ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕ ಬಸ್ಸಿನ ಕೊನೆಯ ಸೀಟಿನಲ್ಲಿ ಮಲಗಿದ್ದನ್ನು ಯಾರೂ ನೋಡಿಯೇ ಇರಲಿಲ್ಲ

|
Google Oneindia Kannada News

ದುಬೈ, ಜೂನ್ 16: ಶಾಲಾ ಬಸ್ಸಿನಲ್ಲಿ ನಿದ್ರೆಗೆ ಜಾರಿದ್ದ ಬಾಲಕ ಡ್ರೈವರ್ ಕಣ್ತಪ್ಪಿನಿಂದಾಗಿ ಶಾಶ್ವತವಾಗಿ ನಿದ್ರೆಗೆ ಜಾರಿದ್ದಾನೆ.

ಬಾಲಕನನ್ನು ಮೊಹಮ್ಮದ್ ಫರ್ಹಾನ್ ಫೈಸಲ್ ಎಂದು ಗುರುತಿಸಲಾಗಿದೆ. ಅಲ್‌ ಖೋಜ್‌ನ ಇಸ್ಲಾಮಿಕ್ ಸೆಂಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ನಾನು ಓದಬೇಕಪ್ಪಾ..ಅಂಗಲಾಚಿದರೂ ಮಗಳಿಗೆ ಚಾಕುವಿನಿಂದ ಇರಿದ ತಂದೆ ನಾನು ಓದಬೇಕಪ್ಪಾ..ಅಂಗಲಾಚಿದರೂ ಮಗಳಿಗೆ ಚಾಕುವಿನಿಂದ ಇರಿದ ತಂದೆ

ಶಾಲಾ ಬಸ್‌ನಲ್ಲಿ ನಿದ್ದೆ ಹೋಗಿದ್ದ, ಎಲ್ಲಾ ಮಕ್ಕಳು ಇಳಿದು ಹೋಗಿದ್ದರು ಆತನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದ ರಿಂದ ಯಾರಿಗೂ ತಿಳಿಯಲಿಲ್ಲ, ಬಸ್‌ ಬಾಗಿಲು ಹಾಕಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

Boy dies in School bus in Dubai

ಸಾವಿಗೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ದುಬೈನಲ್ಲಿ ಇಂತಹ ಘಟನೆಗಳು ನಡೆಯುವುದು ಅತಿ ವಿರಳ, 2014ರಲ್ಲಿ ಅಬುದಬಿಯಲ್ಲಿ ಬಾಲಕನೊಬ್ಬ ಬಸ್ಸಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದ. ಬಸ್‌ನಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಗಮನಿಸಬೇಕಿದೆ. ಮೃತ ಬಾಲಕನ ಕುಟುಂಬಕ್ಕೆ 19 ಲಕ್ಷ ರೂ ನೀಡಿದ್ದಾರೆ.

ಶಾಲೆಯ ಬಸ್ಸಿನ ಕೊನೆಯ ಸೀಟಿನಲ್ಲಿ ಬಾಲಕ ಕುಳಿತಿದ್ದ ಹಾಗೆಯೇ ನಿದ್ರೆಗೆ ಜಾರಿದ್ದ, ಅಕ್ಕಪಕ್ಕದಲ್ಲಿ ಯಾವ ಮಕ್ಕಳೂ ಕುಳಿತುಕೊಳ್ಳದ ಕಾರಣ ಯಾರಿಗೂ ಆತ ಇಳಿದಿರದೇ ಇರುವುದು ತಿಳಿಯಲೇ ಇಲ್ಲ.

ಡ್ರೈವರ್ ಕೂಡ ತಮ್ಮ ಕೆಲಸ ಮುಗಿಸಿ ಮಕ್ಕಳನ್ನು ಮನೆಗಳಿಗೆ ಬಿಟ್ಟು ತಮ್ಮ ಮನೆಗೆ ಹೋಗಿದ್ದರು. ಪೋಷಕರು ಆತಂಕ ವ್ಯಕ್ತಪಡಿಸಿ ವಿಚಾರಿಸಿದಾಗ ಮಗು ಬಸ್ಸಿನಲ್ಲೇ ಇರುವುದು ತಿಳಿದುಬಣದಿದೆ. ಬಾಲಕ ಭಾರತ ಮೂಲದವನಾಗಿದ್ದಾನೆ.

English summary
Boy dies in School bus in Dubai, after he was left behind alone in a bus for several hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X