ರಕರ್ತರನ್ನು ಉದ್ದೇಶಿಸಿದ ಮಾತನಾಡಿದ ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ, ಈ ವಿಷಯ ತಿಳಿಸಿದ್ದಾರೆ. "ಅಮೆರಿಕದಲ್ಲಿ ಸಲ್ಮಾನ್ ರಶ್ದಿ ಮೇಲಿನ ದಾಳಿಯ ಘಟನೆಯಲ್ಲಿ ಇರಾನ್ ಅನ್ನು ದೂಷಿಸುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಹೇಳಿದ್ದಾರೆ.

Breaking: ಲೇಖಕ ಸಲ್ಮಾನ್ ರಶ್ದಿ ವೆಂಟಿಲೇಟರ್‌ನಿಂದ ಹೊರಕ್ಕೆBreaking: ಲೇಖಕ ಸಲ್ಮಾನ್ ರಶ್ದಿ ವೆಂಟಿಲೇಟರ್‌ನಿಂದ ಹೊರಕ್ಕೆ

ನ್ಯೂಯಾರ್ಕ್‌ನಲ್ಲಿ ಲೇಖಕ ಸಲ್ಮಾನ್ ರಶ್ದಿ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ತಾವು ಮತ್ತು ತಮ್ಮ ಬೆಂಬಲಿಗರು ಸೇರಿದಂತೆ ಯಾರೊಬ್ಬರ ಮೇಲೆಯು ಆರೋಪವನ್ನು ಮಾಡುವಂತಿಲ್ಲ ಎಂದು ಕನಾನಿ ಸ್ಪಷ್ಟಪಡಿಸಿದ್ದಾರೆ.

Breaking News: Iranian govt denies involved in Salman Rushdie attack case

ನ್ಯೂಯಾರ್ಕ್‌ನಲ್ಲಿ ಸಲ್ಮಾನ್ ರಶ್ದಿ ಮೇಲೆ ದಾಳಿ:

ಕಳೆದ ಆಗಸ್ಟ್ 12ರ ಶುಕ್ರವಾರ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದ 75 ವರ್ಷದ ಸಲ್ಮಾನ್ ರಶ್ದಿ ಮೇಲೆ ಹಲ್ಲೆ ನಡೆಸಿದ್ದರು. ಚಾಕುವಿನಿಂದ ಇರಿತಕ್ಕೊಳಗಾದ ಅವರ ತೋಳು ಮತ್ತು ಕಣ್ಣಿಗೆ ತೀವ್ರ ಗಾಯಗಳಾಗಿದ್ದವು. ಒಂದು ಹಂತದಲ್ಲಿ ಕಣ್ಣನ್ನು ಕಳೆದುಕೊಳ್ಳುವ ಅಪಾಯವೂ ಇತ್ತು. ಇನ್ನು ಅವರ ಮೇಲೆ ದಾಳಿ ನಡೆಸಿದ ಆರೋಪಿ ಹಾದಿ ಮಾತರ್, ತಾವು ಯಾವುದೇ ರೀತಿ ತಪ್ಪು ಮಾಡಿಲ್ಲ ಎಂದು ತಮ್ಮ ವಕೀಲರ ಮೂಲಕ ವಾದ ಮಂಡಿಸಿದ್ದರು.

ಜೀವ ಬೆದರಿಕೆ ಎದುರಿಸುತ್ತಿದ್ದ ರಶ್ದಿ:

"ದಿ ಸಟಾನಿಕ್ ವರ್ಸಸ್"ನಿಂದಾಗಿ 30 ವರ್ಷಗಳಿಂದಲೂ ಪ್ರಶಸ್ತಿ ವಿಜೇತ ಲೇಖಕ ಸಲ್ಮಾನ್ ರಶ್ದಿ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ, ಇವರ ಸಾವಿಗೆ ಒತ್ತಾಯಿಸಿ ಫತ್ವಾ ಹೊರಡಿಸಿದ್ದರು. 75 ವರ್ಷದ ಸಲ್ಮಾನ್ ರಶ್ದಿ ತಮ್ಮ ಬರಹಕ್ಕಾಗಿ ಹಲವು ಬಾರಿ ಜೀವ ಬೆದರಿಕೆಗಳನ್ನು ಎದುರಿಸಿದ್ದಾರೆ. ವಿಶೇಷವಾಗಿ 1980ರ ದಶಕದ ಉತ್ತರಾರ್ಧದಲ್ಲಿ ಅವರ 'ದಿ ಸಟಾನಿಕ್ ವರ್ಸಸ್' ಪುಸ್ತಕದಿಂದಾಗಿ ಬೆದರಿಕೆಗಳನ್ನು ಎದುರಿಸಿದ್ದರು. ಈ ಪುಸ್ತಕದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಧರ್ಮನಿಂದನೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದನ್ನು ಇರಾನ್‌ನಲ್ಲಿ 1988 ರಿಂದ ನಿಷೇಧಿಸಲಾಗಿತ್ತು.

ರಶ್ದಿ ತಲೆಗೆ ಬೆಲೆ ಕಟ್ಟಿದ್ದ ಇರಾನ್ ನಾಯಕ:

ಇರಾನ್‌ನ ಉನ್ನತ ನಾಯಕನು ಅವರ ತಲೆಯ ಬೆಲೆಯನ್ನು ಕಟ್ಟಿದ್ದನು. ಆದರೆ, 1998ರ ಹೊತ್ತಿಗೆ ಇರಾನ್ ಸರ್ಕಾರವು ಆ 'ಫತ್ವಾ' ಅಥವಾ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿತು. ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಆಗಿರುವ ಸಲ್ಮಾನ್ ರಶ್ದಿ ಕಳೆದ 20 ವರ್ಷಗಳಿಂದ ಯುಎಸ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮೊದಲ ಕಾದಂಬರಿ 1975ರಲ್ಲಿ ಹೊರ ಬಂದಿತ್ತು.

English summary
Iranian govt denies involved in Salman Rushdie attack case. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X