ದೆವ್ವಗಳ ಕಾಟಕ್ಕೆ ಹೆದರಿ ಅಧಿಕೃತ ನಿವಾಸ ತೊರೆದ ಬ್ರೆಜಿಲ್ ಅಧ್ಯಕ್ಷ!!

Posted By:
Subscribe to Oneindia Kannada

ಬ್ರೆಜಿಲಿಯಾ, ಮಾರ್ಚ್ 13: ತಮಗೆ ನೀಡಲಾಗಿರುವ ಅಧಿಕೃತ ನಿವಾಸದಲ್ಲಿ ದೆವ್ವಗಳ ಕಾಟವಿದೆಯೆಂದು ಆರೋಪಿಸಿರುವ ಬ್ರೆಜಿಲ್ ನ ಅಧ್ಯಕ್ಷ ಮೈಕಲ್ ಟೆಮರ್ ಅವರು, ಸೋಮವಾರ (ಮಾ. 13) ಆ ಮನೆಯನ್ನು ತೊರೆದಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.

ಪ್ಯಾಲೇಸಿನೋ ಡ ಅಲ್ವಡೋರಾ ಎಂಬ ಹೆಸರಿನ ಅಧ್ಯಕ್ಷರ ಮನೆಯಲ್ಲಿ ಮೈಕಲ್ ಅವರು, ತಮ್ಮ ಪತ್ನಿ ಮಾರ್ಸಿಲಾ ಹಾಗೂ ಏಳು ವರ್ಷದ ಪುತ್ರ ಮೈಕಲ್ ಜಿನ್ಹೋ ಜತೆಗೆ ವಾಸವಾಗಿದ್ದರು.

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮೈಕಲ್, ''ಆ ಮನೆಯಲ್ಲಿ ದೆವ್ವಗಳ ಕಾಟವಿದೆಯೆಂದು ಹಿಂದಿನ ಅಧ್ಯಕ್ಷರು ಹೇಳುತ್ತಿದ್ದರು. ಆದರೆ, ನಾನು ಅಂಥವುಗಳನ್ನು ನಿರ್ಲಕ್ಷಿಸಿದ್ದೆ. ಆದರೆ, ಇತ್ತೀಚೆಗೆ ಮನೆಯಲ್ಲಿರುವಾಗ ನನಗೆ ವಿಚಿತ್ರ ಅನುಭವಗಳಾಗುತ್ತಿದ್ದವು. ರಾತ್ರಿ ವೇಳೆ ನಿದ್ರೆ ಸರಿಯಾಗಿ ಆಗುತ್ತಿರಲಿಲ್ಲ. ಚಿತ್ರ ವಿಚಿತ್ರವಾದ ಅನುಭವಗಳಾಗಿವೆ. ಒಟ್ಟಾರೆಯಾಗಿ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇರುವುದು ಖಾತ್ರಿಯಾಗಿರುವುದರಿಂದ ನಾನು ಆ ಮನೆಯಿಂದ ಹೊರಬಂದಿದ್ದೇನೆ'' ಎಂದು ಹೇಳಿದ್ದಾರೆ.

ತಮ್ಮ ಮಾತುಗಳನ್ನು ಮುಂದುವರಿಸಿರುವ ಅವರು, ''ನನ್ನ ಅನುಭವಕ್ಕೆ ಏನು ಬಂದಿದೆಯೇ ಅದೇ ಅನುಭವಗಳು ನನ್ನ ಪತ್ನಿಗೂ ಆಗಿವೆ. ಇದೇ ನಮಗೆ ಆ ಮನೆಯ ಬಗ್ಗೆ ಬೇಸರ ಬರಲು ಕಾರಣವಾಗಿದೆ'' ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Brazilian President Michel Temer has abandoned his official residence, Palácio da Alvorada in Brasília, as he and his wife due to the fear of Ghosts in their house.
Please Wait while comments are loading...