ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದದ ಕಿಡಿ ಹತ್ತಿದ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆ ಒಪ್ಪಂದ ರದ್ದುಗೊಳಿಸಿದ ಬ್ರೆಜಿಲ್

|
Google Oneindia Kannada News

ಬ್ರೆಜಿಲ್, ಜೂನ್ 30: ಭಾರತದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆ ಖರೀದಿಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಬ್ರೆಜಿಲ್, ಲಸಿಕೆಯ ಒಪ್ಪಂದವನ್ನು ರದ್ದುಗೊಳಿಸಿದೆ. 32.4 ಕೋಟಿ ರೂ ಮೌಲ್ಯದ ಲಸಿಕೆ ಒಪ್ಪಂದ ಇದಾಗಿದ್ದು, ಭಾರತದ ಲಸಿಕೆ ಖರೀದಿಯನ್ನು ಬ್ರೆಜಿಲ್ ಕೈಬಿಟ್ಟಿದೆ.

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಭಾರತದಿಂದ ಪೂರೈಕೆಯಾಗದಿರುವ ಕೋವ್ಯಾಕ್ಸಿನ್ ಲಸಿಕೆ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 45 ಮಿಲಿಯನ್ ಡಾಲರ್ ಹಣ ಬಿಡುಗಡೆ ಮಾಡಲಾಗಿದೆ ಎಂಬ ವಿವಾದ ಉಂಟಾಗಿತ್ತು.

Brazil To Suspend Covaxin Deal As Controversy Emerged

ಜಗತ್ತಿನಲ್ಲೇ ಮೂರನೇ ಅತಿ ದುಬಾರಿ ಲಸಿಕೆ ಎನಿಸಿರುವ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಖರೀದಿ ಮುಂದಾಗಿರುವುದು ಏಕೆ ಎಂಬ ಬಗ್ಗೆ ಆರಂಭದಲ್ಲಿ ಬ್ರೆಜಿಲ್ ಜನಪ್ರತಿನಿಧಿಗಳು ಪ್ರಶ್ನೆ ಮಾಡುತ್ತಿದ್ದರು.

ದೇಶದ ಮಾಧ್ಯಮಗಳಲ್ಲಿ ಕೊವ್ಯಾಕ್ಸಿನ್ 'ತಲೆಬರಹ'ದ ಜೊತೆ ಬ್ರೆಜಿಲ್ ಅಧ್ಯಕ್ಷರ 'ಹಣೆಬರಹ'!ದೇಶದ ಮಾಧ್ಯಮಗಳಲ್ಲಿ ಕೊವ್ಯಾಕ್ಸಿನ್ 'ತಲೆಬರಹ'ದ ಜೊತೆ ಬ್ರೆಜಿಲ್ ಅಧ್ಯಕ್ಷರ 'ಹಣೆಬರಹ'!

ಆದರೆ ಮಂಗಳವಾರ 'ಓ ಗ್ಲೋಬೋ' ಸುದ್ದಿ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ಮಾಡಿಸನ್ ಬಯೋಟೆಕ್ ಜೊತೆ ಯಾವುದೇ ಸರಕಿಗೆ ಸಂಬಂಧಿಸಿದಂತೆ ಬ್ರೆಜಿಲ್ ಸರ್ಕಾರ ಒಪ್ಪಂದ ಮಾಡಿಕೊಂಡಿಲ್ಲ ಎಂದು ರಿಕಾರ್ಡೋ ಮಿರಿಂಡಾ ಸ್ಪಷ್ಟಪಡಿಸುತ್ತಿದ್ದಂತೆ ಪ್ರಕರಣ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿತು. ಬ್ರೆಜಿಲ್‌ನಲ್ಲಿ ಈ ಸಂಗತಿ ಸಂಚಲನ ಸೃಷ್ಟಿಸಿದ್ದು, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಅವರಿಗೆ ಸಂಸತ್ ಸದಸ್ಯರು ಎಚ್ಚರಿಕೆ ನೀಡಿದ್ದರು.

Recommended Video

China ಕ್ಕೆ ಬುದ್ದಿ ಕಲಿಸಲು ಸಭೆ ಸೇರಿದ ಮೋದಿ, ಶಾ, ರಾಜನಾಥ್ ಸಿಂಗ್ | Oneindia Kannada

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬ್ರೆಜಿಲ್, ಭಾರತದ ಲಸಿಕೆ ಖರೀದಿ ಒಪ್ಪಂದವನ್ನು ಕೈಬಿಟ್ಟಿದೆ. ಒಟ್ಟು 20 ಮಿಲಿಯನ್ ಡೋಸ್ ಕೋವ್ಯಾಕ್ಸಿನ್ ಲಸಿಕೆ ಖರೀದಿಗೆ ಭಾರತ್ ಬಯೋಟೆಕ್ ಸಂಸ್ಥೆ ಜೊತೆಗೆ ಬ್ರೆಜಿಲ್ ಒಪ್ಪಂದ ಮಾಡಿಕೊಂಡಿತ್ತು. ವಿವಾದದ ಹಿನ್ನೆಲೆಯಲ್ಲಿ ಒಪ್ಪಂದ ರದ್ದಾಗಿದೆ.

English summary
Brazil will suspend a $324 million Indian vaccine contract that has mired President Jair Bolsonaro in accusations of irregularities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X