ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್: ಭಾರಿ ಮಳೆ, ಪ್ರವಾಹಕ್ಕೆ ಸಿಲುಕಿ 18 ಮಂದಿ ದುರ್ಮರಣ

|
Google Oneindia Kannada News

ಸಾವೊ ಪಾಲೊ, ಜನವರಿ 31: ಭಾರಿ ಮಳೆಗೆ ಸಾವೊ ಪಾಲೊ ರಾಜ್ಯದಲ್ಲಿ 18 ಮಂದಿ ಮರಣ ಹೊಂದಿದ್ದಾರೆ, ಕನಿಷ್ಠ ಒಂಬತ್ತು ಜನರು ಗಾಯಗೊಂಡಿರುವ ವರದಿ ಬಂದಿದೆ. ಸುಮಾರು 500 ಕುಟುಂಬಗಳು ಬ್ರೆಜಿಲ್‌ನ ದಕ್ಷಿಣ ಸಾವೊ ಪಾಲೊ ರಾಜ್ಯದಲ್ಲಿ ತಮ್ಮ ನಿವಾಸಗಳನ್ನು ತ್ಯಜಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಮಂಗಳವಾರದವರೆಗೂ ಧಾರಾಕಾರ ಮಳೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ.

ಸಾವೊ ಪಾಲೊ ಗವರ್ನರ್ ಜೋವೊ ಡೋರಿಯಾ ಅವರು ಹಾನಿಗೊಳಗಾದ ಪ್ರದೇಶಗಳನ್ನು ಸಮೀಕ್ಷೆ ಮಾಡಲು ಹೆಲಿಕಾಪ್ಟರ್ ಅನ್ನು ಬಳಸಿದರು ಮತ್ತು ರಾಜ್ಯದ 10 ಹೆಚ್ಚು ಪೀಡಿತ ನಗರಗಳು ಮತ್ತು 645 ಪುರಸಭೆಗಳಿಗೆ ಸಹಾಯ ಮಾಡಲು 15 ಮಿಲಿಯನ್ ರಿಯಾಸ್ ($2.7 ಮಿಲಿಯನ್, €2.5 ಮಿಲಿಯನ್) ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಸಾವೊ ಪಾಲೊ ಬ್ರೆಜಿಲ್‌ನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದ್ದು, ಕೇವಲ 212 ಮಿಲಿಯನ್‌ಗಿಂತಲೂ ಹೆಚ್ಚಿನ ಬ್ರೆಜಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 46 ಮಿಲಿಯನ್ ಜನರು ನೆಲೆಸಿದ್ದಾರೆ.

Sao Paulo municipality Franco da Rocha registered flooding caused by torrential rains

ಹಾನಿ ಪ್ರಮಾಣ ವರದಿ
ರಾಜ್ಯದ ಅಗ್ನಿಶಾಮಕ ಇಲಾಖೆಯ ಪ್ರಕಾರ ಕನಿಷ್ಠ 11 ಸಾವೊ ಪಾಲೊ ಪುರಸಭೆಗಳಲ್ಲಿ ಭೂಕುಸಿತ, ತೀವ್ರ ಪ್ರವಾಹ, ಮತ್ತು ಬೀಳುವ ಮರಗಳು ಮತ್ತು ಮೂಲಸೌಕರ್ಯಕ್ಕೆ ಹಾನಿಯನ್ನು ದಾಖಲಿಸಿವೆ. ರಾಜ್ಯದ ಒಳಭಾಗದಲ್ಲಿರುವ ನಗರಗಳಲ್ಲಿ ಭೂಕುಸಿತದಿಂದ ಹಲವಾರು ಮನೆಗಳು ನೆಲಕಚ್ಚಿದ್ದರಿಂದ 11ಕ್ಕೂ ಅಧಿಕ ಮಂದಿ ಭಾನುವಾರದಂದು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪತ್ರಿಕಾ ತಿಳಿಸಿದೆ.

ಫ್ರಾಂಕೋ ಡ ರೋಚಾ ಪುರಸಭೆಯಲ್ಲಿ ಪೊಲೀಸ್ ಠಾಣೆ ಮತ್ತು ವಾಯಡಕ್ಟ್ ಭೂಕುಸಿತದಿಂದ ನೆಲಸಮವಾಗಿವೆ. ಚಂಡಮಾರುತದ ಮಧ್ಯೆ, ಸಾವೊ ಪಾಲೊ ನಗರವು ಭದ್ರತಾ ಮುನ್ನೆಚ್ಚರಿಕೆಯಾಗಿ ಕೋವಿಡ್ 19 ವಿರುದ್ಧ ವ್ಯಾಕ್ಸಿನೇಷನ್ ಆಭಿಯಾನವನ್ನು ಸ್ಥಗಿತಗೊಳಿಸಿದೆ.

A landslide destroyed houses in Franco da Rocha

ಮಂಗಳವಾರದವರೆಗೂ ಭಾರೀ ಮಳೆ ಮುಂದುವರಿಯಲಿದೆ
ಮಂಗಳವಾರದವರೆಗೆ ರಾಜ್ಯದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜನರು ಜಾಗರೂಕರಾಗಿರಲು ಸೂಚಿಸಿದ್ದಾರೆ.

Recommended Video

Bumrahಗೆ ನಾಯಕತ್ವ ನಿಭಾಯಿಸೋ ಶಕ್ತಿ ಇಲ್ಲ ಅನ್ನೋದಕ್ಕೆ ಇಲ್ಲಿದೆ ಕಾರಣ | Oneindia Kannada

ಕಳೆದ ಅಕ್ಟೋಬರ್‌ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾದಾಗಿನಿಂದ ಬ್ರೆಜಿಲ್ ಹಲವಾರು ಹವಾಮಾನ ಸಂಬಂಧಿತ ಪ್ರಾಕೃತಿಕ ವಿಪತ್ತುಗಳಿಂದ ತತ್ತರಿಸಿದೆ.

ಉತ್ತರ ಬಹಿಯಾ ರಾಜ್ಯದಲ್ಲಿ, 24 ಜನರು ಸಾವನ್ನಪ್ಪಿದ್ದರು ಮತ್ತು ದಕ್ಷಿಣದ ಮಿನಾಸ್ ಗೆರೈಸ್ ರಾಜ್ಯದಲ್ಲಿ 19 ಜನರು ಸಾವನ್ನಪ್ಪಿದ್ದರು. ಬಹಿಯಾದಲ್ಲಿ, ಪ್ರವಾಹದ ಪರಿಣಾಮವಾಗಿ ಎರಡು ಅಣೆಕಟ್ಟುಗಳು ಒಡೆದುಹೋಗಿತ್ತು ಮತ್ತು ಮಿನಾಸ್ ಗೆರೈಸ್‌ನಲ್ಲಿ ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದರು. (AP, AFP, Lusa)

English summary
At least nine people were wounded and around 500 families had to abandon their residences in Brazil's southern Sao Paulo state. The torrential rainfall is expected to continue until Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X