ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ : ಮುಗ್ಧ ಮಗುವಿನ ಮಾನವೀಯತೆ

|
Google Oneindia Kannada News

ಪ್ರಕೃತಿಯ ಅನಂತ ಶಕ್ತಿಯೆದುರು ಮನುಷ್ಯ ತೃಣಸಮಾನ ಎಂಬುದಕ್ಕೆ ಉದಾಹರಣೆಯಾಗಿ ಜಗತ್ತಿನಲ್ಲಿ ಹಲವು ನೈಸರ್ಗಿಕ ವಿಕೋಪಗಳು ನಡೆದಿವೆ. ನ.12 ರಂದು ಇರಾನ್, ಇರಾಕ್ ಕಡಿಯಲ್ಲಿ ನಡೆದ ಭೂಕಂಪವೂ ಅದಕ್ಕೊಂದು ತಾಜಾ ನಿದರ್ಶನ. 540 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಈ ಭೀಕರ, ಹೃದಯವಿದ್ರಾವಕ ಭೂಕಂಪದಲ್ಲಿ ಬಂಧುಗಳನ್ನು ಕಳೆದುಕೊಂಡ ಅನಾಥರೆಷ್ಟೋ, ಮನೆ ಕಳೆದುಕೊಂಡ ನಿರಾಶ್ರಿತರೆಷ್ಟೋ!

ವೈರಲ್ ವಿಡಿಯೋ: ಇರಾನ್-ಇರಾಕ್ ಭೀಕರ ಭೂಕಂಪದ ಎದೆನಡುಗಿಸುವ ದೃಶ್ಯವೈರಲ್ ವಿಡಿಯೋ: ಇರಾನ್-ಇರಾಕ್ ಭೀಕರ ಭೂಕಂಪದ ಎದೆನಡುಗಿಸುವ ದೃಶ್ಯ

ಎಲ್ಲೆಲ್ಲೂ ಹೆಣಗಳು, ಮಕಾಡೆ ಮಲಗಿದ ಕಟ್ಟಡಗಳು, ಮಣ್ಣಿನ ರಾಶಿ, ಬಿಕ್ಕುತ್ತಿರುವ ಜನರು... ಈ ಎಲ್ಲದರ ನಡುವಲ್ಲಿ ಮಾನವೀಯತೆಯ ಇರುವನ್ನು ಸಾಬೀತುಪಡಿಸುವ ಪುಟ್ಟ ದೃಶ್ಯವೊಂದದು ಆ ಸ್ಮಶಾನಸದೃಶ ಭೂಮಿಯಲ್ಲೂ ಒಂದು ಭರವಸೆಯನ್ನು ಮೂಡಿಸಿತು!

ಪುಟ್ಟ ಕಂದನೊಬ್ಬ ತನ್ನಷ್ಟೇ ಪುಟ್ಟ ಮಗುವೊಂದನ್ನು ಕೈಹಿಡಿದು ಕರೆತಂದು, ಸಂತ್ರಸ್ತರಿಗೆ ಆಹಾರ ಹಂಚುತ್ತಿರುವ ಸಂಘಟನೆಯ ವ್ಯಕ್ತಿಯೊಬ್ಬರ ಬಳಿಬಂದು, 'ನೀವು ನನ್ನ ಸ್ನೇಹಿತೆಗೆ ಊಟವನ್ನೇ ಕೊಟ್ಟಿಲ್ಲ' ಎಂದು ಮುಗ್ಧವಾಗಿ ಹೇಳುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Boy asking food for her friend: A viral video of Iraq-Iran earthquake

ಸ್ವತಃ ತಾನೂ ಉಪವಾಸವಿದ್ದರೂ ತನ್ನಂತೆ ಉಪವಾಸವಿರುವ ಮತ್ತೊಂದುದ ಮಗುವಿಗೆ ಆಹಾರ ನೀಡುವಂತೆ ಕೇಳುವ ಆ ಪುಟ್ಟ ಕಂದ ಬಹುಶಃ ಎಲ್ಲರಿಗಿಂತ ಪ್ರಬುದ್ಧ! ತನ್ನ ಸ್ನೇಹಿತೆಗೆ ಆಹಾರ ಸಿಕ್ಕುತ್ತಿದ್ದಂತೆಯೇ ಸಂಭ್ರಮಿಸುವ ಆತನ ಕಣ್ಣುಗಳನ್ನು ಕಂಡರೆ ಅವ್ಯಕ್ತ ಭಾವವೊಂದು ಮನಸ್ಸನ್ನು ಸುತ್ತುತ್ತದೆ. ಸಾದೇಘ್ ಘೋರ್ಬಾನಿ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ ಈ ವಿಡಿಯೋವನ್ನು 45 ಸಾವಿರಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದಾರೆ.

English summary
Video of a little boy, who was asking food to his friend becomes viral in twitter now. The boy was rescued in an earthquake, which occured on Nov 12th in Iran and Iraq border. 7.3 magnitude earthquake kills more than 540 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X