• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೀಫಾ ಶ್ರೇಯಾಂಕ: ಸ್ಪೇನ್ 1, ಭಾರತ 154

By Mahesh
|

ಬೆಂಗಳೂರು, ಜೂ.6: ಫೀಫಾ ವಿಶ್ವಕಪ್ ಫುಟ್ಬಾಲ್‌ ಆರಂಭಕ್ಕೂ ಮುನ್ನ ವಿಶ್ವದ ಪುಟ್ಬಾಲ್ ದೇಶಗಳ ಸ್ಥಾನಮಾನದ ವಿವರವನ್ನು ಫೀಫಾ ಗುರುವಾರ ಪ್ರಕಟಿಸಿದ್ದು, ಕಳೆದ ಬಾರಿಯ ವಿಶ್ವಕಪ್ ಚಾಂಪಿಯನ್ ಸ್ಪೇನ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಬಾರಿಯ ಅತಿಥೇಯ ರಾಷ್ಟ್ರ ಬ್ರೆಜಿಲ್ ಮೂರನೇ ಸ್ಥಾನದಲ್ಲಿದ್ದರೆ, ಜರ್ಮನಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಭಾರತ ತಂಡ ಸದ್ಯಕ್ಕೆ 154ನೇ ಸ್ಥಾನಕ್ಕೆ ಕುಸಿದಿದೆ.

ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡ 7 ಅಂಕಗಳನ್ನು ಕಳೆದುಕೊಂಡು 154ಕ್ಕೆ ಕುಸಿದಿದ್ದು, ಖಂಡಗಳ ಪಟ್ಟಿಯಲ್ಲಿ ಏಷ್ಯಾದಲ್ಲಿ 28ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಮಾರ್ಚ್ ತಿಂಗಳಿನಿಂದ ಯಾವುದೇ ಪಂದ್ಯಾವಳಿಗಳಲ್ಲಿ ಭಾರತ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಎಎಫ್ ಸಿ ಚಾಲೆಂಜ್ ಕಪ್ ನಲ್ಲಿ ಭಾರತ 3ನೇ ಸ್ಥಾನ ಪಡೆದ ನಂತರ ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ ಮೇಲಕ್ಕೇರುವ ನಿರೀಕ್ಷೆ ಹೆಚ್ಚಿತ್ತು.[ವಿಶ್ವಕಪ್ 2014 ಟೂರ್ ಗೈಡ್]

ಬೆಂಗಳೂರಿನ ಸುನಿಲ್ ಚೆಟ್ರಿ ನೇತೃತ್ವದ ಬ್ಲೂ ಟೈಗರ್ಸ್ ತಂಡ ಬಾಂಗ್ಲಾದೇಶ(162) ವಿರುದ್ಧ 2-2 ಡ್ರಾ ಸಾಧಿಸಿದ್ದು ಬಿಟ್ಟರೆ ಅಕ್ಟೋಬರ್ ತನಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಲಕ್ಷಣಗಳಿಲ್ಲ, ಅಫ್ಘಾನಿಸ್ತಾನ 130 ಹಾಗೂ ಬ್ರೆಜಿಲ್ ವಿಶ್ವಕಪ್ ಗೆ ಚೆಂಡು ತಯಾರಿಸಿರುವ ಪಾಕಿಸ್ತಾನ 164 ಸ್ಥಾನದಲ್ಲಿವೆ.

ಏಷ್ಯಾದಲ್ಲಿ ಇರಾನ್ 43 ಹಾಗೂ ಜಪಾನ್ 46ನೇ ಸ್ಥಾನ ಪಡೆದುಕೊಂಡಿವೆ. ಬ್ರೆಜಿಲ್ ಫೀಫಾ ವಿಶ್ವಕಪ್ 2014ರಲ್ಲಿ ಸ್ಪರ್ಧಿಸಿರುವ 32 ತಂಡಗಳು, ಫೀಫಾ ಶ್ರೇಯಾಂಕ ಹಾಗೂ ಗ್ರೂಪ್ ಗಳ ವಿವರ ಇಲ್ಲಿದೆ...

ವಿಶ್ವಕಪ್ 2014, ಬ್ರೆಜಿಲ್
ಗ್ರೂಪ್ ಎ ಗ್ರೂಪ್ ಬಿ ಗ್ರೂಪ್ ಸಿ ಗ್ರೂಪ್ ಡಿ ಬ್ರೆಜಿಲ್ (3)

ಸ್ಪೇನ್ (1) ಕೊಲಂಬಿಯಾ (8) ಉರುಗ್ವೆ (7)

ಮೆಕ್ಸಿಕೋ (20)

ನೆದರ್ಲೆಂಡ್ (15) ಗ್ರೀಸ್ (12) ಕೋಸ್ಟರಿಕಾ (28) ಕ್ರೋವೆಷಿಯಾ (18) ಚಿಲಿ (14)

ಐವರಿ ಕೋಸ್ಟ್ (23) ಇಂಗ್ಲೆಂಡ್ (10) ಕ್ಯಾಮರೂನ್ (56)

ಆಸ್ಟ್ರೇಲಿಯಾ (62)

ಜಪಾನ್ (46)

ಇಟಲಿ (9) ಗ್ರೂಪ್ ಇ ಗ್ರೂಪ್ ಎಫ್ ಗ್ರೂಪ್ ಜಿ ಗ್ರೂಪ್ ಎಚ್ ಸ್ವಿಟ್ಜರ್ಲೆಂಡ್ (6)
ಅರ್ಜೆಂಟಿನಾ (5)

ಜರ್ಮನಿ (2)

ಬೆಲ್ಜಿಯಂ (11)

ಈಕ್ವಡಾರ್ (26)

ನೈಜೀರಿಯಾ (44)

ಘಾನಾ (37)

ಅಲ್ಜೀರಿಯಾ (22)

ಫ್ರಾನ್ಸ್(17) ಬೋಸ್ನಿಯಾ

ಹರ್ಜೆಗೋವಿನಿಯಾ (21)

ಯುಎಸ್ಎ (13)

ರಷ್ಯಾ (19) ಹೊಂಡಾರಸ್ (33)

ಇರಾನ್ (43)

ಪೋರ್ಚುಗಲ್ (4)

ಕೊರಿಯಾ(57)

English summary
Brazil jumped one spot to No.3 while Argentina leapt two places to No.5 in the latest FIFA world rankings announced Thursday.India have slid down seven places to the 154th spot in the latest edition of the FIFA Rankings, and are placed 28th in the continent, three places below from the last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X