ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ 2 ಮಿಲಿಯನ್ ಕೊರೊನಾವೈರಸ್ ಲಸಿಕೆ ಪಡೆದ ಬ್ರೆಜಿಲ್

|
Google Oneindia Kannada News

ರಿಯೋ ಡಿ ಜನೈರೊ, ಜನವರಿ 23: ಬ್ರೆಜಿಲ್ ಸರ್ಕಾರವು ಶುಕ್ರವಾರ ಭಾರತದಲ್ಲಿ ಬರೋಬ್ಬರಿ 2 ಮಿಲಿಯನ್ ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡಿದೆ. ಆದರೂ ದಕ್ಷಿಣ ಅಮೆರಿಕಾದ ಅತಿದೊಡ್ಡ ರಾಷ್ಟ್ರದಲ್ಲಿ ಲಸಿಕೆ ಕೊರತೆ ಕಾಡುತ್ತಿರುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್-19 ವಿರುದ್ಧ ಹೋರಾಡಲು ಜಾಗತಿಕ ಸಮುದಾಯಕ್ಕೆ ನೆರವಾಗುವುದರ ಭಾಗವಾಗಿ ಭಾರತವು ಬ್ರೆಜಿಲ್‌ಗೆ ಕೊರೊನಾವೈರಸ್ ಲಸಿಕೆಗಳನ್ನು ತಲುಪಿಸಿದೆ. ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಲಸಿಕೆ ರಿಯೊ ಡಿ ಜನೈರೊಗೆ ತಲುಪುವ ಮೊದಲು ಸಾವೊ ಪಾಲೊಗೆ ಬಂದಿಳಿದಿದೆ ಎಂದು ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ಘೋಷಿಸಿತು. ಅಲ್ಲಿ ಬ್ರೆಜಿಲ್‌ನ ಸರ್ಕಾರಿ ಫಿಯೋಕ್ರಜ್ ಸಂಸ್ಥೆ ನೆಲೆಗೊಂಡಿದ್ದು ಲಸಿಕೆ ತಯಾರಿಸುವ ಮತ್ತು ವಿತರಿಸಲು ಒಪ್ಪಂದವನ್ನು ಮಾಡಿಕೊಂಡಿದೆ.

brazil

ಭಾರತದಿಂದ ಬಂದಿರುವ 20 ಲಕ್ಷ ಡೋಸ್‌ಗಳು ಕೊರತೆಯನ್ನು ತೋರಿಸುತ್ತಿದ್ದು, 21 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಕ್ಕೆ ಸಾಕಾಗುವುದಿಲ್ಲ, ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ ಎಂದು ಬ್ರೆಜಿಲ್‌ನ ಸಾರ್ವಜನಿಕ ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಲಸಿಕೆಗಳು ಸುರಕ್ಷಿತ: ಬೆಂಕಿ ಅವಘಡದ ಬಳಿಕ ಅದಾರ್ ಸ್ಪಷ್ಟನೆಲಸಿಕೆಗಳು ಸುರಕ್ಷಿತ: ಬೆಂಕಿ ಅವಘಡದ ಬಳಿಕ ಅದಾರ್ ಸ್ಪಷ್ಟನೆ

ಕಳೆದ ವಾರವೇ ಭಾರತದಿಂದ ಕೋವಿಡ್-19 ಲಸಿಕೆಗಳನ್ನು ಹೊತ್ತ ವಿಮಾನವು ಬ್ರೆಜಿಲ್‌ಗೆ ತೆರಳಬೇಕಿತ್ತು. ಆದರೆ ಕಾರಣಾಂತರಗಳಿಂದ ವಿಳಂಬವಾದ ಕಾರಣ ಕೋವಿಡ್-19 ಲಸಿಕೆ ತಲುಪಲು ವಿಳಂಬವಾಗಿದೆ.

ಪ್ರಪಂಚದಾದ್ಯಂತದ ದೇಶಗಳು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು, ತಮ್ಮ ಜನಸಂಖ್ಯೆಗೆ ಸಾಕಷ್ಟು ಲಸಿಕೆಗಳನ್ನು ನೀಡಲು ಹೆಣಗಾಡುತ್ತಿವೆ. ದೇಶೀಯವಾಗಿ ಲಸಿಕೆಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಫಿಯೋಕ್ರಜ್ ಅಥವಾ ಬುಟಾಂಟನ್ ಇನ್ನೂ ತಮ್ಮ ಪಾಲುದಾರರಿಂದ ಪಡೆದಿಲ್ಲ, ಬದಲಿಗೆ ಸಂಬಂದಪಟ್ಟ ಸಕ್ರಿಯ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬೇಕು.

English summary
Brazil’s government on Friday received 2 million doses of coronavirus vaccine from India, but experts warned the shipment will do little to shore up an insufficient supply in South America’s biggest nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X