ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಈಜಿಪ್ಟ್ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ನಿಧನ

|
Google Oneindia Kannada News

ಕೈರೋ, ಫೆಬ್ರವರಿ 25: ಈಜಿಪ್ಟಿನ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ಮಂಗಳವಾರದಂದು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಈಜಿಪ್ಟ್ ದೇಶದ ಅಧ್ಯಕ್ಷರಾಗಿ 30 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದರು.

1928ರಲ್ಲಿ ನೈಲ್ ಪ್ರಾಂತ್ಯದಲ್ಲಿ ಜನಿಸಿದ ಹೊಸ್ನಿ 1949ರಲ್ಲಿ ವಾಯುಸೇನೆಯಲ್ಲಿ ಪೈಲಟ್ ಆಗಿ ಕಾರ್ಯ ನಿರ್ವಹಿಸಿದ್ದರು. 1972ರಲ್ಲಿ ಈಜಿಪ್ಟ್ ನ ಕಮ್ಯಾಂಡರ್ ಇನ್ ಛೀಫ್ ಆಗಿ ಅಧಿಕಾರ ಸ್ವೀಕರಿಸಿದರು. ಇಸ್ರೇಲ್ ಜೊತೆ ಶಾಂಪಿ ಒಪ್ಪಂದ, ಯುನೈಟೆಡ್ ಸ್ಟೇಟ್ಸ್ ಜೊತೆ ಮಿತ್ರತ್ವ ಸಾಧಿಸಿ, ದೇಶದ ಅಭಿವೃದ್ಧಿಗೆ ಶ್ರಮಿಸಿದ್ದರು.

''ಅರಬ್ ಸ್ಪಿಂಗ್'' ಎಂದು ಜನಜನಿತರಾಗಿದ್ದ ಹೊಸ್ನಿ ಅವರ ನಿಧನವಾರ್ತೆಯನ್ನು ಈಜಿಪ್ಟಿನ ಸರ್ಕಾರಿ ಸ್ವಾಮ್ಯದ ಟಿವಿ ಸ್ಪಷ್ಟಪಡಿಸಿದೆ. ಮುಬಾರಕ್ ಅವರು ಪತ್ನಿ ಸುಜಾನ್, ಪುತ್ರರಾದ ಗಮಾಲ್ ಹಾಗೂ ಅಲಾರನ್ನು ಅಗಲಿದ್ದಾರೆ.

BREAKING NEWS: Former Egyptian leader Hosni Mubarak dies at 91

2011ರಲ್ಲಿ ಅಧಿಕಾರದಿಂದ ಕೆಳಗಿಳಿಯುವ ತನಕ ಈಜಿಪ್ಟ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಹೊಸ್ನಿ ಅವರನ್ನು ನಂತರ ಜೈಲಿಗೆ ಕಳಿಸಲಾಗಿತ್ತು. 2017ರಲ್ಲಿ ಜೈಲಿನಿಂದ ಹೊರಕ್ಕೆ ಬಂದಿದ್ದರು. ಅವರ ಮೇಲಿದ್ದ ಬಹುತೇಕ ಆರೋಪಗಳಿಂದ ಮುಕ್ತಗೊಳಿಸಲಾಗಿತ್ತು. 2011ರ ಹತ್ಯಾಕಾಂಡ ಪ್ರಕರಣದ ಆರೋಪ ಹೊತ್ತುಕೊಂಡಿದ್ದ ಹೊಸ್ನಿ ಅವರನ್ನು ಕೋರ್ಟ್ ಆಫ್ ಕಸೇಷನ್ (ಆ ದೇಶದ ಸರ್ವೋಚ್ಛ ನ್ಯಾಯಾಲಯ) ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.

2011ರಲ್ಲಿ ತಮ್ಮ ಸರ್ಕಾರದ ವಿರುದ್ಧ ದಂಗೆಯೆದ್ದು ತಮ್ಮ ಪದಚ್ಯುತಿಗೆ ಆಗ್ರಹಿಸಿ ಈಜಿಪ್ಟ್ ನ ಎಲ್ಲೆಲ್ಲೂ ಸುಮಾರು 18 ದಿನಗಳ ಕಾಲ ಪ್ರತಿಭಟನೆ ನಡೆದಿದ್ದವು

ಫೆಬ್ರವರಿ 11ರಂದು ನಡೆದಿದ್ದ ಇಂಥ ದಾಳಿಯಲ್ಲಿ ಸುಮಾರು 239 ಜನರು ಹತ್ಯೆಯಾಗಿದ್ದರು. ಕೊನೆಗೂ ಜನಾಂದೋಲನಕ್ಕೆ ಮಣಿದಿದ್ದ ಹೋಸ್ನಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಆದರೆ, 239 ಜನರ ಸಾವಿಗೆ ಕಾರಣರಾದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಹೊಸ್ನಿ ನಂತರ ಬಂದ ಮೊಹಮ್ಮದ್ ಮೊರ್ಸಿ ಅವರನ್ನು ಮಿಲಿಟರಿ ದಂಗೆ ಮೂಲಕ 2013ರಲ್ಲಿ ಅಧಿಕಾರದಿಂದ ಕೆಳಗಿಳಿಸಲಾಗಿತ್ತು.

English summary
Hosni Mubarak, Egypt’s president for almost 30 years who was ousted from power in what later became known as the “Arab Spring” has died. He was 91.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X