ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಅಟ್ಟಹಾಸ: ದಕ್ಷಿಣ ಅಮೇರಿಕಾ ಹೊಸ ಕೇಂದ್ರಬಿಂದು!

|
Google Oneindia Kannada News

ಡೆಡ್ಲಿ ಕೋವಿಡ್-19 ರೋಗದ ಕೇಂದ್ರಬಿಂದು ಮೊದಲು ಚೀನಾದ ವುಹಾನ್ ಆಗಿತ್ತು. ಬಳಿಕ ನೋವೆಲ್ ಕೊರೊನಾ ವೈರಸ್ ನ ಎಪಿಸೆಂಟರ್ ಆಗಿದ್ದು ಯೂರೋಪ್. ಇದೀಗ ಮಾರಣಾಂತಿಕ ಕೊರೊನಾ ವೈರಸ್ ಗೆ ದಕ್ಷಿಣ ಅಮೇರಿಕಾ ಕೇಂದ್ರಬಿಂದುವಾಗಿದೆ.

Recommended Video

ವರ್ಕ್ ಫ್ರಂ ಹೋಂ‌ನಿಂದ ಆಗ್ತಿರೋ ಸಮಸ್ಯೆಗಳು ಅಷ್ಟಿಷ್ಟಲ್ಲ... | Oneindia Kannada

ದಕ್ಷಿಣ ಅಮೇರಿಕಾದ ಹಲವೆಡೆ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ''ಮಹಾಮಾರಿ ಕೋವಿಡ್-19 ನ ಹೊಸ ಕೇಂದ್ರಬಿಂದು ದಕ್ಷಿಣ ಅಮೇರಿಕಾ'' ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಘೋಷಿಸಿದೆ.

ಚೀನಾ, ಯುಎಸ್‌ ನಂತರ ಕೊರೊನಾ ಹಾಟ್‌ಸ್ಪಾಟ್‌ ಆದ ಬ್ರೆಜಿಲ್!ಚೀನಾ, ಯುಎಸ್‌ ನಂತರ ಕೊರೊನಾ ಹಾಟ್‌ಸ್ಪಾಟ್‌ ಆದ ಬ್ರೆಜಿಲ್!

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಬಿಟ್ಟರೆ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿರುವುದು ದಕ್ಷಿಣ ಅಮೇರಿಕಾದ ಬ್ರೆಜಿಲ್ ನಲ್ಲಿ. ಸದ್ಯ ಬ್ರೆಜಿಲ್ ನಲ್ಲಿ 3,32,383 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆ ಮೂಲಕ ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ದೇಶಗಳ ಪೈಕಿ ರಷ್ಯಾನ ಹಿಂದಕ್ಕೆ ತಳ್ಳಿ ಬ್ರೆಜಿಲ್ ಎರಡನೇ ಸ್ಥಾನಕ್ಕೇರಿದೆ.

ಹೊಸ ಕೇಂದ್ರಬಿಂದು

ಹೊಸ ಕೇಂದ್ರಬಿಂದು

''ಕೋವಿಡ್-19 ಗೆ ದಕ್ಷಿಣ ಅಮೇರಿಕಾ ಹೊಸ ಕೇಂದ್ರಬಿಂದುವಾಗಿದೆ. ದಕ್ಷಿಣ ಅಮೇರಿಕಾದ ಹಲವು ದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ Mike Ryan ಹೇಳಿದ್ದಾರೆ.

ಸಾವಿನ ಪ್ರಮಾಣ ದುಪ್ಪಟ್ಟು

ಸಾವಿನ ಪ್ರಮಾಣ ದುಪ್ಪಟ್ಟು

ಬ್ರೆಜಿಲ್ ಒಂದರಲ್ಲೇ ನಿನ್ನೆ (ಮೇ 22) ಕೋವಿಡ್-19 ನಿಂದ 1,001 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್ ನಿಂದಾಗಿ ಬ್ರೆಜಿಲ್ ನಲ್ಲಿ ಇಲ್ಲಿಯವರೆಗೆ 21,048 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಳೆದ 11 ದಿನಗಳಲ್ಲಿ ಸಾವಿನ ಪ್ರಮಾಣ ದುಪ್ಪಟ್ಟಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ಪುರಾವೆ ಇಲ್ಲದಿದ್ದರೂ ಶಿಫಾರಸ್ಸು

ಪುರಾವೆ ಇಲ್ಲದಿದ್ದರೂ ಶಿಫಾರಸ್ಸು

ಕೋವಿಡ್-19 ಗೆ ಚಿಕಿತ್ಸೆ ನೀಡಲು ಬ್ರೆಜಿಲ್ ಆರೋಗ್ಯ ಸಚಿವಾಲಯ Anti-malarial ಡ್ರಗ್ಸ್ ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಶಿಫಾರಸ್ಸು ಮಾಡಿದೆ. ಕೋವಿಡ್-19 ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಎಂಬ ಪುರಾವೆ ಇಲ್ಲದಿದ್ದರೂ, ಚಿಕಿತ್ಸೆಗೆ ಅದನ್ನೇ ಬಳಸಲಾಗುತ್ತಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆದವರಲ್ಲಿ ಸಾವಿನ ಪ್ರಮಾಣ ಅಧಿಕ

ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆದವರಲ್ಲಿ ಸಾವಿನ ಪ್ರಮಾಣ ಅಧಿಕ

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗಳನ್ನು ನೀಡದವರೊಂದಿಗೆ ಹೋಲಿಸಿದರೆ, ಅದನ್ನು ಪಡೆದ ರೋಗಿಗಳಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ ಎಂಬ ಅಂಶ 'ದಿ ಲ್ಯಾನ್ಸೆಟ್' ಎಂಬ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವೊಂದಲ್ಲಿ ಸ್ಪಷ್ಟವಾಗಿದೆ.

ಪ್ರಯೋಗ ಪೂರ್ಣಗೊಳ್ಳಬೇಕು

ಪ್ರಯೋಗ ಪೂರ್ಣಗೊಳ್ಳಬೇಕು

ಪ್ಯಾನ್ ಅಮೇರಿಕನ್ ಹೆಲ್ತ್ ಸಂಸ್ಥೆ ನಡೆಸಿದ ಕ್ಲಿನಿಕಲ್ ಪ್ರಯೋಗಗಳ ಪ್ರಕಾರ, ಕೋವಿಡ್-19 ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಆಗಿಲ್ಲ. ಆದರೂ, ಪ್ರಯೋಗ ಪೂರ್ಣಗೊಳ್ಳುವವರೆಗೆ ಸ್ಪಷ್ಟ ಫಲಿತಾಂಶ ದೊರೆಯುವುದಿಲ್ಲ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ Mike Ryan ತಿಳಿಸಿದ್ದಾರೆ.

English summary
Brazil is now No.2 in the World for Covid 19 Cases. WHO has called South America a new epicentre of deadly Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X