ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಡೋಸ್ ಕೊರತೆ ನಡುವೆ ಬ್ರೆಜಿಲ್‌ನಲ್ಲಿ ಕೊರೊನಾ ಬೂಸ್ಟರ್ ಡೋಸ್ ಆರಂಭ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಸಾವೊ ಪೌಲೊ, ಸೆಪ್ಟೆಂಬರ್ 4: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಬೂಸ್ಟರ್‌ ಡೋಸ್‌ ಅವಶ್ಯಕತೆ ಕುರಿತು ಜಾಗತಿಕವಾಗಿ ಚರ್ಚೆಗಳು ನಡೆಯುತ್ತಿದೆ. ಹಲವು ದೇಶಗಳಲ್ಲಿ ಒಂದು ಡೋಸ್ ಕೊರೊನಾ ಲಸಿಕೆಗೇ ಕೊರೆತೆ ಉಂಟಾಗಿರುವ ಸಮಯದಲ್ಲಿ ಬೂಸ್ಟರ್ ಡೋಸ್/ ಮೂರನೇ ಡೋಸ್‌ ಅವಶ್ಯಕತೆ ಕುರಿತು ಪ್ರಶ್ನೆಗಳು ಎದ್ದಿವೆ.

ಈ ನಡುವೆ ಬ್ರೆಜಿಲ್‌ನಲ್ಲಿ ಅದಾಗಲೇ ಬೂಸ್ಟರ್‌ ಡೋಸ್‌ ನೀಡಲು ಆರಂಭಿಸಲಾಗಿದೆ. ಬ್ರೆಜಿಲ್‌ನಲ್ಲಿ ಬಹುತೇಕ ಜನರಿಗೆ ಕೊರೊನಾ ಲಸಿಕೆಯ ಎರಡನೇ ಡೋಸ್ ಲಭ್ಯವಾಗಿಲ್ಲ. ಆದರೂ ಡೆಲ್ಟಾ ರೂಪಾಂತರ ಹರಡುವಿಕೆ ಭೀತಿಯಿಂದ ಕೆಲವು ನಗರಗಳಲ್ಲಿ ಬೂಸ್ಟರ್‌ ಡೊಸ್‌ ನೀಡಲು ಆರಂಭಿಸಲಾಗಿದೆ.

Brazil Starts Corona Booster Shots Inbetween Vaccine Shortage

ಡೆಲ್ಟಾ ರೂಪಾಂತರ ಸೋಂಕು ರಿಯೊ ಡಿ ಜನೈರೋದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ. ಇಲ್ಲಿ ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚಿರುವ ಕಾರಣವಾಗಿ ಬೂಸ್ಟರ್‌ ಡೋಸ್‌ಗಳನ್ನು ಈಗಾಗಲೇ ನೀಡಲು ಆರಂಭಿಸಲಾಗಿದೆ. ಸಾಲ್ವಡೋರ್ ಹಾಗೂ ಸಾವೋ ಲೂಯಿಸ್‌ನ ಈಶಾನ್ಯ ನಗರಗಳಲ್ಲಿ ಸೆಪ್ಟೆಂಬರ್ 6ರಿಂದ ಬೂಸ್ಟರ್ ಲಸಿಕೆಗಳನ್ನು ನೀಡಲು ಆರಂಭಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಕ್ರಮೇಣವಾಗಿ ಬೂಸ್ಟರ್‌ ಡೋಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫ್ರಾನ್ಸ್‌, ಇಸ್ರೇಲ್, ಚೀನಾ, ಚಿಲಿಯಲ್ಲಿ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್‌ಗಳನ್ನು ನೀಡಲಾಗುತ್ತಿದೆ. ಈ ದೇಶಗಳಲ್ಲಿ ಬಹುಪಾಲು ಜನರಿಗೆ ಎರಡೂ ಡೋಸ್‌ಗಳ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ಆದರೆ ಬ್ರೆಜಿಲ್‌ನಲ್ಲಿ ಕೇವಲ 30% ಮಂದಿಗೆ ಎರಡು ಡೋಸ್‌ಗಳ ಲಸಿಕೆ ನೀಡಲಾಗಿದೆ.

ಕೊರೊನಾ ಬೂಸ್ಟರ್‌ ಡೋಸ್; ದುಬಾರಿ ಸಂಗತಿಯಲ್ಲ ಎಂದ WHO ಕೊರೊನಾ ಬೂಸ್ಟರ್‌ ಡೋಸ್; ದುಬಾರಿ ಸಂಗತಿಯಲ್ಲ ಎಂದ WHO

ಬ್ರೆಜಿಲ್‌ನಲ್ಲಿ ಕಳೆದ ಎರಡು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸೆಪ್ಟೆಂಬರ್ 2ರ ಹಿಂದಿನ ಏಳು ದಿನಗಳಲ್ಲಿ 621 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಬ್ರೆಜಿಲ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಉತ್ತುಂಗದಲ್ಲಿದ್ದು, ಆ ಅವಧಿಯಲ್ಲಿ ಏಳು ದಿನಗಳಲ್ಲಿ ಮೂರು ಸಾವಿರ ಮಂದಿ ಸಾವನ್ನಪ್ಪಿದ್ದರು.

ಸದ್ಯಕ್ಕೆ ಬ್ರೆಜಿಲ್‌ನಲ್ಲಿ ಚೀನಾ ಮೂಲದ ಸಿನೊವಾಕ್ ಲಸಿಕೆ ನೀಡಲಾಗುತ್ತಿದ್ದು, ಡೆಲ್ಟಾ ರೂಪಾಂತರದ ವಿರುದ್ಧ ಈ ಲಸಿಕೆ ದಕ್ಷತೆ ಕುರಿತು ಅನುಮಾನಗಳು ವ್ಯಕ್ತವಾಗಿವೆ. ಈ ಕಾರಣವಾಗಿ ಬೂಸ್ಟರ್ ಡೋಸ್‌ಗಳನ್ನು ನೀಡಲು ಒತ್ತಾಯಗಳು ಕೇಳಿಬಂದಿವೆ. ದೇಶದಲ್ಲಿ ಎಷ್ಟೋ ಮಂದಿಗೆ ಇನ್ನೂ ಲಸಿಕೆಯ ಎರಡನೇ ಡೋಸ್ ನೀಡಲಾಗಿಲ್ಲ. ಹೀಗಿದ್ದಾಗ ಸರ್ಕಾರ ಬೂಸ್ಟರ್ ಡೋಸ್ ಲಸಿಕೆ ನೀಡುವ ಆಲೋಚನೆಗೆ ತಡೆಹಿಡಿಯಬೇಕು ಎಂದು ಬ್ರೆಜಿಲ್ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

Brazil Starts Corona Booster Shots Inbetween Vaccine Shortage

ಬೂಸ್ಟರ್ ಡೋಸ್‌ ಬಗ್ಗೆ WHO ನೀಡಿದ್ದ ಸಲಹೆ
ಬೂಸ್ಟರ್ ಅಥವಾ ಮೂರನೇ ಡೋಸ್ ಲಸಿಕೆ ನೀಡುವ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಕೆಲವು ಸಲಹೆಗಳನ್ನು ನೀಡಿತ್ತು. ಬಡದೇಶಗಳಿಗೆ ಕೊರೊನಾ ಲಸಿಕೆ ಲಭ್ಯವಾಗದ ಇಂಥ ಸಂದರ್ಭದಲ್ಲಿ ಹೆಚ್ಚು ಆದಾಯದ ದೇಶಗಳು ಬೂಸ್ಟರ್‌ ಡೋಸ್ ಲಸಿಕೆ ನೀಡಲು ಮುಂದಾದರೆ ಕೊರೊನಾ ಸಾಂಕ್ರಾಮಿಕ ವಿಶ್ವದಾದ್ಯಂತ ಇನ್ನಷ್ಟು ಭೀಕರ ಸನ್ನಿವೇಶ ಸೃಷ್ಟಿಗೆ ಕಾರಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದರು.

ಕಾಲಕ್ರಮೇಣ ಲಸಿಕೆ ಪ್ರತಿಕಾಯ ತಗ್ಗುತ್ತದೆ, ಪ್ರತಿರಕ್ಷಣಾ ವ್ಯವಸ್ಥೆ ಬ್ಯಾಕಪ್ ನೀಡಲಿದೆಕಾಲಕ್ರಮೇಣ ಲಸಿಕೆ ಪ್ರತಿಕಾಯ ತಗ್ಗುತ್ತದೆ, ಪ್ರತಿರಕ್ಷಣಾ ವ್ಯವಸ್ಥೆ ಬ್ಯಾಕಪ್ ನೀಡಲಿದೆ

ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಅಭಿವೃದ್ಧಿಗೊಂಡಿರುವ ಕೊರೊನಾ ಲಸಿಕೆಗಳ ಸಮಾನ ವಿತರಣೆಗೆ ಆದ್ಯತೆ ನೀಡಲು ಇನ್ನಷ್ಟು ದಿನ ಬೂಸ್ಟರ್ ಡೋಸ್‌ಗಳಿಗೆ ತಡೆ ನೀಡುವಂತೆ ಈಚೆಗೆ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ಶ್ರೀಮಂತ ಹಾಗೂ ಬಡ ರಾಷ್ಟ್ರಗಳ ನಡುವೆ ಕೊರೊನಾ ಲಸಿಕೆ ವಿತರಣೆಯಲ್ಲಿನ ತೀವ್ರ ಅಸಮಾನತೆಯನ್ನು ಪರಿಹರಿಸಲು ಕನಿಷ್ಠ ಸೆಪ್ಟೆಂಬರ್ ಅಂತ್ಯದವರೆಗೆ ಕೊರೊನಾ ಬೂಸ್ಟರ್ ಲಸಿಕೆಗಳಿಗೆ ತಡೆ ನೀಡುವಂತೆ ದೇಶಗಳಿಗೆ ಮನವಿ ಮಾಡಿದೆ.

ಕೊರೊನಾ ಸಾಂಕ್ರಾಮಿಕ ಹೆಚ್ಚಾಗುತ್ತಿರುವ ಹಿನ್ನೆಲೆ ರೂಪಾಂತರ ವೈರಸ್ ವಿರುದ್ಧ ಪ್ರಸ್ತುತ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಇಸ್ರೇಲ್ ಬೂಸ್ಟರ್ ಡೋಸ್ ವಿತರಣೆ ಶುರು ಮಾಡಿದೆ. ಬೂಸ್ಟರ್ ಡೋಸ್ ಲಸಿಕೆ ವಿತರಣೆ ಬಗ್ಗೆ ಫೈಜರ್ ಕಂಪನಿ ಜೊತೆಗೆ ಅಮೆರಿಕ ಚರ್ಚೆ ನಡೆಸುತ್ತಿದೆ. ಭಾರತದಲ್ಲಿಯೂ ಈ ಕುರಿತು ಚರ್ಚೆಗಳು ಆರಂಭವಾಗಿವೆ. ಕಾಲಕ್ರಮೇಣ ಲಸಿಕೆ ಪ್ರತಿಕಾಯ ಮಟ್ಟ ಕ್ಷೀಣಿಸುವುದರಿಂದ ಬೂಸ್ಟರ್ ಡೋಸ್ ಅಗತ್ಯ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

English summary
Brazil starts booster shots while many still await for 2nd dose
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X