ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವನ್ನು ಸಂಜೀವಿನಿ ಹೊತ್ತು ತರುವ ಹನುಮಂತನಿಗೆ ಹೋಲಿಸಿದ ಬ್ರೆಜಿಲ್ ಅಧ್ಯಕ್ಷ

|
Google Oneindia Kannada News

ರಿಯೋ ಡಿ ಜನೈರೊ, ಜನವರಿ 23: ದಕ್ಷಿಣ ಅಮೆರಿಕಾದ ಅತಿದೊಡ್ಡ ರಾಷ್ಟ್ರವಾದ ಬ್ರೆಜಿಲ್‌ಗೆ ಎರಡು ಮಿಲಿಯನ್ ಕೊರೊನಾವೈರಸ್ ಲಸಿಕೆಯನ್ನು ತಲುಪಿಸಿದ ಭಾರತಕ್ಕೆ, ಬ್ರೆಜಿಲ್ ಅಧ್ಯಕ್ಷ ಜೇರ್‌ ಬೊಲ್ಸೊನಾರೊ ಅವರು ವಿಶೇಷವಾದ ರೀತಿಯಲ್ಲಿ ಧನ್ಯವಾದ ತಿಳಿಸಿದ್ದಾರೆ.

ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದು ಲಕ್ಷಣನಿಗೆ ಜೀವದಾನ ನೀಡಿದ ಹನುಮಂತನಂತೆ ಕೊರೊನಾವೈರಸ್ ಲಸಿಕೆಗಳನ್ನು ಭಾರತವು ಬ್ರೆಜಿಲ್‌ಗೆ ಕಳುಹಿಸಿಕೊಟ್ಟು ನಮ್ಮ ಪ್ರಜೆಗಳ ಜೀವ ಉಳಿಸಲಾಗಿದೆ'' ಎಂದು ಬ್ರೆಜಿಲ್ ಅಧ್ಯಕ್ಷ ಫೋಟೋವೊಂದನ್ನು ಟ್ವೀಟ್ ಮಾಡುವ ಮೂಲಕ ಭಾರತದ ಸಹಾಯವನ್ನು ಹೊಗಳಿದ್ದಾರೆ.

Brazil President

ಬ್ರೆಜಿಲ್ ಅಧ್ಯಕ್ಷ ಟ್ವೀಟ್ ಮಾಡಿರುವ ಫೋಟೋದಲ್ಲಿ ಹನುಮಂತ ಸಂಜೀವಿನಿ ಹೊತ್ತು ಭಾರತದಿಂದ ಬ್ರೆಜಿಲ್‌ಗೆ ಜಿಗಿಯುತ್ತಿದ್ದಾರೆ. ಪರ್ವತವನ್ನು ಹೋಲುವ ರೀತಿಯಲ್ಲಿ ಲಸಿಕೆ ಮತ್ತು ಸಿರಿಂಜ್‌ಗಳು ಕಾಣುವ ಚಿಹ್ನೆಗಳಿದ್ದು, 'ಧನ್ಯವಾದಗಳು ಭಾರತ' ಎಂದು ಫೋಟೋದಲ್ಲಿ ಬರೆಯಲಾಗಿದೆ.

''ನಮಸ್ಕಾರ ಪ್ರಧಾನಿ ನರೇಂದ್ರ ಮೋದಿ ಅವರೇ, ಇಂತಹ ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಭಾರತದಂತಹ ಸ್ನೇಹಿತ ನಮ್ಮೊಂದಿಗಿರುವುದು ಹೆಮ್ಮೆಯನ್ನು ಮೂಡಿಸುತ್ತದೆ. ಭಾರತದಿಂದ ಬ್ರೆಜಿಲ್‌ಗೆ ಲಸಿಕೆ ರಫ್ತು ಮಾಡಿ ಸಹಾಯ ಮಾಡಿದಕ್ಕಾಗಿ ಧನ್ಯವಾದಗಳು'' ಎಂದು ಟ್ವೀಟ್‌ನಲ್ಲಿ ಬೊಲ್ಸೊನಾರೊ ತಿಳಿಸಿದ್ದಾರೆ.

English summary
Brazilian President Jair Bolsonaro, in a tweet, expressed gratitude and thanked Prime Minister Narendra Modi for vaccine export
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X