ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವ ಅಫ್ಘಾನಿಸ್ತಾನದಲ್ಲಿ ಬಸ್ ಮೇಲೆ ಬಾಂಬ್ ದಾಳಿ; ಕನಿಷ್ಠ ಹತ್ತು ಮಂದಿ ಸಾವು

|
Google Oneindia Kannada News

ಕಾಬೂಲ್ (ಅಪ್ಘಾನಿಸ್ತಾನ್), ಅಕ್ಟೋಬರ್ 7: ಸೇನೆಗೆ ನೇಮಕರಾದವರನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್ ನಲ್ಲಿ ಸೋಮವಾರ ಬಾಂಬ್ ದಾಳಿ ನಡೆದು, ಕನಿಷ್ಠ ಹತ್ತು ಮಂದಿ ಮೃತಪಟ್ಟಿದ್ದಾರೆ ಮತ್ತು ಇಪ್ಪತ್ತೇಳು ಮಂದಿಗೆ ಗಾಯಗಳಾಗಿವೆ. ಬೈಕ್ ನಲ್ಲಿ ಬಾಂಬ್ ಇಡಲಾಗಿತ್ತು. ಬಸ್ ಚಲಿಸುವಾಗ ಅದನ್ನು ಸ್ಫೋಟಿಸಲಾಗಿದೆ ಎಂದು ನಂಗರ್ ಹಾರ್ ರಾಜ್ಯಪಾಲರ ವಕ್ತಾರ ತಿಳಿಸಿದ್ದಾರೆ.

ಒಂದು ಮಗು ಸೇರಿದಂತೆ ಹತ್ತು ಮಂದಿ ನಾಗರಿಕರು ಹತ್ಯೆಯಾಗಿದ್ದಾರೆ ಹಾಗೂ ಇಪ್ಪತ್ತೇಳು ಮಂದಿಗೆ ಗಾಯಗಳಾಗಿವೆ. ಸೇನೆಗೆ ನೇಮಕರಾದವರ ಪೈಕಿ ಎಷ್ಟು ಮಂದಿಗೆ ಗಾಯಗಳಾಗಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅಥವಾ ಅವರನ್ನು ನಾಗರಿಕರೆಂದು ಲೆಕ್ಕ ಹಾಕಲಾಗಿದೆಯಾ ಎಂಬ ಬಗ್ಗೆ ಮಾಹಿತಿ ಇಲ್ಲ.

ಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ಸಮಾವೇಶದಲ್ಲಿ ಸ್ಪೋಟ, 24 ಸಾವುಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ಸಮಾವೇಶದಲ್ಲಿ ಸ್ಪೋಟ, 24 ಸಾವು

ಸದ್ಯಕ್ಕೆ ಯಾವುದೇ ಉಗ್ರಗಾಮಿ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಜಲಾಲಾಬಾದ್ ನಲ್ಲಿ ಪದೇ ಪದೇ ದಾಳಿಯನ್ನು ನಡೆಸುತ್ತಿರುವವರು ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಗುಂಪಿನವರು.

Bomb Attack

ಅಮೆರಿಕದ ಮೇಲೆ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನದಲ್ಲಿ ಹದಿನೆಂಟು ವರ್ಷಗಳ ಹಿಂದೆ ಇದೇ ದಿನದಂದು ಉಗ್ರರ ವಿರುದ್ಧ ಯು. ಎಸ್. ಯುದ್ಧ ಆರಂಭಿಸಿತ್ತು.

English summary
Jalalabad, Afghanistan eastern part witnessed bomb attack on bus on Monday. At least 10 people died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X