ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವು

|
Google Oneindia Kannada News

ರಿಯೋ ಡಿ ಜನೈರೋ, ಅಕ್ಟೋಬರ್ 22: ಕೊರೊನಾ ವೈರಸ್ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂ ಸೇವಕರೊಬ್ಬರು ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ಕೋವಿಡ್ 19ರ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂ ಕಾರ್ಯಕರ್ತನೊಬ್ಬ ಸಾವಿಗೀಡಾಗಿದ್ದಾನೆ ಎಂದು ಬ್ರೆಜಿಲ್‌ನ ಆರೋಗ್ಯ ಪ್ರಾಧಿಕಾರ ಅನ್ವಿಸಾ ಬುಧವಾರ ತಿಳಿಸಿದೆ.

ಈ ಬಗ್ಗೆ ತನಿಖೆ ಆರಂಭಿಸಿದ್ದು, ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಆದರೆ ದೇಶದಲ್ಲಿ ಸ್ವಯಂ ಸೇವಕನೊಬ್ಬ ಮೃತಪಟ್ಟಿದ್ದರೂ ಆಸ್ಟ್ರಾಜೆನೆಕಾ ಲಸಿಕೆಯ ಪ್ರಯೋಗವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಔಷಧ ನಿಯಂತ್ರಕ ಪ್ರಾಧಿಕಾರ ತಿಳಿಸಿದೆ. ಪ್ರಯೋಗಕ್ಕೆ ಒಳಪಟ್ಟವರ ಗೋಪ್ಯತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ ಎಂದು ಅದು ಹೇಳಿದೆ.

ಯುಕೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ನಡೆಸುತ್ತಿರುವ ಪ್ರಯೋಗವೇನು?ಯುಕೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ನಡೆಸುತ್ತಿರುವ ಪ್ರಯೋಗವೇನು?

ಆಸ್ಟ್ರಾಜೆನೆಕಾದ ಮೂರನೇ ಹಂತದ ಪ್ರಯೋಗಕ್ಕೆ ಸಹಾಯ ನೀಡುತ್ತಿರುವ ಸಾವೋ ಪೌಲೊದ ಫೆಡರಲ್ ಯುನಿವರ್ಸಿಟಿ, ಮೃತಪಟ್ಟ ಸ್ವಯಂ ಸೇವಕ ಬ್ರೆಜಿಲ್ ವ್ಯಕ್ತಿ ಎಂದು ತಿಳಿಸಿದೆ. ಆದರೆ ಆತ ಎಲ್ಲಿ ವಾಸಿಸುತ್ತಿದ್ದ ಎಂದು ಬಹಿರಂಗಪಡಿಸಿಲ್ಲ. ಮುಂದೆ ಓದಿ.

ಬ್ರೆಜಿಲ್‌ನಲ್ಲಿ ಪ್ರಯೋಗ

ಬ್ರೆಜಿಲ್‌ನಲ್ಲಿ ಪ್ರಯೋಗ

ಈ ಘಟನೆ ಬಳಿಕ ಔಷಧ ದಿಗ್ಗಜ ಆಸ್ಟ್ರಾಜೆನೆಕಾದ ಮಾರುಕಟ್ಟೆ ಶೇರುಗಳು ಶೇ 1.7ರಷ್ಟು ಕುಸಿತ ಕಂಡಿದೆ. ಬ್ರಿಟನ್‌ನ ಲಸಿಕೆಯನ್ನು ಖರೀದಿಸಿ ಅದನ್ನು ರಿಯೊ ಡಿ ಜನೈರೋದಲ್ಲಿನ ಜೀವ ವೈದ್ಯಕೀಯ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲು ಬ್ರೆಜಿಲ್ ಸರ್ಕಾರ ಯೋಜನೆ ನಡೆಸಿದೆ. ಇನ್ನೊಂದೆಡೆ ಚೀನಾದ ಸಿನೋವಾಕ್ ಲಸಿಕೆಯನ್ನು ಸಾವೋ ಪೌಲೊ ರಾಜ್ಯದ ಸಂಶೋಧನಾ ಕೇಂದ್ರದಲ್ಲಿ ಪರೀಕ್ಷಿಸಲಾಗುತ್ತಿದೆ.

ಈ ಹಿಂದೆಯೂ ವಿವಾದ

ಈ ಹಿಂದೆಯೂ ವಿವಾದ

ಭಾರತದಲ್ಲಿಯೂ ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಯೋಗ ಮಾಡುತ್ತಿದೆ. ಬ್ರಿಟನ್‌ನಲ್ಲಿ ಈ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರ ಆರೋಗ್ಯದಲ್ಲಿ ವಿಚಿತ್ರ ಸಮಸ್ಯೆಗಳು ಉಂಟಾಗಿದ್ದರಿಂದ ಕೆಲವು ಸಮಯ ಪ್ರಯೋಗವನ್ನು ತಡೆ ಹಿಡಿಯಲಾಗಿತ್ತು. ನಾಲ್ಕೈದು ದೇಶಗಳಲ್ಲಿ ಪ್ರಯೋಗ ನಿಲ್ಲಿಸಿದ್ದರೂ, ಭಾರತದಲ್ಲಿ ಪ್ರಯೋಗ ಮುಂದುವರಿಸಿದ್ದ ಸೆರಮ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಔಷಧ ನಿಯಂತ್ರಕ ಸಂಸ್ಥೆ, ಕೆಲವು ದಿನಗಳ ಬಳಿಕ ಪ್ರಯೋಗ ಮರು ಆರಂಭಿಸಲು ಅನುಮತಿ ನೀಡಿತ್ತು.

ಆರೋಗ್ಯವಂತ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸಿ ಲಸಿಕೆ ಪ್ರಯೋಗಆರೋಗ್ಯವಂತ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸಿ ಲಸಿಕೆ ಪ್ರಯೋಗ

ಬ್ರೆಜಿಲ್: ಸಾವಿನಲ್ಲಿ ಎರಡನೆಯ ಸ್ಥಾನ

ಬ್ರೆಜಿಲ್: ಸಾವಿನಲ್ಲಿ ಎರಡನೆಯ ಸ್ಥಾನ

ಅತಿ ಹೆಚ್ಚು ಕೋವಿಡ್ ಸಾವುಗಳನ್ನು ಕಂಡ ದೇಶಗಳ ಪಟ್ಟಿಯಲ್ಲಿ ಅಮೆರಿಕದ ಬಳಿಕದ ಎರಡನೆಯ ಸ್ಥಾನದಲ್ಲಿ ಬ್ರೆಜಿಲ್ ಇದೆ. ಅಲ್ಲಿ 1.54 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 5.2 ಮಿಲಿಯನ್‌ಗೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿ ಇಳಿಕೆಯಾದ ಪ್ರಕರಣ

ಭಾರತದಲ್ಲಿ ಇಳಿಕೆಯಾದ ಪ್ರಕರಣ

ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಸಮಾಧಾನ ಮೂಡಿಸಿದೆ. ಜತೆಗೆ ಸಾವಿನ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿರುವ ಭಾರತದಲ್ಲಿ ಚೇತರಿಕೆ ಪ್ರಮಾಣ ಅತ್ಯಧಿಕವಾಗಿದೆ. ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳ ತುಲನೆಯಲ್ಲಿ ಮರಣ ಪ್ರಮಾಣವೂ ಜಾಗತಿಕವಾಗಿ ಭಾರತದಲ್ಲಿ ಕಡಿಮೆ ಇದೆ.

Recommended Video

Electric Bus ನ ವಿಶೇಷತೆ ಏನು ಅಂತೀರಾ?!! | Oneindia Kannada

English summary
A Brazil volunteer in a clinical trail of COVID-19 developed by AstraZeneca and Oxford University has died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X