ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಅಫ್ಘಾನ್ ಶಿಯಾ ಮಸೀದಿಯಲ್ಲಿ ಸ್ಫೋಟಕ್ಕೆ 7 ಸಾವು, 15 ಮಂದಿ ಗಾಯ

|
Google Oneindia Kannada News

ಕಂದಹಾರ್, ಅಕ್ಟೋಬರ್ 15: ಅಫ್ಘಾನಿಸ್ತಾನದ ಕಂದಹಾರ್ ನಗರದ ಶಿಯಾ ಮಸೀದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 7 ಮಂದಿ ಪ್ರಾಣ ಬಿಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ ಎಂದು ಗೊತ್ತಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಮಸೀದಿ ಮೇಲೆ ನಡೆದ ಎರಡನೇ ದಾಳಿಯಿದೆ ಎಂದು ವೈದ್ಯರೊಬ್ಬರು ಎಎಫ್ ಪಿಗೆ ತಿಳಿಸಿದ್ದಾರೆ ಎಂದು ವರದಿ ಬಂದಿದೆ.

"ಬಾಂಬ್ ಸ್ಫೋಟದಲ್ಲಿ ಈವರೆಗೂ ಏಳು ಮಂದಿ ಮೃತಪಟ್ಟಿದ್ದು, ಗಾಯಗೊಂಡ 13 ಜನರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ," ಎಂದು ದಕ್ಷಿಣ ನಗರದ ಕೇಂದ್ರ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸೋಮನಾಥ ವಿಗ್ರಹ ಧ್ವಂಸಗೊಳಿಸಿದ ತಾಲಿಬಾನ್ಅಫ್ಘಾನಿಸ್ತಾನದಲ್ಲಿ ಸೋಮನಾಥ ವಿಗ್ರಹ ಧ್ವಂಸಗೊಳಿಸಿದ ತಾಲಿಬಾನ್

ಶಿಯಾ ಮಸೀದಿಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ಪತ್ತೆ ಮಾಡಲಾಗುವುದು ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಅಧಿಕಾರಿಗಳು ಸ್ಫೋಟದ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಕರಿ ಸಯೀದ್ ಖೋಸ್ತಿ ಹೇಳಿದರು. ಈ ಮಧ್ಯೆ ಇಮಾಮ್ ಬರ್ಗಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಭಾರಿ ಸಂಖ್ಯೆಯ ಸಾವು-ನೋವು ಆಗಿದ್ದು, ಅಂಕಿ ಸಂಖ್ಯೆ ಬಗ್ಗೆ ಈಗಲೇ ದೃಢವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಾಂತೀಯ ಮಂಡಳಿಯ ಮಾಜಿ ಸದಸ್ಯ ನೆಮತುಲ್ಲಾ ವಫಾ ಹೇಳಿದ್ದಾರೆ.

 Bomb Blast in Afghanistans Kandahar Shia Mosque; 7 Dead, 15 Peoples Injured

ಯಾವುದೇ ಸಂಘಟನೆ ದಾಳಿ ಹೊಣೆ ಹೊತ್ತಿಲ್ಲ:

ಕಂದಹಾರ್ ನಗರದ ಶಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ದಿನವೇ ನಡೆಸಿದ ಬಾಂಬ್ ಸ್ಫೋಟದ ಘಟನೆ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾವುದೇ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದು ಬಂದಿದೆ.

ಈ ಹಿಂದೆ ಅಕ್ಟೋಬರ್ 8 ರಂದು, ಉತ್ತರ ಅಫ್ಘಾನಿಸ್ತಾನದಲ್ಲಿ ಮಸೀದಿ ಸ್ಫೋಟದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡಿದ್ದರು. ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದ ಶಂಕೆ ವ್ಯಕ್ತವಾಗಿತ್ತು. ಆತ್ಮಹತ್ಯಾ ಬಾಂಬರ್ ಅನ್ನು ಬಳಸಿಕೊಂಡು ಈ ದಾಳಿ ನಡೆಸಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು.

English summary
Bomb Blast in Afghanistan's Kandahar Shia Mosque; 7 Dead, 15 Peoples Injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X