ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಮಾಸ್ಕಸ್‌ನಲ್ಲಿ ಸೇನಾ ಬಸ್ ಮೇಲೆ ಬಾಂಬ್ ದಾಳಿ: 14 ಮಂದಿ ಸಾವು

|
Google Oneindia Kannada News

ಡಮಾಸ್ಕಸ್, ಅಕ್ಟೋಬರ್ 20: ಡಮಾಸ್ಕಸ್‌ನಲ್ಲಿ ಸೇನಾ ಬಸ್‌ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಸಿರಿಯಾ ರಾಜಧಾನಿಯಲ್ಲಿ ನಾಲ್ಕು ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಬುಧವಾರ ಬೆಳಿಗ್ಗೆ ಎರಡು ಸ್ಫೋಟಕ ಸಾಧನಗಳನ್ನು ಬಳಸಿ ಈ ದಾಳಿ ಎಸಗಲಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಸನಾ ತಿಳಿಸಿದೆ. ಹಫೇಜ್ ಅಲ್ ಅಸ್ಸಾದ್ ಸೇತುವೆಯಲ್ಲಿ ಮೂರನೇ ಸ್ಫೋಟಕ ಕೂಡ ಪತ್ತೆಯಾಗಿತ್ತು. ಆದರೆ ಅದನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ.

ಬಸ್‌ನ ಛಿದ್ರಗೊಂಡ ಭಾಗಗಳನ್ನು ಸಿರಿಯಾ ಸುದ್ದಿ ವಾಹಿನಿ ತೋರಿಸಿದೆ. ರಕ್ಷಣಾ ಕಾರ್ಯಕರ್ತರು ಹರಡಿ ಬಿದ್ದಿದ್ದ ಮೃತದೇಹಗಳ ಅಂಗಗಳನ್ನು ಆಯ್ದುಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವರ್ಷ ಸಿರಿಯಾ ಸೇನೆ ಹಾಗೂ ನಾಗರಿಕರನ್ನು ಗುರಿಯಾಗಿಸಿ ಅನೇಕ ದಾಳಿಗಳು ನಡೆದಿವೆ. ಮುಖ್ಯವಾಗಿ ಸೇನಾ ವಾಹನಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಐಸಿಸ್ ಉಗ್ರರು ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ಶಂಕೆ ವ್ಯಕ್ತವಾಗಿದೆ. ಐಸಿಸ್ ಸಂಘಟನೆ ಈಗಲೂ ಅನೇಕ ಭಾಗಗಳಲ್ಲಿ ಸಕ್ರಿಯವಾಗಿದೆ.

ಸಿರಿಯನ್ ಯುದ್ಧ ಹೇಗೆ ಆರಂಭವಾಯಿತು?

ಸಿರಿಯನ್ ಯುದ್ಧ ಹೇಗೆ ಆರಂಭವಾಯಿತು?

10 ವರ್ಷಗಳ ಹಿಂದೆ ಸಿರಿಯಾದ ಅಧ್ಯಕ್ಷರ ವಿರುದ್ಧ ನಡೆದ ಶಾಂತಿಯುತ ದಂಗೆಯು ಪೂರ್ಣ ಪ್ರಮಾಣದ ಅಂತರ್ಯುದ್ಧವಾಗಿ ಬದಲಾಯಿದೆ. ಈ ಸಂಘರ್ಷದಿಂದಾಗಿ ಈವರೆಗೆ 3,80,000 ಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದಾರೆ. ಜೊತೆಗೆ ಕೆಲ ನಗರಗಳನ್ನೇ ಧ್ವಂಸಗೊಳಿಸಲಾಗಿದೆ. ಹಲವಾರು ಜನ ಮನೆ ತೊರೆದಿದ್ದಾರೆ.

ಅಧ್ಯಕ್ಷನ ವಿರುದ್ಧ ದೂರು

ಅಧ್ಯಕ್ಷನ ವಿರುದ್ಧ ದೂರು

ಸಂಘರ್ಷ ಆರಂಭವಾಗುವ ಮುನ್ನ ಅನೇಕ ಸಿರಿಯನ್ನರಿಗೆ ನಿರುದ್ಯೋಗಸಮಸ್ಯೆ, ಭ್ರಷ್ಟಾಚಾರ ಮತ್ತು ರಾಜಕೀಯ ಸ್ವಾತಂತ್ರ್ಯದ ಕೊರತೆ ಎದುರಾಗಿತ್ತು. ಹೀಗಾಗಿ ಅಧ್ಯಕ್ಷ ಬಶರ್ ಅಲ್-ಅಸಾದ್ ಅವರ ಬಗ್ಗೆ ದೂರು ನೀಡುತ್ತಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮಾರ್ಚ್ 2011 ರಲ್ಲಿ ದಕ್ಷಿಣದ ನಗರವಾದ ಡೆರಾದಲ್ಲಿ ಪ್ರಜಾಪ್ರಭುತ್ವ ಪರ ಪ್ರದರ್ಶನಗಳು ಭುಗಿಲೆದ್ದವು. ದಮನಕಾರಿ ಆಡಳಿತಗಾರರ ವಿರುದ್ಧ ನೆರೆಯ ದೇಶಗಳಲ್ಲಿ ನಡೆದ ದಂಗೆಗಳಿಂದ ಸ್ಫೂರ್ತಿ ಪಡೆದ ಸಿರಿಯನ್ನರು ಭಿನ್ನಮತವನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಸಿರಿಯನ್ ಸರ್ಕಾರ ತನ್ನ ಮಾರಕ ಬಲವನ್ನು ಬಳಸಿದಾಗ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ದೇಶಾದ್ಯಂತ ಸ್ಫೋಟಗೊಂಡವು.

ಅಸಾದ್ ನಾಶಕ್ಕೆ ಪಣ

ಅಸಾದ್ ನಾಶಕ್ಕೆ ಪಣ

ಹೀಗೆ ಅಶಾಂತಿ ಹರಡಿ ಸಾವು ನೋವುಗಳು ತೀವ್ರಗೊಂಡವು. ಅಸ್ಸಾದ್ ಪ್ರತಿಪಕ್ಷದ ಬೆಂಬಲಿಗರು ಮೊದಲು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ನಂತರ ತಮ್ಮ ಪ್ರದೇಶಗಳನ್ನು ಭದ್ರತಾ ಪಡೆಗಳಿಂದ ಮುಕ್ತಗೊಳಿಸಲು ಶಸ್ತ್ರಾಸ್ತ್ರಗಳ ಪ್ರಯೋಗಕ್ಕೆ ಮುಂದಾದರು. ಅಸ್ಸಾದ್ ಅವರನ್ನು ನಾಶಮಾಡಲು ಪ್ರತಿಜ್ಞೆ ಮಾಡಿದರು.

ಈ ಹಿಂಸಾಚಾರ ವೇಗವಾಗಿ ಹೆಚ್ಚಾಗುತ್ತಿದ್ದಂತೆ ದೇಶದಲ್ಲಿ ಅಂತರ್ಯುದ್ಧಕ್ಕೆ ಇಳಿಯಿತು. ನೂರಾರು ಬಂಡುಕೋರ ಗುಂಪುಗಳು ಹುಟ್ಟಿಕೊಂಡವು. ಹೀಗೆ ಅಸಾದ್ ಪರವಾಗಿ ಮತ್ತು ವಿರುದ್ಧವಾಗಿ ಹೆಚ್ಚಿನ ಸಂಘರ್ಷವಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ವಿದೇಶಿ ಶಕ್ತಿಗಳು ಸಂಘರ್ಷದ ಪಕ್ಷಗಳನ್ನು ತಮ್ಮತ್ತ ಸೆಳೆಯಲು ಪ್ರಾರಂಭಿಸಿದವು. ಅದಕ್ಕೆ ಬೆಂಬಲವಾಗಿ ಹಣ, ಶಸ್ತ್ರಾಸ್ತ್ರ ಮತ್ತು ಹೋರಾಟಗಾರರನ್ನು ಕಳುಹಿಸಿದವು. ಹೀಗೆ ಉಗ್ರ ಜಿಹಾದಿ ಸಂಘಟನೆಗಳನ್ನು ತಮ್ಮದೇ ಉದ್ದೇಶಗಳೊಂದಿಗೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪು ಮತ್ತು ಅಲ್-ಖೈದಾ ಮುಂತಾದವುಗಳನ್ನು ಉಲ್ಬಣಗೊಳಿಸಿತು.

ಸಾವು-ನೋವು

ಸಾವು-ನೋವು

ಸಿರಿಯಾದ ಕುರ್ದಿಗಳು ಸ್ವ-ಆಡಳಿತದ ಹಕ್ಕನ್ನು ಬಯಸುತ್ತಾರೆ ಆದರೆ ಅಸ್ಸಾದ್ ಪಡೆಗಳೊಂದಿಗೆ ಹೋರಾಡಲು ಬಯಸುವುದಿಲ್ಲ. ಆದರೂ ಈ ಸಂಘರ್ಷದಲ್ಲಿ 205,300 ಜನರು ಕಾಣೆಯಾಗಿರಬಹುದು ಅಥವಾ ಸಾವನ್ನಪ್ಪಿನ್ನಪ್ಪಿರಬಹುದು ಎಂದು ಹೇಳಲಾಗುತ್ತದೆ. ಜೊತೆಗೆ 88,000 ನಾಗರಿಕರು ಅಸಾದ್ ಸರ್ಕಾರಿ ನಡೆಸುತ್ತಿರುವ ಜೈಲುಗಳಲ್ಲಿ ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ. ಜೊತೆಗೆ UN ಮಕ್ಕಳ ಸಂಸ್ಥೆ ಯುನಿಸೆಫ್ ಪ್ರಕಾರ, ಸುಮಾರು 12,000 ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ.

English summary
A bomb attack on a military bus in central Damascus has killed 14 people, Syrian state media say.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X