ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್ ಜೊತೆಗಿನ ಕೊವ್ಯಾಕ್ಸಿನ್ ಒಪ್ಪಂದ ರದ್ದು: ಭಾರತ್ ಬಯೋಟೆಕ್ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಜೂನ್ 30: ಕೊವ್ಯಾಕ್ಸಿನ್ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ಬ್ರೆಜಿಲ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಯಾವುದೇ ರೀತಿ ಅಕ್ರಮಗಳು ನಡೆದಿಲ್ಲ ಎಂದು ಭಾರತ್ ಬಯೋಟೆಕ್ ಸಂಸ್ಥೆಯು ಬುಧವಾರ ಸ್ಪಷ್ಟಪಡಿಸಿದೆ.

ಜಗತ್ತಿನ ದುಬಾರಿ ಲಸಿಕೆ ಕೊವ್ಯಾಕ್ಸಿನ್ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಭಾರತೀಯ ಕಂಪನಿ ಜೊತೆಗಿನ 324 ದಶಲಕ್ಷ ಡಾಲರ್ ಮೊತ್ತದ ಒಪ್ಪಂದವನ್ನು ಬ್ರೆಜಿಲ್ ರದ್ದುಗೊಳಿಸಿದ ಬೆನ್ನಲ್ಲೇ ಕಂಪನಿ ಪ್ರತಿಕ್ರಿಯೆ ನೀಡಿದೆ.

ವಿವಾದದ ಕಿಡಿ ಹತ್ತಿದ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆ ಒಪ್ಪಂದ ರದ್ದುಗೊಳಿಸಿದ ಬ್ರೆಜಿಲ್ವಿವಾದದ ಕಿಡಿ ಹತ್ತಿದ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆ ಒಪ್ಪಂದ ರದ್ದುಗೊಳಿಸಿದ ಬ್ರೆಜಿಲ್

"ಬ್ರೆಜಿಲ್ ಜೊತೆಗಿನ ಒಪ್ಪಂದದ ವೇಳೆಯಲ್ಲಿ ಪ್ರತಿ ಹಂತದಲ್ಲಿ ನಿಯಂತ್ರಕ ಮತ್ತು ಅನುಮೋದನೆಗಳ ವಿಧಾನವನ್ನು ಕ್ರಮಬದ್ಧವಾಗಿ ಅನುಸರಿಸಲಾಗಿದೆ," ಎಂದು ಭಾರತ್ ಬಯೋಟೆಕ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಜಗತ್ತಿನಲ್ಲೇ ಮೂರನೇ ದುಬಾರಿ ಲಸಿಕೆ ಎನಿಸಿರುವ ಕೊವ್ಯಾಕ್ಸಿನ್ ಬೆಲೆ ಭಾರತದಲ್ಲೇನೂ ಕಡಿಮೆಯಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 780 ರೂಪಾಯಿ, ರಷ್ಯಾದ ಒಂದು ಡೋಸ್ ಸ್ಪುಟ್ನಿಕ್-ವಿ ಲಸಿಕೆಗೆ 1,145 ರೂ. ಬೆಲೆ ನಿಗದಿಗೊಳಿಸಲಾಗಿದೆ. ಆದರೆ ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ ಸೇವಾ ಶುಲ್ಕ ಹಾಗೂ ಜಿಎಸ್ ಟಿ ಸೇರಿ 1,410 ರೂಪಾಯಿ ಆಗುತ್ತದೆ.

ಭಾರತ್ ಬಯೋಟೆಕ್ ಸಂಸ್ಥೆಯು ಹೇಳುವುದೇನು?

ಭಾರತ್ ಬಯೋಟೆಕ್ ಸಂಸ್ಥೆಯು ಹೇಳುವುದೇನು?

"ಬ್ರೆಜಿಲ್ ಆರೋಗ್ಯ ಸಚಿವಾಲಯವು ಕೊವ್ಯಾಕ್ಸಿನ್ ಖರೀದಿ ಒಪ್ಪಂದದ ಸಂದರ್ಭದಲ್ಲಿ ನಿರ್ದಿಷ್ಟ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ. 2020ರ ನವೆಂಬರ್ ತಿಂಗಳಿನಲ್ಲಿ ನಡೆದ ಮೊದಲ ಸಭೆಯಿಂದ ಇಂದಿನವರೆಗೂ ಅಂದರೆ ಕಳೆದ ಎಂಟು ತಿಂಗಳ ಸುದೀರ್ಘ ಅವಧಿಯಲ್ಲಿ ಒಪ್ಪಂದಕ್ಕೆ ಸಂಬಂಧಿಸಿದ ನಿಯಂತ್ರಣ, ಅನುಮೋದನೆ ಕ್ರಮಗಳನ್ನು ನಿಯಮಬದ್ಧವಾಗಿ ಹಂತ-ಹಂತವಾಗಿ ಪಾಲಿಸಿಕೊಂಡು ಬರಲಾಗಿದೆ," ಎಂದು ಭಾರತ್ ಬಯೋಟೆಕ್ ಹೇಳಿದೆ.

"ಬ್ರೆಜಿಲ್ ಮುಂಗಡ ಹಣ ನೀಡಿಲ್ಲ, ನಾವು ಲಸಿಕೆ ಪೂರೈಸಿಲ್ಲ"

"ಕಳೆದ ಜೂನ್ 4ರಂದು ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿತು. ಜೂನ್ 29ರಂದು ಭಾರತ್ ಬಯೋಟೆಕ್ ಸಂಸ್ಥೆಗೆ ಯಾವುದೇ ರೀತಿ ಮುಂಗಡ ಹಣವನ್ನು ಪಾವತಿಸಿಲ್ಲ. ಆದ್ದರಿಂದ ಕಂಪನಿಯು ಬ್ರೆಜಿರ್ ಆರೋಗ್ಯ ಸಚಿವಾಲಯಕ್ಕೆ ಯಾವುದೇ ಲಸಿಕೆಯನ್ನು ಸರಬರಾಜು ಮಾಡಿಲ್ಲ. ಬ್ರೆಜಿಲ್ ಮಾದರಿಯಲ್ಲೇ ಬೇರೆ ರಾಷ್ಟ್ರಗಳ ಜೊತೆಗೂ ಕೊವ್ಯಾಕ್ಸಿನ್ ಲಸಿಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು, ಇದೀಗ ಆ ಎಲ್ಲ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ," ಎಂದು ಭಾರತ್ ಬಯೋಟೆಕ್ ಹೇಳಿದೆ.

ದೇಶದ ಮಾಧ್ಯಮಗಳಲ್ಲಿ ಕೊವ್ಯಾಕ್ಸಿನ್ 'ತಲೆಬರಹ'ದ ಜೊತೆ ಬ್ರೆಜಿಲ್ ಅಧ್ಯಕ್ಷರ 'ಹಣೆಬರಹ'!ದೇಶದ ಮಾಧ್ಯಮಗಳಲ್ಲಿ ಕೊವ್ಯಾಕ್ಸಿನ್ 'ತಲೆಬರಹ'ದ ಜೊತೆ ಬ್ರೆಜಿಲ್ ಅಧ್ಯಕ್ಷರ 'ಹಣೆಬರಹ'!

ಜೈರ್ ಬೋಲ್ಸನಾರೋ ವಿರುದ್ಧ ಭ್ರಷ್ಟಾಚಾರ ಆರೋಪ

ಜೈರ್ ಬೋಲ್ಸನಾರೋ ವಿರುದ್ಧ ಭ್ರಷ್ಟಾಚಾರ ಆರೋಪ

ಬ್ರೆಜಿಲ್ ಪ್ರಜೆಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಬೇಕು ಎಂಬ ದೃಷ್ಟಿಯಲ್ಲಿ ಭಾರತ್ ಬಯೋಟೆಕ್ ಜೊತೆಗೆ ಜೈರ್ ಬೋಲ್ಸನಾರೋ ಮಾಡಿಕೊಂಡಿರುವ ಒಪ್ಪಂದ ಹಗರಣದ ರೂಪ ತೆಳೆದಿದೆ. ಕೇವಲ ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ 15 ಡಾಲರ್ ನೀಡುವ ಅಗತ್ಯವಿತ್ತೇ ಎಂಬ ಪ್ರಶ್ನೆ ದೇಶವ್ಯಾಪಿ ಕೇಳಿ ಬರುತ್ತಿದೆ. 234 ದಶಲಕ್ಷ ಡಾಲರ್ ಮೌಲ್ಯದ ಒಪ್ಪಂದ ಮಾಡಿಕೊಂಡ ಬ್ರೆಜಿಲ್ ಅಧ್ಯಕ್ಷರ ಒಂದೇ ಒಂದು ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಇಡೀ ಪ್ರಕರಣವನ್ನು ಬ್ರೆಜಿಲ್ ಸಂಸದೀಯ ಆಯೋಗ ವಿಚಾರಣೆ ನಡೆಸುತ್ತಿದೆ.

ಭಾರತ್ ಬಯೋಟೆಕ್ ಬಗ್ಗೆ ಮಾಧ್ಯಮಗಳಲ್ಲಿ ಅಪಪ್ರಚಾರ

ಭಾರತ್ ಬಯೋಟೆಕ್ ಬಗ್ಗೆ ಮಾಧ್ಯಮಗಳಲ್ಲಿ ಅಪಪ್ರಚಾರ

ಬ್ರೆಜಿಲ್ ಜೊತೆಗೆ ಭಾರತ್ ಬಯೋಟೆಕ್ ಸಂಸ್ಥೆ ನಡುವಿನ ಒಪ್ಪಂದದ ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗುತ್ತಿವೆ. ಈ ವರದಿಗಳಲ್ಲಿ ಖರೀದಿ ಪ್ರಕ್ರಿಯೆ ಕುರಿತು ಗೊಂದಲ ಸೃಷ್ಟಿಸುವಂತಿದ್ದು, ತಪ್ಪಾಗಿ ನಿರೂಪಿಸಲು ಹೊರಟಿವೆ ಎಂದು ಸಂಸ್ಥೆ ದೂಷಿಸಿದೆ. ಜಾಗತಿಕ ಮಟ್ಟದಲ್ಲಿ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಅನುಸರಿಸುವ ಸಾಮಾನ್ಯ ಕ್ರಮಗಳನ್ನೇ ವಿವಿಧ ರಾಷ್ಟ್ರಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುವಾಗ ಪಾಲಿಸಲಾಗುತ್ತಿದೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.

ಭಾರತದಿಂದ ದುಬಾರಿ ದುಡ್ಡಿನ ಕೊವ್ಯಾಕ್ಸಿನ್ ಲಸಿಕೆ ಖರೀದಿಸಿದ್ದೇಕೆ ಬ್ರೆಜಿಲ್ ಅಧ್ಯಕ್ಷ?ಭಾರತದಿಂದ ದುಬಾರಿ ದುಡ್ಡಿನ ಕೊವ್ಯಾಕ್ಸಿನ್ ಲಸಿಕೆ ಖರೀದಿಸಿದ್ದೇಕೆ ಬ್ರೆಜಿಲ್ ಅಧ್ಯಕ್ಷ?

ವಿಶ್ವದ ಹಲವು ರಾಷ್ಟ್ರಗಳಿಗೆ 4 ಬಿಲಿಯನ್ ಡೋಸ್ ಲಸಿಕೆ

ವಿಶ್ವದ ಹಲವು ರಾಷ್ಟ್ರಗಳಿಗೆ 4 ಬಿಲಿಯನ್ ಡೋಸ್ ಲಸಿಕೆ

"ಭಾರತ್ ಬಯೋಟೆಕ್ ಕಂಪನಿಯು ಉತ್ಪಾದಿಸುವ 20ಕ್ಕೂ ಹೆಚ್ಚು ಸರಕುಗಳನ್ನು ಜಗತ್ತಿನ 123ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಈವರೆಗೂ ಹಲವು ರಾಷ್ಟ್ರಗಳಿಗೆ ಒಟ್ಟು 400 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ರಫ್ತು ಮಾಡಿದೆ. ಈ ಹಂತದಲ್ಲಿ ಯಾವುದೇ ರೀತಿ ತಪ್ಪುಗಳು ಆಗಿರುವ ಬಗ್ಗೆ ಒಂದೇ ಒಂದು ಸೂಚನೆಯೂ ಕಂಡು ಬಂದಿದ್ದರೆ ತಿಳಿಸಿರಿ," ಎಂದು ಭಾರತ್ ಬಯೋಟೆಕ್ ಕಂಪನಿಯ ಸಂಸ್ಥಾಪಕ ಕೃಷ್ಣಮೂರ್ತಿ ಎಲ್ಲಾ ಹೇಳಿದ್ದಾರೆ.

ಮುಂಗಡ ಹಣ ಪಾವತಿ ಆರೋಪದಿಂದ ಹೊತ್ತಿಕೊಂಡ ವಿವಾದ

ಮುಂಗಡ ಹಣ ಪಾವತಿ ಆರೋಪದಿಂದ ಹೊತ್ತಿಕೊಂಡ ವಿವಾದ

ಬ್ರೆಜಿಲ್ ಫೆಡರಲ್ ಡೆಪ್ಯೂಟಿ ಲೂಯಿಸ್ ಮಿರಿಂಡಾ ಹಾಗೂ ಆತನ ಸಹೋದರ ಹಾಗೂ ಆರೋಗ್ಯ ಇಲಾಖೆಯ ಆಮದು ವಿಭಾಗದ ಮುಖ್ಯಸ್ಥ ರಿಕಾರ್ಡೋ ಆರೋಪದ ಬೆನ್ನಲ್ಲೇ ವಿಷಯ ಚರ್ಚೆಗೆ ಬಂದಿತ್ತು. ಈ ವೇಳೆ "ಕಳೆದ ಮಾರ್ಚ್ 20ರಂದು ನಾವು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಅನ್ನು ಭೇಟಿ ಮಾಡಿದ್ದೆವು. ಅಂದು ಲಸಿಕೆ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗಾಪೂರ್ ಮೂಲದ ಮಾಡಿಸನ್ ಬಯೋಟೆಕ್ ಕಂಪನಿಗೆ 35 ದಶಲಕ್ಷ ಡಾಲರ್ ಹಣವನ್ನು ಮುಂಗಡವಾಗಿ ನೀಡುವಂತೆ ಪ್ರಸ್ತಾಪಿಸಿದೆವು," ಎಂದಿದ್ದರು.

ಅಲ್ಲದೇ, "ಭಾರತ್ ಬಯೋಟೆಕ್ ಕಂಪನಿ ಜೊತೆ 2 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ, ಸಿಂಗಾಪೂರ್ ಮೂಲದ ಮಾಡಿಸನ್ ಬಯೋಟೆಕ್ ಈ ಒಪ್ಪಂದದ ಭಾಗವಾಗಿಲ್ಲ. ಭಾರತೀಯ ಕಂಪನಿ ಜೊತೆಗಿನ ಲಸಿಕೆ ಖರೀದಿ ಒಪ್ಪಂದದ ಒಟ್ಟು ಮೌಲ್ಯ 300 ದಶಲಕ್ಷ ಡಾಲರ್ ಆಗಲಿದ್ದು, ಅದರಲ್ಲಿ 35 ದಶಲಕ್ಷ ಕೋಟಿ ಡಾಲರ್ ಹಣವನ್ನು ಮುಂಗಡವಾಗಿ ಅಂಗಸಂಸ್ಥೆ ಆಗಿರುವ ಮಾಡಿಸನ್ ಬಯೋಟೆಕ್ ಕಂಪನಿಗೆ ನೀಡುವಂತೆ ತಿಳಿಸಿದ್ದೆವು," ಎಂದು ಸಂದರ್ಶನದಲ್ಲಿ ದೂಷಿಸಿದ್ದರು.

ಮಾಡಿಸನ್ ಬಯೋಟೆಕ್, ಭಾರತ್ ಬಯೋಟೆಕ್ ನಡುವೆ ನಂಟು?

ಮಾಡಿಸನ್ ಬಯೋಟೆಕ್, ಭಾರತ್ ಬಯೋಟೆಕ್ ನಡುವೆ ನಂಟು?

ಕಡಲಾಚೆ ಕಂಪನಿ ಜೊತೆಗಿನ ಒಪ್ಪಂದ ಹಾಗೂ ಮಾಡಿಸನ್ ಬಯೋಟೆಕ್ ಕುರಿತು ವಿವಾದಕ್ಕೆ ಸಂಬಂಧಿಸಿದಂತೆ ಬ್ರೆಜಿಲಿಯನ್ ವೆಬ್ ಸೈಟ್ UOL ವರದಿಯೊಂದನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಭಾರತ್ ಬಯೋಟೆಕ್ ಹಾಗೂ ಮಾಡಿಸನ್ ಬಯೋಟೆಕ್ ನಡುವಿನ ನಂಟಿನ ಬಗ್ಗೆ ಉಲ್ಲೇಖಿಸಲಾಗಿದೆ. ಆರೋಪಕ್ಕೆ ಗುರಿಯಾಗಿರುವ ಮಾಡಿಸನ್ ಬಯೋಟೆಕ್ ಸಂಸ್ಥೆಯು ಅಧಿಕೃತವಾಗಿ ನೋಂದಣಿಯಾಗಿದೆ. ಮಾಡಿಸನ್ ಬಯೋಟೆಕ್ ಸಂಸ್ಥೆಯಲ್ಲಿ ಮೂವರು ನಿರ್ದೇಶಕರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತ್ ಬಯೋಟೆಕ್ ಸಂಸ್ಥಾಪಕ ಮತ್ತು ನಿರ್ದೇಶಕ ಕೃಷ್ಣಮೂರ್ತಿ ಎಲ್ಲಾ ಅದರಲ್ಲಿ ಒಬ್ಬರಾಗಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ ಹಾಗೂ ಸಂಶೋಧನೆಯಲ್ಲಿ ಭಾಗವಹಿಸಿದ್ದ ಯುಎಸ್ ಪ್ರಜೆ ರಾಚೆಲ್ ಎಲ್ಲಾ ಹಾಗೂ ಸಿಂಗಾಪೂರ್ ಪ್ರಜೆ ಆಗಿರುವ ಕೃಷ್ಣಮೂರ್ತಿ ಸೇಕರ್ ಕೂಡ ಮಾಡಿಸನ್ ಬಯೋಟೆಕ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ ಎಂದು ವರದಿಯಾಗಿದೆ.

ಮಾಡಿಸನ್ ಬಯೋಟೆಕ್ ಸಂಸ್ಥೆ ಆರಂಭದ ಇತಿಹಾಸ

ಮಾಡಿಸನ್ ಬಯೋಟೆಕ್ ಸಂಸ್ಥೆ ಆರಂಭದ ಇತಿಹಾಸ

ಕಂಪನಿಯು ಕಡಲಾಚೆಯ ಘಟಕವನ್ನು ಹೊಂದುವುದು ಕಾನೂನುಬಾಹಿರವೇನೂ ಇಲ್ಲ. ಆದರೆ ಮಾಡಿಸನ್ ಬಯೋಟೆಕ್ ರಚನೆ ಮತ್ತು ಕಾರ್ಯವೈಖರಿ ಕುರಿತಾದ ವಿವರಗಳ ಕುರಿತಾದ ಗೊಂದಲಗಳು ಬ್ರೆಜಿಲ್ ತನಿಖೆಯಲ್ಲಿ ಅನುಮಾನ ಹುಟ್ಟಿಕೊಳ್ಳುವಂತೆ ಮಾಡಿದೆ. ಸಿಂಗಾಪೂರ್ ಲೆಕ್ಕಪತ್ರ ನಿರ್ವಹಣೆ ಮತ್ತು ಕಾರ್ಪೊರೇಟ್ ನಿಯಂತ್ರಣ ಪ್ರಾಧಿಕಾರದ ಪ್ರಕಾರ, 2020ರ ಫೆಬ್ರವರಿ 14ರಂದು ಆರಂಭಿಕ ಹಂತದಲ್ಲಿ 1,000 ಸಿಂಗಾಪೂರ್ ಡಾಲರ್ ಹೂಡಿಕೆಯೊಂದಿಗೆ ಕಂಪನಿ ಆರಂಭಿಸಲಾಗಿತ್ತು. ಅಂದು ಭಾರತ್ ಬಯೋಟೆಕ್ ಸಂಸ್ಥೆಗೆ ಸೇರಿದ ಭಾರತೀಯ ಪಶುವೈದ್ಯಕೀಯ ಪ್ರಯೋಗಾಲಯ ಕಂಪನಿ ಜೊತೆಗೆ ಪಾಲುದಾರಿಕೆಯನ್ನು ಹೊಂದಲಾಗಿತ್ತು.

ಸಿಂಗಾಪೂರ್ 31ನೇ ಕಂಟೇನ್ಮೆಂಟ್ ರಸ್ತೆಯಲ್ಲಿ ಸ್ಪಾ ಏರಾ ಫಾರ್ಮಾ ಎಂಬ ಹೆಸರಿನ ಮತ್ತೊಂದು ಕಂಪನಿಯನ್ನು ನೋಂದಣಿ ಮಾಡಿಸಲಾಗಿತ್ತು. 2020ರ ನವೆಂಬರ್ 12ರಂದು ಮಾಡಿಸನ್ ಬಯೋಟೆಕ್ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡ ಕೃಷ್ಣಮೂರ್ತಿ ಸೇಕರ್, ಈ ಕಂಪನಿಯ ನಿರ್ದೇಶಕರಾದರು.

English summary
Brazil Covaxin Deal Cancelled: Bharat Biotech Company Clarify About Agreement Procedure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X