ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ ಬ್ಯಾಂಕ್‌ನಲ್ಲಿ ಬಾಂಬ್ ಸ್ಫೋಟ, 20 ಸಾವು

By Kiran B Hegde
|
Google Oneindia Kannada News

ಅಫ್ಘಾನಿಸ್ತಾನ, ಡಿ. 17: ಇಲ್ಲಿಯ ಹೆಲ್ಮಂಡ್ ನಗರದ ಕಾಬೂಲ್ ಬ್ಯಾಂಕ್‌ನೊಳಗೆ ತಾಲಿಬಾನ್ ಆತ್ಮಾಹುತಿ ದಳದ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ.

ವೇತನ ಪಡೆಯಲೆಂದು ಬ್ಯಾಂಕ್ ನೊಳಗೆ ಯೋಧರು ತೆರಳಿದ್ದಾಗ ಉಗ್ರರು ಈ ಬಾಂಬ್ ಸ್ಫೋಟಿಸಿದ್ದಾರೆ. 20 ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನೂ ನಾಲ್ವರು ಉಗ್ರರು ಬ್ಯಾಂಕ್‌ನೊಳಗೆ ಅಡಗಿರುವ ಶಂಕೆ ಇದೆ. [ಪಾಕಿಸ್ತಾನದಲ್ಲಿ ನೂರಾರು ಮಕ್ಕಳ ಬಲಿ ಪಡೆದ ತಾಲಿಬಾನ್]

terror

ಅಫ್ಘಾನಿಸ್ತಾನದ ಯೋಧರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಯೋಧರು ಬ್ಯಾಂಕ್‌ಗೆ ವೇತನ ಪಡೆಯಲು ಬರಲಿರುವ ಸುದ್ದಿ ತಿಳಿದ ಉಗ್ರರು ಅವರಿಗಾಗಿ ಬ್ಯಾಂಕ್‌ನೊಳಗೆ ಕಾಯುತ್ತಿದ್ದರು. ಯೋಧರು ಒಳ ಬಂದ ತಕ್ಷಣ ಬ್ಯಾಂಕ್‌ ಬಾಗಿಲು ಮುಚ್ಚಿ ಮನಬಂದಂತೆ ಗುಂಡು ಹಾರಿಸಿದರು. ನಂತರ ಬಾಂಬ್ ಸ್ಫೋಟಿಸಿದರು.

ಯೋಧರೇ ತಾಲಿಬಾನ್ ಉಗ್ರರ ಟಾರ್ಗೆಟ್ : ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಎರಡೂ ಇಸ್ಲಾಂ ಮೂಲಭೂತವಾದಿ ರಾಷ್ಟ್ರಗಳೇ. ಆದರೆ, ತಾಲಿಬಾನ್ ಹಾಗೂ ಅಲ್ ಖೈದಾದಂತಹ ಪಾಶವೀ ಮನಸ್ಥಿತಿಯ ಉಗ್ರ ಸಂಘಟನೆಗಳ ಕೈಗೆ ದೇಶ ಒಪ್ಪಿಸಲು ಇಬ್ಬರೂ ತಯಾರಿಲ್ಲ. ಆದ್ದರಿಂದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಮ್ಮ ಸಾರ್ವಭೌಮತ್ವ ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸುತ್ತಿವೆ. [ಪಾಲಕರ ಮೇಲಿನ ಕೋಪಕ್ಕೆ ಮಕ್ಕಳ ಕೊಂದರಂತೆ]

ತಮ್ಮ ನೇತಾರರ ಆದೇಶದಂತೆ ಉಗ್ರರ ವಿರುದ್ಧ ಯೋಧರು ಹೋರಾಡುತ್ತಿದ್ದಾರೆ. ಇಲ್ಲಿಯವರೆಗೆ ದೇಶ ಹಾಗೂ ಸೈನ್ಯವನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ ಉಗ್ರರು ಈಗ ಸೈನಿಕರ ಕುಟುಂಬವನ್ನೂ ಹತ್ಯೆಗೈಯುತ್ತಿದೆ.

English summary
Taliban militants have blasted bomb in Kabool bank in Helmand city of Afghanistan. Around 20 killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X