ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ'ಬಾಂಬ್ ಸೈಕ್ಲೋನ್' ಅಬ್ಬರ: 1,339 ವಿಮಾನಗಳ ಹಾರಾಟ ಸ್ಥಗಿತ

|
Google Oneindia Kannada News

ಡೆನ್ವರ್, ಮಾರ್ಚ್ 14: ಅಮೆರಿಕದಲ್ಲಿ ಚಳಿಗಾಲದ ದೈತ್ಯ'ಬಾಂಬ್ ಸೈಕ್ಲೋನ್' ಅಪ್ಪಳಿಸಿದ್ದು, 1339ಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಅಮೆರಿಕದ ಪೂರ್ವ ಕರಾವಳಿಗೆ ಬಾಂಬ್ ಸೈಕ್ಲೋನ್ ಅಪ್ಪಳಿಸಿದ್ದು, ಭಾರಿ ಹಿಮಪಾತ ಹಾಗೂ ತಾಪಮಾನದ ತೀವ್ರ ಇಳಿಕೆಯಿಂದ ಉಂಟಾಗಿರುವ ಭಯಂಕರ ಚಳಿಗೆ ಈ ಭಾಗದಲ್ಲಿ ಪ್ರಯಾಣ ಸಂಪೂರ್ಣ ಅಸಾಧ್ಯವಾಗಿಬಿಟ್ಟಿದೆ.

ಹಿಮಗಳಿಂದಾವೃತವಾದ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು ಕಷ್ಟವಾಗಿದೆ. ಉತ್ತರ ನ್ಯೂಯಾರ್ಕ್‌ ನಗರದಲ್ಲಿ ತಾಪಮಾನ ಅದೆಷ್ಟು ಇಳಿಕೆ ಕಂಡಿದೆ ಎಂದರೆ ನಯಾಗರ ಫಾಲ್ಸ್ ಕೂಡ ಹೆಪ್ಪುಗಟ್ಟಿದೆ.

Bomb Cyclone Brings Snow, High Winds To US

ಕೊಲರಾಡೊದಲ್ಲಿ ರಾಜ್ಯಪಾಲ ಜೇರ್ಡ್ ಪೊಲೀಸ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ದಟ್ಟ ಹಿಪತಾದಿಂದಾಗಿ ಟ್ರಾಫಿಕ್ ಜಾಮ್ ಆಗಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು ಹೈ ಅಲರ್ಟ್ ಘೋಷಿಸಲಾಗಿದೆ. ಗಾಳಿಯು 70 ಮೈಲಿ ವೇಗದಲ್ಲಿ ಬೀಸುತ್ತಿದೆ.

English summary
late-winter blizzard slammed U.S. Rocky Mountain and Plains states on Wednesday, unleashing a "bomb cyclone" of high winds and drifting snow that stranded motorists, canceled more than 1,300 airline flights and was blamed for the death of a Colorado state trooper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X