ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಂತೆ ಆ ದೇಶದಲ್ಲೂ ಭೀಕರತೆ ಸೃಷ್ಟಿಸಲಿದ್ಯಾ ಕೊರೊನಾ ವೈರಸ್?

|
Google Oneindia Kannada News

ಬ್ರೆಸಿಲಿಯಾ, ಜೂನ್ 5: ಇಡೀ ಜಗತ್ತು ಕೊರೊನಾ ವೈರಸ್ ಅಬ್ಬರಕ್ಕೆ ನಲುಗಿದೆ. ಚೀನಾದಿಂದ ಸೃಷ್ಟಿಯಾದ ಡೆಡ್ಲಿ ವೈರಸ್ ಬಳಿಕ ವಿಶ್ವದೆಲ್ಲೆಡೆ ಹರಡಿದೆ. ಯುಎಸ್, ಇಟಲಿ, ಸ್ಪೇನ್, ಯುಕೆ, ಜರ್ಮನ್, ಪೆರು, ಟರ್ಕಿ, ರಷ್ಯಾ, ಭಾರತ, ಬ್ರೆಜಿಲ್, ಫ್ರಾನ್ಸ್ ಅಂತಹ ಪ್ರಮುಖ ದೇಶಗಳಲ್ಲಿ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗಿದ್ದಾರೆ.

Recommended Video

ಕೊರೊನ ಕಾರಣ SP Road ಈಗ ಸಂಪೂರ್ಣ ಸೀಲ್ ಡೌನ್ | Oneindia Kannada

ಕೆಲವು ದೇಶಗಳಲ್ಲಿ ಕೊವಿಡ್ ಸೋಂಕು ಹರಡುವುದು ನಿಯಂತ್ರಣಕ್ಕೆ ಬಂದಿದೆ. ಇನ್ನು ಕೆಲವು ದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪ್ರಸ್ತುತ ಅಮೆರಿಕದಲ್ಲಿ ಅತಿ ಹೆಚ್ಚು ಸೋಂಕು ಹಾಗು ಅತಿ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

Breaking: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕು Breaking: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕು

ಸದ್ಯದ ಪರಿಸ್ಥಿತಿ ನೋಡಿದರೆ ಅಮೆರಿಕ ದೇಶವನ್ನು ಹಿಂದಿಕ್ಕಿವತ್ತಾ ಆ ಒಂದು ದೇಶ ಮುನ್ನುಗ್ಗುತ್ತಿದೆ. ಯುಎಸ್‌ನಲ್ಲಿ ಉಂಟಾಗಿರುವಂತೆ ಭೀಕರತೆ ಈ ದೇಶದಲ್ಲಿ ಸೃಷ್ಟಿಯಾಗಲಿದ್ಯಾ ಎಂಬ ಅನುಮಾನ ಕಾಡ್ತಿದೆ. ಮುಂದೆ ಓದಿ.....

ಅಮೆರಿಕ ಹಿಂದಿಕ್ಕಿದ ಬ್ರೆಜಿಲ್

ಅಮೆರಿಕ ಹಿಂದಿಕ್ಕಿದ ಬ್ರೆಜಿಲ್

ಹೊಸ ಕೊರೊನಾ ವೈರಸ್ ಕೇಸ್‌ಗಳ ಸಂಖ್ಯೆಯಲ್ಲಿ ಅಮೆರಿಕ ದೇಶವನ್ನು ಬ್ರೆಜಿಲ್ ಹಿಂದಿಕ್ಕಿದೆ. ಅಮೆರಿಕದಲ್ಲಿ ದಿನವೊಂದಕ್ಕೆ 20 ರಿಂದ 25 ಸಾವಿರ ಹೊಸ ಕೊವಿಡ್ ಪ್ರಕರಣ ವರದಿಯಾಗುತ್ತಿದೆ. ನಿನ್ನೆ ಯುಎಸ್‌ನಲ್ಲಿ 22,268 ಜನರಿಗೆ ಸೋಂಕು ದೃಢವಾಗಿತ್ತು. ಆದರೆ, ಬ್ರೆಜಿಲ್‌ನಲ್ಲಿ ನಿನ್ನೆ ಒಂದೇ ದಿನ 31 ಸಾವಿರ (31,890) ಕೇಸ್ ದಾಖಲಾಗಿದೆ. ಇದು ಸಹಜವಾಗಿ ಆತಂಕ ಸೃಷ್ಟಿಸಿದೆ.

ಬ್ರೆಜಿಲ್‌ನಲ್ಲಿ 6 ಲಕ್ಷ ಸೋಂಕಿತರು

ಬ್ರೆಜಿಲ್‌ನಲ್ಲಿ 6 ಲಕ್ಷ ಸೋಂಕಿತರು

ಅತಿ ಹೆಚ್ಚು ಕೊರೊನಾ ವೈರಸ್ ಕೇಸ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. 19 ಲಕ್ಷ (1,924,051) ಪ್ರಕರಣ ಹೊಂದಿರುವ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 615,870 ಲಕ್ಷ ಕೇಸ್ ದಾಖಲಾಗಿರುವ ಬ್ರೆಜಿಲ್ ನಂತರದ ಸ್ಥಾನದಲ್ಲಿದೆ. ಅಮೆರಿಕದ ಅರ್ಧದಷ್ಟು ಸೋಂಕು ಬ್ರೆಜಿಲ್‌ನಲ್ಲಿ ಪತ್ತೆಯಾಗಿಲ್ಲ. ಆದರೆ, ಹೊಸ ಕೇಸ್‌ಗಳ ಸಂಖ್ಯೆ ಈಗ ಭೀಕರತೆಯ ಎಚ್ಚರಿಕೆ ನೀಡಿದೆ.

ಸಾವಿನಲ್ಲೂ ಅಮೆರಿಕಗಿಂತ ಮುಂದೆ

ಸಾವಿನಲ್ಲೂ ಅಮೆರಿಕಗಿಂತ ಮುಂದೆ

ಬ್ರೆಜಿಲ್‌ನಲ್ಲಿ ಇದುವರೆಗೂ 34 ಸಾವಿರ (34,039) ಜನರು ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನ 1492 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕದಲ್ಲಿ ನಿನ್ನೆ 1,031 ಮಂದಿ ಸಾವನ್ನಪ್ಪಿದ್ದಾರೆ. ದಿನವೊಂದಕ್ಕೆ ಹೆಚ್ಚು ಜನರು ಮೃತಪಡುತ್ತಿರುವ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. ಅಮೆರಿಕವನ್ನು ಹಿಂದಿಕ್ಕಿರುವ ಬ್ರೆಜಿಲ್ ಸಾವಿನ ಸಂಖ್ಯೆಯಲ್ಲೂ ಅಪಾಯದ ಸನಿಹ ಸಾಗುತ್ತಿದೆ.

ಇಟಲಿ ಹಿಂದಿಕ್ಕಲಿದೆ ಭಾರತ

ಇಟಲಿ ಹಿಂದಿಕ್ಕಲಿದೆ ಭಾರತ

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ. ಬಹುಶಃ ಇನ್ನೊಂದು ದಿನದಲ್ಲಿ ಇಟಲಿ ದೇಶವನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಜಿಗಿಯುವ ಎಲ್ಲ ಸಾಧ್ಯತೆ ಇದೆ. ಸದ್ಯ ಭಾರತದ ಒಟ್ಟು ಕೇಸ್ 2,26,770. ಇಟಲಿಯ ಒಟ್ಟು ಕೇಸ್ 234,013. ಶುಕ್ರವಾರದ ವರದಿ ಬಳಿಕ ಇಟಲಿ ಹಿಂದಿಕ್ಕಿ ಭಾರತ ಮುಂದೆ ಸಾಗಲಿದೆ.

English summary
COVID19 Update: Brazil Overtakes america in coronavirus new casess. brazil reports 31,890 new case and US reports 22,268 new case yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X