ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಾಡಿದ ಪಾಪ ಸುಮ್ನೆ ಬಿಡುತ್ತಾ?’ ಬ್ರೆಜಿಲ್ ಅಧ್ಯಕ್ಷರಿಗೆ ಶಾಪ ಹಾಕಿದ್ದು ಯಾರು?

|
Google Oneindia Kannada News

ವಿವಾದಗಳ ಸರದಾರ, ಹಗರಣಗಳ ಸಾಹುಕಾರ. ಸದಾ ಒಂದಲ್ಲಾ ಒಂದು ಕಿರಿಕ್ ಮಾಡಿಕೊಳ್ಳುವ ಬ್ರೆಜಿಲ್ ಅಧ್ಯಕ್ಷ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದ್ದಾರೆ. ಆದ್ರೆ ಈಗ ಸುದ್ದಿಯಲ್ಲಿರುವುದು ವಿವಾದದ ಮೂಲಕವಲ್ಲ, ಬದಲಾಗಿ ಆಸ್ಪತ್ರೆಗೆ ದಾಖಲಾಗಿ! ಹೌದು, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೋಗೆ 10 ದಿನಗಳಿಂದಲೂ ಬಿಕ್ಕಳಿಕೆ ಬರುತ್ತಿತ್ತು. ವೈದ್ಯಕೀಯ ಪರಿಶೀಲನೆಯಲ್ಲಿ ಜೈರ್ ಕರುಳಲ್ಲಿ ಸಮಸ್ಯೆ ಇರುವುದು ಗೊತ್ತಾಗಿದೆ. ಇದೇ ಕಾರಣಕ್ಕೆ ಜೈರ್ ಬೋಲ್ಸೊನಾರೋ ಆಸ್ಪತ್ರೆಗೆ ದಾಖಲಾಗಿದ್ದು, ಸರ್ಜರಿ ಮಾಡಲು ತಯಾರಿ ನಡೆದಿದೆ.

ಇದು ಜೈರ್ ಬೋಲ್ಸೊನಾರೋ ಅವರ ಅಭಿಮಾನಿಗಳಿಗೆ ಆಘಾತ ತಂದಿದ್ದರೆ, ಬೋಲ್ಸೊನಾರೋ ವಿರೋಧಿ ಬಣದ ಕೆಲವರು ಹಿಡಿ ಶಾಪ ಹಾಕುತ್ತಿದ್ದಾರೆ. ಅಂದಹಾಗೆ ಜುಲೈ 3ರಂದು ಹಲ್ಲಿನ ಕಸಿ ಮಾಡಿಸಿಕೊಂಡಿದ್ದ 66 ವರ್ಷ ವಯಸ್ಸಿನ ಬೋಲ್ಸೊನಾರೋಗೆ ಬಿಕ್ಕಳಿಕೆ ಕಾಣಿಸಿತ್ತು. ಬಿಕ್ಕಳಿಕೆ ಪ್ರಭಾವ ಎಷ್ಟಿತ್ತು ಅಂದರೆ, 10 ದಿನಗಳಿಂದಲೂ ಇದೇ ಪರಿಸ್ಥಿತಿಯಲ್ಲಿ ಜೈರ್ ಬೋಲ್ಸೊನಾರೋ ನರಳುತ್ತಿದ್ದಾರೆ. ಹೊರಗೆ ಬಂದಾಗ ಕೂಡ ಬೋಲ್ಸೊನಾರೋ ಬಿಕ್ಕಳಿಸುತ್ತಿದ್ರು. ಪರಿಸ್ಥಿತಿಯ ಗಂಭೀರತೆ ಅರಿತು ಬೋಲ್ಸೊನಾರೋ ಅವರನ್ನ ಮೊದಲು ಬ್ರೆಸಿಲಿಯಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಅಲ್ಲಿ ಸರಿಯಾದ ವ್ಯವಸ್ಥೆ ಸಿಗದ ಹಿನ್ನೆಲೆ 'ಸಾವೊ ಪಾಲೊ' ನಗರದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಇದು 7ನೇ ಸರ್ಜರಿ..!

ಇದು 7ನೇ ಸರ್ಜರಿ..!

ಒಂದಲ್ಲ, ಎರಡಲ್ಲ ಈವರೆಗೂ ಬರೋಬ್ಬರಿ 6 ಬಾರಿ ಸರ್ಜರಿಗೆ ಒಳಗಾಗಿದ್ದಾರೆ ಬ್ರೆಜಿಲ್ ಹಾಲಿ ಅಧ್ಯಕ್ಷ ಜೈರ್ ಬೋಲ್ಸೊನಾರೋ. 2018ರ ಎಲೆಕ್ಷನ್ ಕ್ಯಾಂಪೇನ್ ಸಂದರ್ಭ ಬೋಲ್ಸೊನಾರೋ ಹೊಟ್ಟೆಗೆ ಇರಿಯಲಾಗಿತ್ತು. ಇದಾದ ಬಳಿಕ ವೈದ್ಯ ಆಂಟೋನಿಯೊ ಮ್ಯಾಸಿಡೊ ಹಲವು ಬಾರಿ ಬೋಲ್ಸೊನಾರೋಗೆ ಸರ್ಜರಿ ಮಾಡಿದ್ದಾರೆ. ಇದೇ ಮಂಗಳವಾರ ರಾತ್ರಿಯಿಂದ ಆರೋಗ್ಯ ಹದಗೆಟ್ಟಿತ್ತು. ಸಮಸ್ಯೆ ಕುರಿತು ಆಪ್ತರ ಬಳಿ ಬೋಲ್ಸೊನಾರೋ ಹೇಳಿಕೊಂಡಿದ್ದರು. ಮಾತಾಡಿದರೆ ಸಾಕು ಬಿಕ್ಕಳಿಕೆ ಹೆಚ್ಚಾಗುತ್ತಿತ್ತಂತೆ. ಹೀಗಾಗಿ ಬೋಲ್ಸೊನಾರೋ ಅವರನ್ನ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದ್ದು, ಸರ್ಜರಿಗೆ ಸಿದ್ಧತೆ ನಡೆದಿದೆ.

ಔಷಧ ತೆಗೆದುಕೊಂಡಿದ್ದೇ ಎಫೆಕ್ಟ್..?

ಔಷಧ ತೆಗೆದುಕೊಂಡಿದ್ದೇ ಎಫೆಕ್ಟ್..?

ಆರೋಗ್ಯವಾಗೇ ಇದ್ದ ಬೋಲ್ಸೊನಾರೋಗೆ ದಿಢೀರ್ ಹಿಂಗೆ ಯಾಕಾಯ್ತು? ಇಂತಹ ಹಲವು ಪ್ರಶ್ನೆಗಳ ಮಧ್ಯೆ ಸ್ವತಃ ಬ್ರೆಜಿಲ್ ಅಧ್ಯಕ್ಷರೇ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗಷ್ಟೇ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬೋಲ್ಸೊನಾರೋ, ತಮ್ಮ ಕಷ್ಟ ಹೇಳಿಕೊಂಡಿದ್ದರು.

ಇದೇ ಫಸ್ಟ್ ಟೈಂ ನಂಗೆ ಹೀಗಾಗುತ್ತಿದೆ

ಇದೇ ಫಸ್ಟ್ ಟೈಂ ನಂಗೆ ಹೀಗಾಗುತ್ತಿದೆ

ಇದೇ ಫಸ್ಟ್ ಟೈಂ ನಂಗೆ ಹೀಗಾಗುತ್ತಿದೆ, ನನ್ನ ಔಷಧಗಳಿಂದ ಹೀಗೆ ಆಗಿರಬಹುದು ಎಂದಿದ್ದರು. 'ಪ್ರತಿ ಕ್ಷಣವೂ ಬಿಕ್ಕಳಿಕೆ ಬರುತ್ತದೆ' ಅಂತಾ ಬ್ರೆಜಿಲ್‌ನ ಅಧ್ಯಕ್ಷ ತಮ್ಮ ಸಂಕಷ್ಟ ಹೇಳಿಕೊಂಡಿದ್ರು. ಇದಾದ ಕೆಲವೇ ದಿನಗಳಲ್ಲಿ ಬೋಲ್ಸೊನಾರೋ ಆಸ್ಪತ್ರೆ ಸೇರಿದ್ದಾರೆ. ಸಹಜವಾಗಿ ಈ ಘಟನೆ ಜೈರ್ ಬೋಲ್ಸೊನಾರೋ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

ಬೋಲ್ಸೊನಾರೋ ವಿರುದ್ಧ ಆಕ್ರೋಶ

ಬೋಲ್ಸೊನಾರೋ ವಿರುದ್ಧ ಆಕ್ರೋಶ

ಬ್ರೆಜಿಲ್‌ನಲ್ಲಿ ಬೋಲ್ಸೊನಾರೋ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ವಿವಾದ ಸೃಷ್ಟಿಸುತ್ತಿದ್ದಾರೆ. ಕೊರೊನಾ ನಿಯಂತ್ರಣದ ವಿಚಾರದಲ್ಲಿ ಈಗಾಗಲೇ ಬ್ರೆಜಿಲ್‌ ಸಂಸತ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಅಮೆಜಾನ್ ಮೂಲ ನಿವಾಸಿಗಳು ಜೈರ್ ಬೋಲ್ಸೊನಾರೋ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಹೋರಾಟ ಆರಂಭಿಸಿದ್ದಾರೆ. ಇದರ ನಡುವೆ ಪರಿಸರ ಸಂರಕ್ಷಣೆ ವಿಚಾರದಲ್ಲೂ ಬೋಲ್ಸೊನಾರೋ ಸರ್ಕಾರದ ಈ ಅಸಡ್ಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದ್ಯಾವುದಕ್ಕೂ ಜೈರ್ ಬೋಲ್ಸೊನಾರೋ ಕೇರ್ ಮಾಡುವ ಲಕ್ಷಣಗಳೇ ಕಾಣುತ್ತಿಲ್ಲ. ಇಷ್ಟೆಲ್ಲದರ ನಡುವೆ ಸ್ವತಃ ಬ್ರೆಜಿಲ್ ಅಧ್ಯಕ್ಷರೇ ಆಸ್ಪತ್ರೆ ಸೇರಿದ್ದಾರೆ.

English summary
Brazil president Jair Bolsonaro admitted hospital after continuous hiccups from 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X