ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ, ಅದು ನನ್ನ ಹಕ್ಕು: ಬ್ರೆಜಿಲ್ ಅಧ್ಯಕ್ಷ

|
Google Oneindia Kannada News

ಬ್ರೆಸಿಲಿಯಾ, ನವೆಂಬರ್ 27: ಕೊರೊನಾ ವೈರಸ್ ಸಾವಿನ ಪ್ರಕರಣಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಬ್ರೆಜಿಲ್ ಅಧ್ಯಕ್ಷರ ಹೇಳಿಕೆ ಅಲ್ಲಿನ ಜನರಲ್ಲಿ ಗೊಂದಲ ಮೂಡಿಸಿದೆ. ತಾವು ಕೊರೊನಾ ವೈರಸ್ ಲಸಿಕೆಯನ್ನು ಪಡೆದುಕೊಳ್ಳುವುದಿಲ್ಲ ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಹೇಳಿದ್ದಾರೆ.

ಕೊರೊನಾ ವೈರಸ್ ಲಸಿಕೆ ಕಾರ್ಯಕ್ರಮದ ಬಗ್ಗೆ ಅನೇಕ ಬಾರಿ ಸಂದೇಹ ವ್ಯಕ್ತಪಡಿಸಿದ್ದ ಬೊಲ್ಸೊನಾರೊ, ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರದ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ಬ್ರೆಜಿಲಿಯನ್ನರಿಗೆ ಲಸಿಕೆ ತೆಗೆದುಕೊಳ್ಳುವ ಅಗತ್ಯ ಬೀಳಲಾರದು ಎಂದು ಅವರು ಹೇಳಿದ್ದಾರೆ.

ಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳುಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು

ಕೊರೊನಾ ವೈರಸ್ ಸಾವುಗಳ ಸಂಖ್ಯೆಯಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿ ಬ್ರೆಜಿಲ್ ಇದೆ. ಬೊಲ್ಸೊನಾರೊ ಜುಲೈನಲ್ಲಿ ಸ್ವತಃ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಆದರೆ ಅವರು ಕೊರೊನಾ ವೈರಸ್ ಪಿಡುಗು ಗಂಭೀರವಾಗಿಲ್ಲ ಎಂದೇ ನಿರಾಕರಿಸುತ್ತ ಬಂದಿದ್ದಾರೆ.

 Brazilian President Bolsonaro Says Wont Take Coronavirus Vaccine, Its My Right

'ನಾನು ನಿಮಗೆ ಹೇಳುತ್ತೇನೆ, ನಾನು ಖಂಡಿತಾ ಅದನ್ನು ತೆಗೆದುಕೊಳ್ಳುವುದಿಲ್ಲ. ಅದು ನನ್ನ ಹಕ್ಕು' ಎಂದು ಲಸಿಕೆ ತೆಗೆದುಕೊಳ್ಳದೆ ಇರುವುದು ತಮ್ಮ ಹಕ್ಕು ಎಂದು ಬೊಲ್ಸನಾರೊ ಹೇಳಿದ್ದಾರೆ.

ಮಾಸ್ಕ್ ಧರಿಸುವುದರಿಂದ ಪರಿಣಾಮಕಾರಿಯಾಗುತ್ತದೆಯೇ ಎಂಬ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ ಸಹಾಯ ಮಾಡುತ್ತದೆ ಎಂಬುದಕ್ಕೆ ಒಂದು ಚಿಕ್ಕ ನಿರ್ಣಾಯಕ ಪುರಾವೆ ನೀಡುವಂತೆ ಅವರು ಹೇಳಿದ್ದಾರೆ.

ಕೊರೊನಾ ಲಸಿಕೆ: ಹೆಚ್ಚುವರಿ ಪ್ರಯೋಗಕ್ಕೆ ಮುಂದಾದ ಆಸ್ಟ್ರಾಜೆನಿಕಾಕೊರೊನಾ ಲಸಿಕೆ: ಹೆಚ್ಚುವರಿ ಪ್ರಯೋಗಕ್ಕೆ ಮುಂದಾದ ಆಸ್ಟ್ರಾಜೆನಿಕಾ

Recommended Video

ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ | UP | Oneindia Kannada

ಕೊರೊನಾವೈರಸ್ ಲಸಿಕೆಯು ವ್ಯಾಪಕವಾಗಿ ಲಭ್ಯವಾದ ಬಳಿಕ ಬ್ರೆಜಿಲ್‌ನ ಜನತೆಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದು ಬೊಲ್ಸನಾರೊ ಅನೇಕ ಬಾರಿ ಹೇಳಿದ್ದಾರೆ. ಲಸಿಕೆಯು ತಮ್ಮ ನಾಯಿಗೆ ಮಾತ್ರವೇ ಬೇಕಾಗುತ್ತದೆ ಎಂದು ಅವರು ಅಕ್ಟೋಬರ್‌ನಲ್ಲಿ ಲೇವಡಿ ಮಾಡಿದ್ದರು.

English summary
Brazilian president Jair Bolsonaro said he will not take coronavirus vaccine and it is his right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X