ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಶ್ವವಾಯು ಪೀಡಿತ ಮಹಿಳೆಗೆ ಮಿದುಳು ಕಸಿ

ಪಾರ್ಶ್ವವಾಯು ಪೀಡಿತ ಮಹಿಳೆಗೆ ಯಶಸ್ವಿಯಾಗಿ ಮಿದುಳು ಕಸಿ ನಿರ್ವಹಿಸಿ ಎಲೆಕ್ಟ್ರಾನಿಕ್ ಪರಿಕರಗಳನ್ನು ಅಳವಡಿಸಲಾಗಿದ್ದು, ಸಂಜ್ಞೆಗಳನ್ನು ಸೂಚಿಸಲು ಈ ಪರಿಕರಗಳು ಸಹಾಯ ಮಾಡುತ್ತಿವೆ.

By Prithviraj
|
Google Oneindia Kannada News

ಲಂಡನ್, ನವೆಂಬರ್, 16: ವೈದ್ಯಲೋಕದ ಇತಿಹಾಸದಲ್ಲೇ ಪ್ರಥಮ ಬಾರಿಗೆ 58 ವರ್ಷದ ಪಾರ್ಶ್ವವಾಯು ಪೀಡಿತ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಮಿದುಳು ಕಸಿ ಮಾಡಿಲಾಗಿದ್ದು, ಮಹಿಳೆ ಈಗ ಸುಲಭವಾಗಿ ಸಂವಹನ ನಡೆಸಲು ಸಶಕ್ತರಾಗಿದ್ದಾರೆ.

ದಿನನಿತ್ಯದ ಕಾರ್ಯಗಳನ್ನು ಪುನರ್ ಮನನ ಮಾಡಿಕೊಳ್ಳಲು, ಮತ್ತು ಸೂಚಿಸಲು ಸಶಕ್ತರಾಗಿರುವ ಪ್ರಥಮ ಪಾರ್ಶ್ವವಾಯು ಪೀಡಿತ ಮಹಿಳೆಯಾಗಿ ಇವರು ಗುರುತಿಸಲ್ಪಟಿದ್ದಾರೆ.

ಪಾರ್ಶ್ವವಾಯುವಿನಿಂದಾಗಿ ಅವರ ಚಲನಶೀಲ ನ್ಯೂರಾನ್ ಗಳಿಗೆ ತೀವ್ರ ಪೆಟ್ಟು ಬಿದ್ದಿತ್ತು. ಅವರು ತಮ್ಮ ಕಣ್ಣಿನ ಮಾಂಸಖಂಡಗಳನ್ನು ಸಹ ಕದಲಿಸಲು ಸಾಧ್ಯವಾಗದಂತ ಸ್ಥಿತಿಯಲ್ಲಿದ್ದರು. [ಕಲ್ಪನಾ ಲೋಕ ಅನಾವರಣಕ್ಕೆ ಬಂತು ತಂತ್ರಾಂಶ]

Brain implant helps a paralyzed woman communicate at home

ಹಲವು ವರ್ಷಗಳಿಂದ ಮಿದುಳು ಕಸಿ ಶಸ್ತ್ರಚಿಕಿತ್ಸೆ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಇದೇ ಮೊದಲ ಬಾರಿಗೆ ಈ ಮಹಿಳೆಗೆ ಮಾಡಿರುವ ಮಿದುಳು ಕಸಿ ಯಶಸ್ವಿಯಾಗಿದೆ.

ಮಹಿಳೆಗೆ ನೀಡಿರುವ ಶಸ್ತ್ರ ಚಿಕಿತ್ಸೆ ಕುರಿತು 'ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್' ಪತ್ರಿಕೆ ಸಂಪೂರ್ಣವಾಗಿ ವರದಿ ಮಾಡಿದೆ.

ಎಲೆಕ್ಟ್ರೋ ಕೊರ್ಟಿಕೋ ಗ್ರಾಫಿಕ್ ಎಂಬ ಪರಿಕರವೊಂದನ್ನು ಮಹಿಳೆಯ ಮಿದುಳಿಗೆ ಅಳವಡಿಸಲಾಗಿದ್ದು, ಈ ಪರಿಕರದ ಎಲೆಕ್ಟ್ರೋ ಕೋಡ್ ಗಳು ಮಹಿಳೆಯ ಬಲಗೈನ ಸ್ನಾಯುಗಳನ್ನು ಪ್ರಚೋದನೆಗೊಳಿಸುತ್ತವೆ. ಇದರಿಂದ ಮಾಹಿತಿಯನ್ನು ಪ್ರಸಾರ ಮಾಡಲು ಮತ್ತು ಸಂವಹನ ನಡೆಸಲು ಮಹಿಳೆಯ ಹೃದಯ ಭಾಗದಲ್ಲಿ ಅಳವಡಿಸಿರುವ ಮತ್ತೊಂದು ಪರಿಕರವನ್ನು ತಲುಪುತ್ತವೆ.

ಮಹಿಳೆಯ ದೇಹದ ಹೊರಭಾಗದಲ್ಲಿ ಮತ್ತೊಂದು ವೈರ್ ಲೆಸ್ ರಿಸೀವರ್ ಅನ್ನು ಅಳವಡಿಸಲಾಗಿದ್ದು, ಇದು ದೇಹದೊಳಗೆ ಅಳವಡಿಸಿರುವ ಪರಿಕರಗಳಿಂದ ಬರುವ ಸಂಜ್ಞೆಗಳನ್ನು ಮಾಹಿತಿ ರೂಪಕ್ಕೆ ಪರಿವರ್ತನೆ ಮಾಡುತ್ತದೆ.

ಇದಕ್ಕೂ ಮುನ್ನ ಮಹಿಳೆ ತನ್ನ ಚೇರ್ ಗೆ ಅಳವಡಿಸಿರುವ ಟ್ಯಾಬ್ಲೆಟ್ ನಲ್ಲಿ ಈ ಬಗ್ಗೆ ಮಾಹಿತಿ ಪ್ರಸಾರಿಸಲು ಶಕ್ತವಾಗುವಂತೆ ಮಿದುಳನ್ನು ಪ್ರೇರೇಪಿಸಬೇಕು. ಈ ಕ್ರಮದಿಂದ ಮಹಿಳೆ ಕೇವಲ ತನ್ನ ಬಲಗೈಯನ್ನು ಅಲುಗಾಡಿಸಲು ಯೋಚಿಸಿದರೆ ಸಾಕು ಮಿದುಳಿಗೆ ಮಾಹಿತಿ ರವಾನೆಯಾಗುತ್ತದೆ. ರವಾನೆಯಾದ ಮಾಹಿತಿ ಟ್ಯಾಬ್ಲೆಟ್ ನಲ್ಲಿ ಅಕ್ಷರ ರೂಪದಲ್ಲಿ ಮೂಡುತ್ತದೆ.

ಆದರೆ ಪ್ರಸ್ತುತ ಮಹಿಳೆಗೆ ಅಳವಡಿಸಿರುವ ತಂತ್ರಜ್ಞಾನ ನಿಧಾನಗತಿಯದ್ದಾಗಿದ್ದು, ಒಂದು ಅಕ್ಷರವನ್ನು ನಮೂದಿಸಬೇಕೆಂದರೂ ಕನಿಷ್ಠ 20 ಸೆಕೆಂಡುಗಳ ಕಾಲಾವಕಾಶ ಹಿಡಿಸುತ್ತಿದೆ.

ಈ ಪರಿಕರದ ತಂತ್ರಜ್ಞಾನವನ್ನು ಮತ್ತಷ್ಟು ವಿಸ್ತರಿಸುವ ಅವಶ್ಯಕತೆ ಇದ್ದು, ಇದರಿಂದ ಮಹಿಳೆಯು ಟಿವಿ ವೀಕ್ಷಣೆಗೆ, ಸಾಧ್ಯವಾಗುವಂತೆ ಮಾಡಬಹುದಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಳೆ ನನ್ನ ಚಿಕ್ಕಪುಟ್ಟ ಕೆಲಸಗಳನ್ನು ಸೂಚಿಸಲು ಸಶಕ್ತಳಾಗಿದ್ದೇನೆ, ನನ್ನ ವ್ಹೀಲ್ ಚೇರ್ ಅನ್ನು ನಾನೇ ಚಲಾಯಿಸುವಷ್ಟು ಸಮರ್ಥಳಾಗಬೇಕು ಎಂಬುದು ನನ್ನ ಬಯಕೆ ಎಂದು ಮಹಿಳೆ ತಿಳಿಸಿದ್ದಾರೆ.

English summary
A 58-year-old woman left paralyzed by amyotrophic lateral sclerosis (ALS, also known as Lou Gehrig's disease) has now become the first patient to use a brain-computer interface to restore some of her day-to-day functions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X